ಮದ್ದೂರು ತಾಲೂಕು ಕಚೇರಿ ಸೀಲ್‌ಡೌನ್
Team Udayavani, Jul 28, 2020, 8:26 AM IST
ಮದ್ದೂರು: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್-19 ಸೋಂಕು ತಾಲೂಕು ಕಚೇರಿ ಸೇರಿದಂತೆ ಎಲ್ಲೆಡೆ ಹರಡುತ್ತಿದೆ. ಹೀಗಾಗಿ ತಾಲೂಕು ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ವೈರಸ್ ಆತಂಕ ಮೂಡಿಸಿದೆ. ಜು.27ರವರೆಗೆ ತಾಲೂಕಿನಲ್ಲಿ 3050 ಮಂದಿ ಗಂಟಲು ಮತ್ತು ಮೂಗಿನ ದ್ರವವನ್ನು ತಪಾಸಣೆಗೆ ಕಳುಹಿಸಿದ್ದು, ಈವರೆವಿಗೆ ಒಟ್ಟು 158 ಪ್ರಕರಣಗಳು ಖಚಿತವಾಗಿದೆ. 158 ಪ್ರಕರಣಗಳ ಪೈಕಿ 92 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದು, 3 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 66 ಸೋಂಕಿತರು ಮಂಡ್ಯ ಮತ್ತು ಮದ್ದೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲೇ ಚಿಕಿತ್ಸೆಗಾಗಿ 63 ದಾಖಲಾಗಿದ್ದು, ಮದ್ದೂರು ಆಸ್ಪತ್ರೆಯಲ್ಲಿ 35 ಹಾಗೂ 28 ಮಂದಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಮದ್ದೂರು ತಾಲೂಕು ಕಚೇರಿ ಪ್ರಥಮದರ್ಜೆ ಸಹಾಯಕಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.30ರವರೆವಿಗೆ ತಾಲೂಕು ಕಚೇರಿ ಸೇರಿ ದಂತೆ ಉಪನೊಂದಣಿ, ಆಹಾರ ಶಾಖೆ ಮತ್ತು ಖಜಾನೆ ಶಾಖೆಗಳನ್ನು ಸೀಲ್‌ಡೌನ್‌ಗೊಳಿಸಿ, ಮದ್ದೂರು ತಹಸೀಲ್ದಾರ್ ವಿಜಯಕುಮಾರ್ ಆದೇಶ ಹೊರಡಿಸಿ ದ್ದಾರೆ. ಸೋಮವಾರ ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ನೇತೃತ್ವದಲ್ಲಿ ಸಿಬ್ಬಂದಿ ಸೀಲ್‌ಡೌನ್ ಮಾಡಿ, ತಾಲೂಕು ಕಚೇರಿಗೆ ಸ್ಯಾನಿಟೈಸರ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.