ಮಲ್ಲಯ್ಯನಗರ ಬಡಾವಣೆ ಸೌಲಭ್ಯ ವಂಚಿತ
Team Udayavani, Feb 5, 2022, 2:26 PM IST
ಮದ್ದೂರು: ತಾಲೂಕಿನ ಸಾದೊಳಲು ಗ್ರಾಪಂ ವ್ಯಾಪ್ತಿಯ ಕುದರಗುಂಡಿ ಮಲ್ಲಯ್ಯನಗರ ಬಡಾವಣೆಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು,ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಲಯ್ಯನಗರ ಬಡಾವಣೆಯಲ್ಲಿ 80ಕ್ಕೂ ಅಧಿಕಕುಟುಂಬಗಳು ವಾಸವಿದ್ದು, ಪ್ರತಿಯೊಬ್ಬ ಕುಟುಂಬವುಕೂಲಿ ಕಾರ್ಮಿಕರಾಗಿದ್ದು ಒಂದೊಪ್ಪತ್ತಿನ ಊಟಕ್ಕಾಗಿ ಪ್ರತಿನಿತ್ಯ ಬೆವರಿಳಿಸಬೇಕಾದ ಅನಿವಾರ್ಯತೆಯಲ್ಲಿದ್ದು, ಇಂತಹ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯಧೋರಣೆ ಅನುಸರಿಸಲಾಗಿದೆ.
ಅಭಿವೃದ್ಧಿ ಮರೀಚಿಕೆ: ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ವೇಳೆ ನಿರಾಶ್ರಿತ ಕುಟುಂಬಗಳಿಗೆ ಸೂರು ಕಲ್ಪಿಸುವ ದೃಷ್ಟಿಯಿಂದ ಸರ್ವೆ ನಂ.242ರಲ್ಲಿ 6 ಎಕರೆ 20 ಗುಂಟೆ ಜಮೀನನ್ನು ನಿವೇಶನ ಹಾಗೂಮನೆ ನಿರ್ಮಿಸಲು ಅವಕಾಶ ಕಲ್ಪಿಸಿದ್ದರೂ ಇದುವರೆಗೂ ಅಭಿವೃದ್ಧಿ ಮರೀಚಿಕೆಯಾಗಿದೆ.
ಎಲ್ಲೆಂದರಲ್ಲಿ ತ್ಯಾಜ್ಯ ನೀರು: ಕುಡಿಯುವ ನೀರು, ವಿದ್ಯುತ್, ಚರಂಡಿ, ರಸ್ತೆ ಡಾಂಬರೀಕಣ, ಆಳೆತ್ತರದ ಗಿಡಗಳು ಬೆಳೆದುನಿಂತು ಎಲ್ಲೆಡೆ ಅಶುಚಿತ್ವ ತಾಂಡವವಾಡುತ್ತಿದ್ದು, ತ್ಯಾಜ್ಯ ನೀರು ಎಲ್ಲೆಂದರಲ್ಲಿ ಹರಿದುಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಕುಡಿಯುವ ನೀರನ್ನು ಶೇಖರಣೆ ಮಾಡಲು ತೊಂಬೆಗಳನ್ನೇ ಆಶ್ರಯಿಸಬೇಕಾಗಿದೆ. ಬಡಾವಣೆಯಲ್ಲಿ ಕೊಳವೆಬಾವಿ ಇಲ್ಲದೇ ತೊಂಬೆ ನೀರನ್ನೇ ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿದೆ.
ಟ್ಯಾಂಕ್ ಸ್ಥಾವರ ಉದ್ಘಾಟನೆಗೂ ಮುನ್ನ ಸೋರಿಕೆ: ಬಡಾವಣೆಯಲ್ಲಿ 400ಕ್ಕೂ ಅಧಿಕ ಜನಸಂಖ್ಯೆಯಿದ್ದು, 200 ಮಂದಿ ಮತದಾರರನ್ನು ಹೊಂದಿರುವಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದು, ಕಳೆದ ಒಂದುವರ್ಷದ ಹಿಂದೆ ನಿರ್ಮಾಣಗೊಂಡ ಕುಡಿಯುವನೀರಿನ ಟ್ಯಾಂಕ್ ಸ್ಥಾವರ ಉದ್ಘಾಟನೆಗೂ ಮುನ್ನಸೋರಿಕೆ ಕಂಡು ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಶೋಚನೀಯವಾಗಿದೆ. ರಸ್ತೆಗಳು ಡಾಂಬರೀಕರಣ ಕಂಡು ಹಲವು ವರ್ಷಗಳೇ ಕಳೆದಿದ್ದು, ಹಳ್ಳಕೊಳ್ಳಗಳಿಂದಕೂಡಿರುವ ರಸ್ತೆಗಳಿಂದಾಗಿ ಸ್ಥಳೀಯರು ಸಂಚರಿಸದಂತಹ ಪರಿಸ್ಥಿತಿ ಬಂದೊದಗಿದೆ. ಮಳೆ ಬಂದರೆ ಸ್ಥಳೀಯರ ಕಥೆ ಹೇಳತೀರದಾಗಿದೆ.
ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕೇವಲ ಚುನಾವಣೆ ಸಂದರ್ಭಗಳಲ್ಲಷ್ಟೇ ಗ್ರಾಮಕ್ಕೆ ಭೇಟಿ ನೀಡಿ ಹಲವಾರು ಸಮಸ್ಯೆಗಳನ್ನು ಈಡೇರಿಸಿ ಮಾದರಿ ಗ್ರಾಮವನ್ನಾಗಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಇತ್ತ ತಲೆಹಾಕಲ್ಲ. ಗ್ರಾಮದಲ್ಲಿರುವ ಅಂಗನವಾಡಿ ಸುತ್ತಮುತ್ತ ತ್ಯಾಜ್ಯ ನೀರು, ಗಿಡಗಳು ಬೆಳೆದುನಿಂತು ಅವ್ಯವಸ್ಥೆಯ ಆಗರವಾಗಿದ್ದರೂ ಇದುವರೆಗೂ ಅದರ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಂತಾಗಿದೆ. ಕೂಡಲೇ ಹಕ್ಕು ಪತ್ರ ವಿತರಿಸುವಜತೆಗೆ ಮೂಲ ಸೌಲಭ್ಯ ಕಲ್ಪಿಸಿ ಸ್ಥಳೀಯ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಮಾದರಿ ಬಡಾವಣೆಯನ್ನಾಗಿಸಲು ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದೆ.
ವಿದ್ಯುತ್ ಸಂಪರ್ಕ ಇಲ್ಲ :
ಮಲ್ಲಯ್ಯನಗರ ಬಡಾವಣೆಯಲ್ಲಿ ಕಳೆದ 20 ವರ್ಷಗಳಿಂದಲೂ ವಾಸಿಸುತ್ತಿರುವ ಸುಮಾರು 30 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸದ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ವಂಚಿತವಾಗಿದೆ.ವಿದ್ಯುತ್ ಸಂಪರ್ಕ ಪಡೆಯಲು ಅಗತ್ಯ ದಾಖಲಾತಿಗಳನ್ನು ನೀಡಬೇಕಾಗಿರುವುದರಿಂದ ಸ್ಥಳೀಯರು ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್‌ತಂತಿಗೆ ವೈರ್‌ಗಳನ್ನು ಅಳವಡಿಸಿ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ.
ಹಕ್ಕುಪತ್ರ ವಿತರಿಸಲು ತೊಂದರೆ: ಪಿಡಿಒ : ಮಲ್ಲಯ್ಯನಗರ ಬಡಾವಣೆಯಲ್ಲಿ ಈ ಹಿಂದೆವಾಸಿಸುತ್ತಿದ್ದ 187 ಕುಟುಂಬಗಳಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಿದ್ದು, ವಲಸೆ ಹೋಗಿರುವ ನಿವಾಸಿಗಳ ಮನೆಗೆ ಇತರರು ಬಂದು ಸೇರಿರು ವುದರಿಂದ ಹಕ್ಕುಪತ್ರ ವಿತರಿಸಲು ತೊಂದರೆ ಉಂಟಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯಕ್ರಮ ವಹಿಸುವ ಜತೆಗೆ ಬಡಾವಣೆಯಲ್ಲಿ ಕಂಡುಬಂದಿರುವ ಅವ್ಯವಸ್ಥೆಗಳನ್ನು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಸಾದೊಳಲು ಗ್ರಾಪಂ ಪಿಡಿಒ ಪ್ರಭಾಕರ್ ತಿಳಿಸಿದ್ದಾರೆ.
ಕಾಟಾಚಾರಕ್ಕೆ ದರ್ಶನ : ಸಮಸ್ಯೆ ಹಾಗೂ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಜಿಲ್ಲಾ ಹಾಗೂ ತಾಲೂಕು ಆಡಳಿತಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಕೇವಲ ಕಾಟಾಚಾರಕ್ಕಷ್ಟೇ ಬಂದುಮುಖ ದರ್ಶನ ನೀಡುವ ಅಧಿಕಾರಿಗಳು, ನಂತರ ಯಾವುದೇ ಅಭಿವೃದ್ಧಿಗೆ ಮುಂದಾಗಿಲ್ಲವೆಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
ಮಲ್ಲಯ್ಯನಗರ ಬಡಾವಣೆಯಲ್ಲಿ ಅಧಿಕ ಮಂದಿ ಕೂಲಿ ಕಾರ್ಮಿಕರೇಇದ್ದು ಪ್ರತಿಯೊಂದು ಕುಟುಂಬಕ್ಕೂ ಹಕ್ಕು ಪತ್ರ ವಿತರಿಸಿ ಮೂಲ ಸೌಲಭ್ಯ ಕಲ್ಪಿಸುವಜತೆಗೆ ನನೆಗುದಿಗೆ ಬಿದ್ದಿರುವ ಅಭಿವೃದ್ಧಿಕಾರ್ಯಗಳನ್ನು ಕೈಗೊಂಡು ಸ್ಥಳೀಯನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕಾಗಿದೆ. –ಎಚ್.ಬಿ.ಶಿವಣ್ಣ, ಮಲ್ಲಯ್ಯನಗರ ಬಡಾವಣೆ ನಿವಾಸಿ
–ಎಸ್.ಪುಟ್ಟಸ್ವಾಮಿ, ಮದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.