ಹಲವೆಡೆ ಅಭಿವೃದ್ದಿ ಕಾಮಗಾರಿಗೆ ಪೂಜೆ
Team Udayavani, Jul 4, 2021, 8:53 PM IST
ಮದ್ದೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ.ಸಿ. ತಮ್ಮಣ್ಣಗುದ್ದಲಿ ಪೂಜೆ ನೆರವೇರಿಸಿದರು.
ತಾಲೂಕಿನ ಚಾಮನಹಳ್ಳಿ, ದೇಶಹಳ್ಳಿ ಹಾಗೂಕೆ.ಹೊನ್ನಲಗೆರೆ ಗ್ರಾಮಗಳಿಗೆ ಡಾ.ಬಾಬು ಜಗಜೀವನ್‌ರಾಮ್ ನಿಗಮ ಹಾಗೂ ಹಳ್ಳಿಸಂತೆಯೋಜನೆಯಡಿ ಬಿಡುಗಡೆಗೊಂಡಿರುವ 1.30ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಹಾಗೂ ಹಳ್ಳಿ ಸಂತೆಮಾರುಕಟ್ಟೆಗೆ ಚಾಲನೆ ನೀಡಿ ಮಾತನಾಡಿದರು.ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರುಕೋಟಿ ರೂ.ಗಳ ಅಭಿವೃದ್ಧಿಕಾಮಗಾರಿಪೂರ್ಣಗೊಂಡಿದ್ದು ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ವೇಗಕಲ್ಪಿಸಿರುವುದಾಗಿ ಹೇಳಿದರು.
ಕೆರೆಗಳಿಗೆ ನೀರು ತುಂಬಿಸುವುದು, ನಾಲೆ ಆಧುನೀಕರಣ, ದಲಿತ ಕಾಲೋನಿ ಅಭಿವೃದ್ಧಿ, ರಸ್ತೆ,ಚರಂಡಿ, ಕುಡಿವ ನೀರು, ಶಿಕ್ಷಣ ಕ್ಷೇತ್ರಕ್ಕೆ ಒತ್ತುನೀಡಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳುಅತ್ಯುನ್ನತ ಶಿಕ್ಷಣ ಪಡೆಯಲು ಉನ್ನತ ಶಿಕ್ಷಣಸಂಸ್ಥೆಗಳನ್ನು ತೆರೆದಿರುವುದಾಗಿ ತಿಳಿಸಿದರು.
ರೈತರು ಬೆಳೆದ ತರಕಾರಿಯನ್ನು ಉತ್ತಮ ಬೆಲೆಗೆಮಾರಾಟ ಮಾಡಲು ಪ್ರತಿ ಹೋಬಳಿ ಕೇಂದ್ರದಲ್ಲಿಹಳ್ಳಿ ಸಂತೆ ಮಾರುಕಟ್ಟೆ ಸ್ಥಾಪಿಸಲು ಮುಂದಾಗಿದ್ದುಇದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರುಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವ ಜತೆಗೆಅಧಿಕ ಲಾಭ ಪಡೆಯಲು ಸಹಕಾರಿ ಎಂದರು.ದೇಶಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾಶಂಕರ್,ಉಪಾಧ್ಯಕ್ಷ ಸುಬ್ರಹ್ಮಣಿ, ಸದಸ್ಯರಾದ ಲತಾಮಂಜು,ಸೌಮ್ಯಾಪ್ರಕಾಶ್, ಕೆ.ಹೊನ್ನಲಗೆರೆ ಗ್ರಾಪಂ ಅಧ್ಯಕ್ಷೆತಿಮ್ಮಮ್ಮಕೃಷ್ಣ, ಸದಸ್ಯರಾದಲೋಕೇಶ್, ರಾಮಯ್ಯ,ರಾಮಕೃಷ್ಣ, ಅಂಕಪ್ಪ, ಶಿವಮಾದು, ಜ್ಯೋತಿ,ಪುಟ್ಟಲಿಂಗಯ್ಯ, ಮುಖಂಡರಾದ ರಾಮಯ್ಯ,ಕೆಂಗಲ್‌ಗೌಡ, ಪುಟ್ಟಸ್ವಾಮಿ, ನಾಗೇಶ್, ರಮೇಶ್‌ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.