ತರಕಾರಿ ಮಾರುಕಟ್ಟೆ ವಿಸ್ತರಣೆ ಮಾಡಿ: ಅಶೋಕ್
Team Udayavani, Apr 9, 2020, 4:51 PM IST
ಮಂಡ್ಯ: ಕೋವಿಡ್ 19 ಹರಡದಂತೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ನಗರದ 4 ಕಡೆಗಳಲ್ಲಿ ತರಕಾರಿ ಮಾರುಕಟ್ಟೆ ತೆರೆದು ಜನದಟ್ಟಣೆಯಾಗದಂತೆ ಕ್ರಮ ವಹಿಸುವಂತೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ತರಕಾರಿ ಮಾರುಕಟ್ಟೆ ತೆರೆಯಲಾಗಿದೆ. ಅಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ದ್ದು, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುತ್ತಿಲ್ಲ. ಬೇರೆ ಕಡೆಗಳಲ್ಲೂ ಮಾರುಕಟ್ಟೆ ಆರಂಭಿಸುವುದು ಸೂಕ್ತ ಎಂದು ಸಚಿವರು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೂರು ನಾಲ್ಕು ಕಡೆಗಳಲ್ಲಿ ಆರಂಭಿಸುವುದಲ್ಲದೆ, ಸಾಧ್ಯವಾದಷ್ಟು ತಳ್ಳುವ ಗಾಡಿಗಳ ಮೂಲಕ ಬಡಾವಣೆಗಳಿಗೆ ತರಕಾರಿ, ಹಣ್ಣು ತಲುಪಿಸಲು ಪ್ರೇರೇಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮನೆಮನೆಗೆ ತಲುಪಿಸಿ: ಶಾಸಕ ಪುಟ್ಟರಾಜು ಮಾತನಾಡಿ, ಮೊದಲೆಲ್ಲಾ ಜಿಲ್ಲೆಯಲ್ಲಿ ಬೆಳೆದ ತರಕಾರಿಗಳು ಮೈಸೂರಿಗೆ ರವಾನೆಯಾಗುತ್ತಿತ್ತು. ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಿರುವುದರಿಂದ ತರಕಾರಿ ಇಲ್ಲೇ ಉಳಿಯುತ್ತಿದೆ. ಸ್ಥಳೀಯವಾಗಿಯೇ ಎಪಿಎಂಸಿಗಳನ್ನು ತೆರೆದು ತರಕಾರಿ ಖರೀದಿಸಿ ಗ್ರಾಮೀಣ ಭಾಗದ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಹೆಚ್ಚು ಖರೀದಿಸಿ: ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ನಿತ್ಯ 700 ಕೆಜಿ ತರಕಾರಿ ಹಾಗೂ ಕಲ್ಲಂಗಡಿ, ಬಾಳೆ, ಕಬೂìಜ ಸೇರಿ 5 ಟನ್ ಹಣ್ಣನ್ನು ಖರೀದಿ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಸಭೆಗೆ ತಿಳಿಸಿದಾಗ, ಶಾಸಕ ಪುಟ್ಟರಾಜು ಮಧ್ಯಪ್ರವೇಶಿಸಿ 700 ಕೆಜಿ ತರಕಾರಿ ಖರೀದಿ ಸಾಲದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಬೇಕು ಎಂದು ಹೇಳಿದರು.
ಬಿತ್ತನೆ ಬೀಜಕ್ಕೆ ವ್ಯವಸ್ಥೆ: ಬಿತ್ತನೆ ಬೀಜ, ರಸಗೊಬ್ಬರ ಅಗತ್ಯ ದಾಸ್ತಾನು ಮಾಡಿಕೊಂಡಿದ್ದು, ಈಗಾಗಲೇ ಅಧಿಕೃತ ಮಾರಾಟಗಾರರಿಂದ ಬೆಳಗ್ಗೆ 10ರಿಂದ 12 ಗಂಟೆವರೆಗೆ ಅಂಗಡಿ ತೆರೆದು ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ್ ಮಾಹಿತಿ ನೀಡಿದರು.
ಬೆಳೆ ಸಾಗಣೆಗೆ ಅಡ್ಡಿ ಇಲ್ಲ: ರೈತರು ಬೆಳೆದ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಪೊಲೀಸರು ತಡೆಯೊಡ್ಡಬಾರದು. ಅವರು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದಕ್ಕೆ ಹಾಗೂ ಮನೆಗಳ ಬಳಿ ಹೋಗಿ ಮಾರುವುದಕ್ಕೂ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಎಸ್ಪಿ ಪರಶುರಾಮ ಅವರಿಗೆ ಸೂಚಿಸಿದರು. ಸಭೆಯಲ್ಲಿ ಪೌರಾಡಳಿತ ಸಚಿವ ನಾರಾಯಣಗೌಡ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಜಿಪಂ ಸಿಇಒ ಯಾಲಕ್ಕಿಗೌಡ, ಶಾಸಕರಾದ ಶಾಸಕ ಡಾ.ಅನ್ನದಾನಿ, ಶ್ರೀನಿವಾಸ್, ಸುರೇಶ್‌ಗೌಡ, ಅಪ್ಪಾಜಿಗೌಡ ಇದ್ದರು.
ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಎಲ್ಲೆಲ್ಲಿ ಸಿಗಲಿದೆ, ಯಾವ ಸಮಯಕ್ಕೆ ಸಿಗಲಿದೆ ಎಂಬ ಬಗ್ಗೆ ಕರಪತ್ರ ಮುದ್ರಿಸಿ ಪತ್ರಿಕೆಗಳ ಜೊತೆಯಲ್ಲೇ ರೈತರಿಗೆ ಮಾಹಿತಿ ತಲುಪಿಸಿ. – ಅಶೋಕ್, ಜಿಲ್ಲಾ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.