KR Pete: ದೂಳುಪೇಟೆಯಾದ ಕೆ.ಆರ್‌.ಪೇಟೆ!


Team Udayavani, Aug 23, 2023, 3:52 PM IST

TDY-12

ಕೆ.ಆರ್‌.ಪೇಟೆ: ಮಂಡ್ಯ ಜಿಲ್ಲೆಯ ಲ್ಲಿಯೇ ಕೆ.ಆರ್‌.ಪೇಟೆ ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಕ್ಷೇತ್ರದ ಹಿಂದಿನ ಶಾಸಕರಾಗಿದ್ದ ಸಚಿವ ನಾರಾಯಣ ಗೌಡರ ವಿಶೇಷ ಪ್ರಯತ್ನದ ಫಲವಾಗಿ ನೂರಾರು ಕೋಟಿ ರೂ. ವಿಶೇಷ ಅನುದಾನವು ಪಟ್ಟಣದ ಅಭಿವೃದ್ಧಿಗೆ ಹರಿದು ಬಂದಿದ್ದರೂ ಪಟ್ಟಣದ ರಸ್ತೆಗಳು, ಚರಂಡಿಗಳು, ಕಲ್ವರ್ಟ್‌ಗಳು ಸೇರಿದಂತೆ ಒಳಚರಂಡಿ ಯೋಜನೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ.

ಪಟ್ಟಣವು ಅಭಿವೃದ್ಧಿಯ ಪಥದತ್ತ ಸಾಗದೇ, ಅಭಿವೃದ್ಧಿ ಕೆಲಸ-ಕಾರ್ಯಗಳು ಕುಂಟುತ್ತಾ ಆಮೆ ವೇಗದಲ್ಲಿ ಸಾಗಿರುವುದರಿಂದ ಕೆ.ಆರ್‌.ಪೇಟೆಯು ಧೂಳುಪೇಟೆಯಾಗಿ ಬದಲಾಗಿದ್ದು ರೋಗ- ರುಜಿನಗಳನ್ನು ಹರಡುವ ತಾಣವಾಗಿದೆ.

ಮಳೆ ಬಂದ್ರೆ ಕೆರೆಯಂತಾಗುವ ಬಸ್‌ ನಿಲ್ದಾಣ: ಸಣ್ಣ ಮಳೆಬಂದರೆ ಸಾಕು ಕೆರೆಯಾಗಿ ಬದಲಾಗುವ ಬಸ್‌ ನಿಲ್ದಾಣ, ತ್ಯಾಜ್ಯವು ತುಂಬಿ ಉಕ್ಕಿ ಹರಿಯುತ್ತಿರುವ ಒಳಚರಂಡಿ ಯೋಜನೆಯ ಮ್ಯಾನ್‌ ಹೋಲ್‌ಗ‌ಳು, ನಾಯಿಗಳಿಂದ ತುಂಬಿ ತುಳುಕುತ್ತಿರುವ ವಿವಿಧ ಬಡಾವಣೆಯ ಬೀದಿಗಳು. ಹಾಳು ಬಿದ್ದಿರುವ ಖಾಸಗಿ ಬಸ್‌ ನಿಲ್ದಾಣ, ಅರ್ಧಂಬರ್ಧ ಕಾಮಗಾರಿಯಿಂದಾಗಿ ದೂಳುಮಯವಾದ ರಸ್ತೆಗಳಿಂದ ಪಟ್ಟಣದ ಜನತೆ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ರೋಗ-ರುಜಿನಗಳಿಂದ ಬಳಲುತ್ತಿದ್ದಾರೆ.

ಪುರಸಭೆಗೆ ಹಿಡಿಶಾಪ:  ಕೆ.ಆರ್‌.ಪೇಟೆ ಪಟ್ಟಣದ ಪ್ರಮುಖವಾದ ಅಡ್ಡ ರಸ್ತೆಗಳಾಗಿರುವ ಹಳೇ ಕಿಕ್ಕೇರಿ ರಸ್ತೆ (ಡಾ.ಬಿ.ಆರ್‌.ಅಂಬೇಡ್ಕರ್‌) ಹಾಗೂ ಹೊಸ ಕಿಕ್ಕೇರಿ ರಸ್ತೆ (ಡಾ.ಪುನೀತ್‌ರಾಜ್‌ಕುಮಾರ್‌) ದೂಳುಮಯವಾದ ರಸ್ತೆಗಳಾಗಿ ಬದಲಾಗಿದ್ದು ಈ ಬಡಾವಣೆಯಲ್ಲಿ ವಾಸಮಾಡುತ್ತಿರುವ ನಿವಾಸಿಗಳು ಹಾಗೂ ಸಾರ್ವಜನಿಕರು ಪುರಸಭೆ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

6 ತಿಂಗಳು ಕಳೆದ್ರೂ ಪೂರ್ಣಗೊಳ್ಳದ ಕಾಮ ಗಾರಿ: ನಗರೋತ್ಥಾನ ಯೋಜನೆಯ ವಿಶೇಷ ಅನು ದಾನ 3 ಕೋಟಿ ಹಣದಲ್ಲಿ ನಡೆಯುತ್ತಿರುವ ಎರಡೂ ರಸ್ತೆಗಳ ಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಗುತ್ತಿಗೆದಾರ ಕಳಪೆ ಕೆಲಸ ನಡೆಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರೂ ಹೇಳುವವರು ಕೇಳುವವರು ಯಾರೂ ಇಲ್ಲದಂತಾ ಗಿದೆ. ಕಳೆದ ಫೆಬ್ರವರಿಯಲ್ಲಿ ಆರಂಭ ವಾದ ಕಾಮ ಗಾರಿಯು 6 ತಿಂಗಳು ಕಳೆಯುತ್ತಿ ದ್ದರೂ ಕಾಮಗಾರಿ ಸಂಪೂರ್ಣವಾಗುವ ಸೂಚನೆಯೇ ಕಾಣುತ್ತಿಲ್ಲ.

ಗುಂಡಿಮಯವಾದ ರಸ್ತೆಗಳು: ಕೆ.ಆರ್‌.ಪೇಟೆ ಪಟ್ಟಣದ ಪ್ರಮುಖ ಅಡ್ಡ ರಸ್ತೆಗಳಾಗಿರುವ ಹಳೇ ಮತ್ತು ಹೊಸ ಕಿಕ್ಕೇರಿ ರಸ್ತೆಗಳು ಸಂಪೂರ್ಣವಾಗಿ ಗುಂಡಿ ಬಿದ್ದು ಹಾಳಾಗಿರುವುದರಿಂದ ಗುಂಡಿ ಮಯ ವಾದ ರಸ್ತೆಗಳಲ್ಲಿ ವಾಹನಗಳು ಧೂಳೆಬ್ಬಿಸಿ ಕೊಂಡು ಓಡಾಡುತ್ತಿರುವುದರಿಂದ ಸಾರ್ವ ಜನಿಕರು ಹಾಗೂ ರಸ್ತೆ ಅಕ್ಕಪಕ್ಕದ ನಿವಾಸಿಗಳು ಅನಿವಾರ್ಯವಾಗಿ ಧೂಳು ಕುಡಿದು ಹಲವು ರೋಗ ಗಳಿಗೆ ತುತ್ತಾಗಿ ನರಳುತ್ತಿದ್ದಾರೆ. ಜನ ಸಾಮಾ ನ್ಯರ ಆರೋಗ್ಯದ ಜೊತೆ ಚೆಲ್ಲಾಟ ವಾಡಿ ಕೊಂಡು ಕಳಪೆ ಕಾಮಗಾರಿ ನಡೆಸಿ ಕೆಲಸ ಸಂಪೂ ರ್ಣ ಗೊಳಿಸದೇ ಬೇಜವಾಬ್ದಾರಿಯಿಂದ ವರ್ತಿ ಸುತ್ತಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬುದು ಪಟ್ಟಣದ ನಾಗರಿಕರ ಒತ್ತಾಯವಾಗಿದೆ.

ಪುರಸಭೆಯಲ್ಲಿ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ, ಮುಖ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದು, ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಕೂಡಾ ನಗರ ಅಭಿವೃದ್ಧಿಯ ಕಡೆ ಗಮನ  ಹರಿಸುತ್ತಿಲ್ಲ ಎಂಬುದು  ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರೋತ್ಥಾನ ಯೋಜನೆ ಅಡಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಟೆಂಡರ್‌ ಪ್ರಕ್ರಿಯೆ ಮುಗಿದು. ಅರ್ಧಂಬರ್ಧ ಕಾಮಗಾರಿ ನಡೆಸಿ ಕೈಚೆಲ್ಲಿ ಕುಳಿತಿರುವ ಗುತ್ತಿಗೆದಾರನಿಂದ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ದೂಳಿನ ವಾತಾವರಣ ಹೋಗಲಾಡಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು.ಕೆ.ಎಸ್‌.ಸುರೇಶ್‌ಕುಮಾರ್‌, ಹಿರಿಯ ನಾಗರಿಕರ ವೇದಿಕೆ  ಪ್ರಧಾನ ಕಾರ್ಯದರ್ಶಿ

ಹಳೆ ಹಾಗೂ ಹೊಸ ಕಿಕ್ಕೇರಿ ರಸ್ತೆಗಳು ಕೆ.ಆರ್‌.ಪೇಟೆ ಪಟ್ಟಣದ ಜನದಟ್ಟಣೆಯ ಪ್ರಮುಖ ರಸ್ತೆಗಳಾಗಿವೆ. ಪುರಸಭೆಯ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಆದಷ್ಟು ಜಾಗ್ರತೆಯಾಗಿ ರಸ್ತೆ ಕೆಲಸವನ್ನು ಸಂಪೂರ್ಣಗೊಳಿಸಿ ಶ್ರೀಸಾಮಾನ್ಯರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.ಡಿ.ಪ್ರೇಮಕುಮಾರ, ಪುರಸಭಾ ಸದಸ್ಯ 

-ಅರುಣ್‌ ಕುಮಾರ್‌

 

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

1-reee

Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.