ಇಂದಿನಿಂದ 13ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ

14ರಿಂದ 16ರವರೆಗೆ ಮಹಾಕುಂಭಮೇಳ; ಮೂರು ವಾಹನಗಳ ಮೂಲಕ ಜ್ಯೋತಿ ಯಾತ್ರೆ ಸಂಚಾರ

Team Udayavani, Oct 6, 2022, 3:01 PM IST

21

ಮಂಡ್ಯ: ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅ.14ರಿಂದ 16ರವರೆಗೆ ಮಹಾಕುಂಭಮೇಳ ಪುಣ್ಯಸ್ನಾನ ನಡೆಯಲಿರುವ ಹಿನ್ನೆಲೆ ಅ.6ರಂದು ಮಹದೇಶ್ವರ ಬೆಟ್ಟದಿಂದ ಮೂರು ವಾಹನಗಳ ಮೂಲಕ ಜ್ಯೋತಿ ಯಾತ್ರೆ ಆರಂಭಗೊಳ್ಳಲಿದೆ.

ಜ್ಯೋತಿ ಯಾತ್ರೆ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ತ್ರಿವೇಣಿ ಸಂಗಮ ಸೇರಲಿದೆ.

ಮೊದಲನೇ ವಾಹನ ಸಂಚರಿಸುವ ಮಾರ್ಗ ಅ.6ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಸಾಲೂರು ಮಠ- ಹನೂರು- ಕುಂತೂರು- ಕೊಳ್ಳೇಗಾಲದ ಮಾರ್ಗವಾಗಿ ಸಂಚರಿಸಿ ಟಿ.ನರಸೀಪುರ ಜಗದ್ಗುರು ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ.

ಮಠದಲ್ಲಿ ವಾಸ್ತವ್ಯ: 7ರ ಬೆಳಗ್ಗೆ ಟಿ.ನರಸೀಪುರದಿಂದ ಕರೊಹಟ್ಟಿ, ವಾಟಾಳು, ಮೂಗೂರು-ಸಂತೇಮರಳ್ಳಿ, ಯಳಂದೂರು ಇರಸುವಾಡಿ- ಮಸಣಾಪುರ-ಹೊಂಗನೂರು-ರೇ ಚಂಬಳ್ಳಿ-ಕಾಗಲವಾಡಿ, ಹುರಳಿಬಂಜನಪುರ, ಸರಗೂರು, ಚಂದಕವಾಡಿ, ಕೋಡಿಮೋಳೆ, ರಾಮಸಮುದ್ರ ಮಾರ್ಗವಾಗಿ ಸಂಚರಿಸಿ ಚಾಮರಾಜನಗರ ಸಿದ್ದಮಲ್ಲೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದೆ.

ಸಂಚಾರ: 8ರ ಬೆಳಗ್ಗೆ ಚಾಮರಾಜನಗರದಿಂದ ಗುಂಡ್ಲುಪೇಟೆ- ನಂಜನಗೂಡು -ಸುತ್ತೂರು ಮಠ- ಮಾರ್ಗವಾಗಿ ಸಂಚರಿಸಿ ಸುತ್ತೂರು ಮಠದಲ್ಲಿ ವಾಸ್ತವ್ಯ ಹೂಡಲಿದೆ. 9ರ ಬೆಳಗ್ಗೆ ಸುತ್ತೂರು ಮಠದಿಂದ ಅಲತ್ತೂರುಹುಂಡಿ, ಮಾದಯ್ಯನಹುಂಡಿ, ಮಲ್ಲರಾಜ ಯ್ಯನಹುಂಡಿ, ಮೂಡಳ್ಳಿ, ಹದಿನಾರು, ಮರಿಗೌಡನಹುಂಡಿ, ದೇವಲಾಪುರ, ಚಿಕ್ಕೇಗೌಡನಹುಂಡಿ, ಹೊಸಹುಂಡಿ, ತ್ರಿನೇಶ್ವರ ದೇವಸ್ಥಾನದ ಅರಮನೆ- ಮೈಸೂರು-ಚಾಮುಂಡಿ ಬೆಟ್ಟ- ಲಕ್ಷ್ಮೀಕಾಂತ ದೇವಸ್ಥಾನ-ಒಂಟಿಕೊಪ್ಪಲ್‌ -ವೆಂಕಟೇಶ್ವರ ದೇವಸ್ಥಾನ- ಚಂದ್ರಮೌಳೇಶ್ವರ ದೇವಸ್ಥಾನ- ಹೆಗ್ಗಡ ದೇವನಕೋಟೆ- ಸರಗೂರು ಹ್ಯಾಂಡ್‌ ಪೋಸ್ಟ್‌ ಮಾರ್ಗವಾಗಿ ಸಂಚರಿಸಿ ಶ್ರೀ ಮಹದೇಶ್ವರ ದೇಗುಲ ಭೀಮ ಕೊಲ್ಲಿಯಲ್ಲಿ ವಾಸ್ತವ್ಯ ಹೂಡಲಿದೆ.

10ರ ಬೆಳಗ್ಗೆ ಶ್ರೀ ಮಹದೇಶ್ವರ ದೇಗುಲ ಭೀಮ ಕೊಲ್ಲಿಯಿಂದ ಹೆಗ್ಗಡೆ ದೇವನಕೋಟೆ-ಅಂತರಸಂತಿ-ಬೇಲದ ಕುಪ್ಪೆ ಮಾರ್ಗವಾಗಿ ಸಂಚರಿಸಿ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ. 11ರ ಬೆಳಗ್ಗೆ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇಗುಲದಿಂದ ಹುಣಸೂರು-ಬೆಟ್ಟದಪುರ ಮಾರ್ಗವಾಗಿ ಮಹಾದೇಶ್ವರ ದೇಗುಲ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ.

12ರ ಬೆಳಗ್ಗೆ ಪಿರಿಯಾಪಟ್ಟಣದಿಂದ ಶಿವ ದೇವಸ್ಥಾನ-ಪಿರಿಯಾಪಟ್ಟಣ-ಹುಣಸೂರು-ತಿಪ್ಪೂರು-ಸಾಲಿಗ್ರಾಮ-ಕೆ.ಆರ್‌.ನಗರ-ಎಡತೊರೆ- ಅರ್ಕೇಶ್ವರ ದೇವಸ್ಥಾನ- ಆಲಂಬಾಡಿ ಕಾವಲು- ಅಕ್ಕಿ ಹೆಬ್ಟಾಳು ಮಾರ್ಗವಾಗಿ ಕೆ.ಆರ್‌.ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. 13ರ ಬೆಳಗ್ಗೆ ಕೆ.ಆರ್‌.ಪೇಟೆಯಿಂದ ಮತ್ತಿಘಟ್ಟ-ವಿಠಲಾಪುರ -ಸೋಮನಹಳ್ಳಿ -ಪುರ- ಅಂಬಿಗರಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮಕ್ಕೆ ಆಗಮಿಸಲಿದೆ.

3ನೇ ವಾಹನ: 6ರ ಬೆಳಗ್ಗೆ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆ ಹನೂರು- ಕೊಳ್ಳೇಗಾಲ -ಮರಡಿಗುಡ್ಡ (ವಿಶೇಷ ಪೂಜೆ) ಬನ್ನೂರು- ಬೆಳವಾಡಿ -ಪಾಲಳ್ಳಿ ಬೆಳಗೋಳ- ಕೆಆರ್‌ಎಸ್‌ ಕನ್ನಂಬಾಡಿ- ವೇಣುಗೋಪಾಲಸ್ವಾಮಿ ಡಿಂಕಾ ಬಲ್ಲೇನಹಳ್ಳಿ ಮಾರ್ಗವಾಗಿ ಸಂಚರಿಸಿ ಕಲ್ಲಹಳ್ಳಿ ಭೂ ವರಾಹನಾಥಸ್ವಾಮಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ.

7ರ ಬೆಳಗ್ಗೆ ಕಲ್ಲಹಳ್ಳಿ ಭೂವರಾಹನಾಥಸ್ವಾಮಿ ದೇವಸ್ಥಾನದಿಂದ ಬಲ್ಲೇನಹಳ್ಳಿ ಗ್ರಾಪಂನ ಗ್ರಾಮಗಳು- ಭೂಕನಕೆರೆ ಗ್ರಾಪಂ ಗ್ರಾಮಗಳು-ತೆಂಡೆಕೆರೆ-ಶೀಳನೆರೆ ಮಾರ್ಗವಾಗಿ ಸಂಚರಿಸಿ ಶೀಳನೆರೆಯಲ್ಲಿ ವಾಸ್ತವ್ಯ ಹೂಡಲಿದೆ. 8ರ ಬೆಳಗ್ಗೆ ಶೀಳನೆರೆಯಿಂದ ಸಿಂಧಘಟ್ಟ- ಹರಳಹಳ್ಳಿ -ಚೌಡೇನಹಳ್ಳಿ -ಮಾಕಾವಳ್ಳಿ ಬಂಡಿಹೊಳೆ ಮಾರ್ಗವಾಗಿ ಸಂಚರಿಸಿ ಬಂಡಿಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ.

9ರಂದು ಬಂಡಿಹೊಳೆಯಿಂದ ಹರಿಹರಪುರ- ಮಡುವಿನಕೋಡಿ -ಬಳ್ಳೇಕೆರೆ- ಐಚನಹಳ್ಳಿ ಮಾರ್ಗವಾಗಿ ಸಂಚರಿಸಿ ಗಂಜಿಗೆರೆಯಲ್ಲಿ ವಾಸ್ತವ್ಯ ಹೂಡಲಿದೆ.

ತ್ರಿವೇಣಿ ಸಂಗಮ: 10ರ ಬೆಳಗ್ಗೆ ಗಂಜಿಗೆರೆ ಭಾರತೀಪುರ ಕ್ರಾಸ್‌-ಅಘಲಯ- ಸಂತೆ ಬಾಚನಹಳ್ಳಿ -ರಂಗನಾಥಪುರ ಕ್ರಾಸ್‌-ಸಾರಂಗಿ ಮಾರ್ಗವಾಗಿ ಸಂಚರಿಸಿ ಆಗ್ರಹಾರ ಬಾಚಹಳ್ಳಿದಲ್ಲಿ ವಾಸ್ತವ್ಯ ಹೂಡಲಿದೆ. 11ರ ಬೆಳಗ್ಗೆ ಆಗ್ರಹಾರ ಬಾಚಹಳ್ಳಿಯಿಂದ ಕಿಕ್ಕೇರಿ -ಲಕ್ಷ್ಮೀಪುರ- ಆನೆಗೋಳ- ಮಾದಾಪುರ-ದಬ್ಬೆಘಟ್ಟ ಮಾರ್ಗವಾಗಿ ಸಂಚರಿಸಿ ಐಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ.

12ರ ಬೆಳಗ್ಗೆ ಹೈಕನಹಳ್ಳಿಯಿಂದ ಬೀರುವಳ್ಳಿ- ಹಿರಿಕಳಲೆ -ಮಂದಗೆರೆ ಮಾರ್ಗವಾಗಿ ಸಂಚರಿಸಿ ಕೆ.ಆರ್‌.ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ.

13ರ ಬೆಳಗ್ಗೆ ಕೆ.ಆರ್‌.ಪೇಟೆ ಟೌನ್‌ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ ತಲುಪಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

2ನೇ ವಾಹನ ಸಂಚಾರ

ಅ.6ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ -ಹನೂರು -ಬಿ.ಜಿ.ಪುರ- ಮಾರ್ಗ ವಾಗಿ ಸಂಚರಿಸಿ ಬಿ.ಜಿ.ಪುರ ಮಂಟೇ ಸ್ವಾಮಿ ಕ್ಷೇತ್ರದ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ.

7ರ ಬೆಳಗ್ಗೆ ಬಿ.ಜಿ.ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಿಂದ ಹಲಗೂರು ಮಳವಳ್ಳಿ- ಕಸಬಾ 1, 2 ಮತ್ತು 3 -ಕಿರಗಾವಲು 1, 2 ಮತ್ತು 3 ಕೆ.ಎಂ.ದೊಡ್ಡಿ ಮಾರ್ಗವಾಗಿ ಸಂಚರಿಸಿ ಕೆ.ಎಂ.ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ.

8ರ ಬೆಳಗ್ಗೆ ಕೆ.ಎಂ.ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇಗುಲದಿಂದ ಆತಗೂರು -ಕೆಸ್ತೂರು -ಬೆಸಗರಹಳ್ಳಿ -ಕೊಪ್ಪ- ಬಿದರಕೋಟೆ – ಮಾರಗೌಡನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆರಗೋಡು ಪಂಚಲಿಂಗೇಶ್ವರ ದೇಗುಲದಲ್ಲಿ ವಾಸ್ತವ್ಯ ಹೂಡಲಿದೆ.

9ರ ಬೆಳಗ್ಗೆ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇಗುಲದಿಂದ ಕೀಲಾರ- ಹನಕೆರೆ- ಮಂಡ್ಯ ಹುಲಿವಾನ -ಜೀಗುಂಡಿ ಪಟ್ಟಣ -ದುದ್ದ -ಶಿವಳ್ಳಿ ಚಂದಗಾವಲು -ಹೊಳಲು -ಯಲಿಯೂರು -ತೂಬಿನಕೆರೆ ಮಾರ್ಗವಾಗಿ ಸಂಚರಿಸಿ ಕೊತ್ತತ್ತಿಯಲ್ಲಿ ವಾಸ್ತವ್ಯ ಹೂಡಲಿದೆ.

ಚುಂಚನಗಿರಿಯಲ್ಲಿ ವಾಸ್ತವ್ಯ: 10ರ ಬೆಳಗ್ಗೆ ಅರಕೆರೆ 1, 2 ಮಹದೇವಪುರ -ಮಂಡ್ಯ ಕೊಪ್ಪಲು- ಶ್ರೀರಂಗಪಟ್ಟಣ ಶೆಟ್ಟಳ್ಳಿ 1 ಮತ್ತು 2 ದರಸಗುಪ್ಪೆ- ಉಕ್ಕುಡ- ಕ್ಯಾತನಹಳ್ಳಿ- ಅರಳಕುಪ್ಪೆ -ಹರವು- ಕಟ್ಟೆರಿ -ಗಾಮನಹಳ್ಳಿ -ಚಿನಕುರಳಿ ಬೆಟ್ಟಹಳ್ಳಿ -ಪಾಂಡವಪುರ- ಬೆಳ್ಳಾಳೆ- ಇಂಗಳಗುಪ್ಪೆ ಕೆರೆತೊನ್ನೂರು -ಟಿ.ಎಸ್‌.ಛತ್ರ -ಜಕ್ಕನಹಳ್ಳಿ ಮಾರ್ಗವಾಗಿ ಸಂಚರಿಸಿ ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಲಿದೆ.

11ರ ಬೆಳಗ್ಗೆ ಮೇಲುಕೋಟೆಯಿಂದ ಹೊಣಕೆರೆ- ದೇವಲಾಪುರ -ನಾಗಮಂಗಲ -ಬೆಳ್ಳೂರು ಮಾರ್ಗವಾಗಿ ಸಂಚರಿಸಿ ಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಲಿದೆ. 12ರ ಬೆಳಗ್ಗೆ ಚುಂಚನಗಿರಿಯಿಂದ ಬಿಂಡಿಗನವಿಲೆ- ಕಂಬದಹಳ್ಳಿ -ಸಂತೇಬಾಚನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆ.ಆರ್‌.ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. 13ರ ಬೆಳಗ್ಗೆ ಕೆ.ಆರ್‌.ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ- ಪುರ ಅಂಬಿಗರ ಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ(ಆಗಮನ) ವಾಸ್ತವ್ಯ ಹೂಡಲಿದೆ.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Mur

Mandya: ತಮ್ಮನ ಕೊಲೆಗೆ ಸುಪಾರಿ ನೀಡಿ, ಕುಂಭಮೇಳಕ್ಕೆ ಹೋದ ಅಣ್ಣ!

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

1-dess

Mandya: ಬೆಳ್ಳಂಬೆಳಗ್ಗೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹ*ತ್ಯೆ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.