![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jul 11, 2021, 9:06 PM IST
ಮದ್ದೂರು: ಸರ್ಕಾರ ಕೂಡಲೇ ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಉಳಿಸಿಮುಂದಿನ ತಲೆ ಮಾರಿಗೆ ಉಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಮಾಜಿ ಸಂಸದ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದ ವೇಳೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಆರ್‌ಎಸ್ ಅಣೆಕಟ್ಟೆ ಬಿರುಕು ವಿಚಾರವಾಗಿ ಮಾತನಾಡಿದ ಕೆಪಿಸಿಸಿಅಧ್ಯಕ್ಷ ತಾವು ಮಾಜಿ ಮಂತ್ರಿಯಾಗಿ ಹಲವು ದಿನಗಳಾಗಿದ್ದು ಈಗೇಕೆನಮ್ಮನ್ನು ನೆನಪು ಮಾಡಿಕೊಂಡಿದ್ದಾರೆಂದು ತಮಗೆ ಗೊತ್ತಿಲ್ಲ. ಬಿರುಕುಬಿಟ್ಟಿರುವ ಸಂಬಂಧ ಪರಿಶೀಲಿಸಲು 40 ಮಂದಿ ಎಂಜಿನಿಯರ್‌ಗಳಿದ್ದು, ಅವರನ್ನೇಕೇಳಿ ಮಾಹಿತಿ ಪಡೆಯಲಿ ಎಂದರು.
ಮಂಡ್ಯ ಜಿಲ್ಲೆ ರೈತರ ಸೇವೆಗೆಂದು ಹಾಗೂ ಬೆಂಗಳೂರಿಗೆ ಕುಡಿಯುವನೀರು ಒದಗಿಸಲು ಮಹಾರಾಜರು ದೊಡ್ಡ ಆಸ್ತಿ ಮಾಡಿ ಹೋಗಿದ್ದು,ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ತಿಳಿಸಿದರು.ಕೆಎಸ್‌ಆರ್‌ಟಿಸಿ, ಆಸ್ಪತ್ರೆ ಬಿಸಿನೆಸ್ ಯೋಚನೆ ಮಾಡಲಾಗುತ್ತಾಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆಬಿಸಿನೆಸ್ ರೀತಿ ಯೋಚನೆ ಮಾಡದೆ ಸಮಾಜ ಸೇವೆ ರೀತಿ ಯೋಚನೆಮಾಡಬೇಕೆಂದು ಸಲಹೆ ನೀಡಿದರು.
ಸರ್ಕಾರದ ಆಸ್ತಿಗಳನ್ನು ಉಳಿಸುವ ಬದಲು ಮಾರಾಟ ಮಾಡಲುಕಾರ್ಪೊರೇಷನ್ ಆಸ್ತಿ ಗುತ್ತಿಗೆ ನೀಡೋದು ಬಿಜೆಪಿ ಪಕ್ಷದ ಕೆಲಸವೆಂದುಕೆಪಿಸಿಸಿ ಅಧ್ಯಕ್ಷರು ಟೀಕಿಸಿದರಲ್ಲದೇ ಆ ಮೂಲಕ ಮೈಷುಗರ್ ಸಕ್ಕರೆಕಾರ್ಖಾನೆಯನ್ನು ಖಾಸಗಿ ಸ್ವಾಮ್ಯಕ್ಕೆ ಒಪ್ಪಿಸದೆ ಸರ್ಕಾರವೇ ಮುನ್ನೆಡೆ ಸುವಂತೆ ಹೇಳಿದರು. ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ಬ್ಲಾಕ್ ಕಾಂಗ್ರೆಸ್‌ತಾಲೂಕುಅಧ್ಯಕ್ಷಕದಲೂರು ರಾಮಕೃಷ್ಣ, ತಾಪಂಮಾಜಿಸದಸ್ಯಕೆ.ಆರ್.ಮಹೇಶ್, ಮುಖಂಡರಾದ ಸತೀಶ್, ಚಿದಂಬರ್, ಅಪ್ಪಾಜಿ, ಆಸೀಫ್,ಮುನ್ನಾವರ್, ಅಸ್ಲಾಂ, ವಿಜಿಕುಮಾರ್, ಮಹೇಶ್ ಇದ್ದರು.
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.