ಎಪಿಎಂಸಿ ಕಾಯ್ದೆಯಿಂದ ವ್ಯವಹಾರ ಕುಸಿತ!
ಎಪಿಎಂಸಿಯತ್ತ ಮುಖ ಮಾಡದ ರೈತರು! ನಷ್ಟದತ್ತ ಸಾಗುತ್ತಿರುವ ಎಪಿಎಂಸಿ ! 10 ಲಕ್ಷಕ್ಕಿಳಿದ ವಹಿವಾಟು ಎಚ್.ಶಿವರಾಜು
Team Udayavani, Mar 5, 2021, 7:55 PM IST
ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಂಡ್ಯ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ಬೆಲ್ಲದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕುಸಿತಗೊಂಡಿದೆ.
ಕಾಯ್ದೆಯ ಪರಿಣಾಮದಿಂದ ರೈತರು ಎಪಿಎಂಸಿಯತ್ತ ಮುಖ ಮಾಡುತ್ತಿಲ್ಲ.ಇದರಿಂದ ವರ್ತಕರಿಗೆ ನಿಗದಿತ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿಲ್ಲ.ನಷ್ಟದತ್ತ ಎಪಿಎಂಸಿ: ಕಾಯ್ದೆ ತಿದ್ದುಪಡಿಯ ಮುಂಚೆ ಬೆಲ್ಲದ ಮಾರುಕಟ್ಟೆಯಿಂದ ಎಪಿಎಂಸಿಗೆ ಸುಮಾರು 40ಲಕ್ಷ ರೂ. ವಹಿವಾಟು ನಡೆಯುತ್ತಿತ್ತು. ಕಾಯ್ದೆಯನಂತರ 10 ಲಕ್ಷ ರೂ. ಇಳಿದಿದೆ. ಇದರಿಂದ ಎಪಿಎಂಸಿ ನಷ್ಟದತ್ತ ಸಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬೀಳುತ್ತಿದೆ.
ತೆರಿಗೆ ಇಳಿಕೆ: ಎಪಿಎಂಸಿ ಮಾರುಕಟ್ಟೆ ಯಾರ್ಡ್‌ನಲ್ಲಿ ಪ್ರತಿನಿತ್ಯ ನಡೆಯುವ ವಹಿವಾಟು ಆಧಾರದ ಮೇಲೆತೆರಿಗೆ ವಿಧಿಸಲಾಗುತ್ತಿದೆ. ಮೊದಲು ಶೇ.1.50ರಷ್ಟುತೆರಿಗೆ ಹಾಕಲಾಗುತ್ತಿತ್ತು. ಪ್ರಸ್ತುತ ಅದನ್ನು ಶೇ.0.60ಕ್ಕೆಇಳಿಸಲಾಗಿದೆ. ಇದರಿಂದ ಎಪಿಎಂಸಿ ಯಾರ್ಡ್‌ಗಳನ್ನುನಿರ್ವ ಹಣೆ ಮಾಡಲು ಕಷ್ಟವಾಗುತ್ತಿದೆ.
ತೂಕದ ಯಂತ್ರ ಖಾಸಗಿಗೆ: ಎಪಿಎಂಸಿ ಮಾರುಕಟ್ಟೆಯಲ್ಲಿರುವ ತೂಕದ ಯಂತ್ರವನ್ನು(ವೇ ಬ್ರಿಡ್ಜ್) ಮೊದಲು ಎಪಿಎಂಸಿಯೇ ನಿರ್ವಹಿಸುತ್ತಿತ್ತು. ಕಾಯ್ದೆಜಾರಿ ಗೊಂಡ ಹಿನ್ನೆಲೆಯಲ್ಲಿ ಅದನ್ನು ಖಾಸಗಿಯವರಿಗೆಟೆಂಡರ್ ನೀಡಲಾಗಿದೆ.ಖಾಲಿಯಾಗುತ್ತಿರುವ ಮಳಿಗೆಗಳು: ಎಪಿಎಂಸಿ ಕಾಯ್ದೆಜಾರಿಯಿಂದ ಬಾಡಿಗೆ ಪಡೆದಿದ್ದ ವರ್ತಕರು ನಿಧಾನವಾಗಿ ಖಾಲಿ ಮಾಡುತ್ತಿದ್ದಾರೆ. ಇದರಿಂದ ಮಳಿಗೆಗಳುಖಾಲಿ ಯಾಗುತ್ತಿವೆ. ಇದಕ್ಕೂ ಮುನ್ನ ಸಾಕಷ್ಟು ಮಳಿಗೆಗಳು ಖಾಲಿಯೇ ಉಳಿದಿದ್ದವು. ಈಗ ಕಾಯ್ದೆಯಿಂದಇರುವ ಮಳಿಗೆಗಳು ಖಾಲಿಯಾಗುತ್ತಿರುವುದರಿಂದಮುಂದಿನ ದಿನಗಳಲ್ಲಿ ಪಾಳು ಬೀಳುವ ಆತಂಕಎದುರಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.