Mandya; ಕಿಡ್ನ್ಯಾಪರ್ ಕೈಗೆ ಕಚ್ಚಿ ತಪ್ಪಿಸಿಕೊಂಡ ಬಾಲಕ; ಸಿನಿಮೀಯ ರೀತಿಯ ಪ್ರಕರಣ
Team Udayavani, Oct 22, 2024, 10:03 PM IST
ಮಂಡ್ಯ: ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಬೆಳಗಿನ ಜಾವ ಅಪಹರಣಕ್ಕೊಳಗಾದ ಬಾಲಕನೊಬ್ಬ ಸಿನಿಮೀಯ ರೀತಿಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಿಂದ ಅಪಹರಣಕಾರನ ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ತಪ್ಪಿಸಿಕೊಂಡು ಬಂದಿದ್ದು, ಅಪಹರಣ ಪ್ರಕರಣ ಸುಖ್ಯಾಂತ ಕಂಡಿದೆ.
ತಾಲೂಕಿನ ಕೊದೇನಕೊಪ್ಪಲು ಗ್ರಾಮದ ಈರೇಗೌಡ ಎಂಬುವರ ಪುತ್ರ ಯೋಗೇಶ್ ತಪ್ಪಿಸಿಕೊಂಡ ಬಾಲಕ. ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದಲ್ಲಿ ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿರುವ ಯೋಗೇಶ್ ಪಟ್ಟಣದ ಗೌಡಯ್ಯನ ಬೀದಿಯ 3ನೇ ಕ್ರಾಸ್ ಅವರ ಮಾವ ಮನೆಯಲ್ಲಿದ್ದು ಶಾಲೆಗೆ ಹೋಗಿ ಬರುವುದು ಮಾಡುತ್ತಿದ್ದ. ಎಂದಿನಂತೆ ಹಳೆ ಕೋರ್ಟ್ ಹಿಂಭಾಗದಲ್ಲಿ ಟ್ಯೂಷನ್ ಹೋಗುತ್ತಿದ್ದ ವೇಳೆ ಮಂಗಳವಾರ ಬೆಳಗಿನ ಜಾವ 5.20ರ ಸಮಯದಲ್ಲಿ ಓಮಿನಿ ಕಾರಿನಲ್ಲಿ ಬಂದ ಮಂಕಿ ಕ್ಯಾಪ್ ಧರಿಸಿದ ಅಪಹರಣಕಾರರು ಬಾಲಕನ ಮೇಕೆ ಹಲ್ಲೆ ನಡೆಸಿ ಅಪಹರಿಸಿದ್ದಾರೆ.
ಅಪಹರಣಕಾರರು ಪಿರಿಯಾಪಟ್ಟಣದಲ್ಲಿ ವಾಹನ ನಿಲ್ಲಿಸಿ ಸಿಗರೇಟ್ ಸೇದುತ್ತಿದ್ದ ವೇಳೆ ಅಪಹರಣಕಾರನ ಕೈ ಕಚ್ಚಿ ಸುಮಾರು ಒಂದು ಕೀ.ಮೀ. ದೂರ ಓಡಿಬಂದು ಕ್ಯಾಬ್ ಚಾಲಕನೊಬ್ಬರ ನಂಬರ್ ನಿಂದ ಅವರ ಮಾವನಿಗೆ ಕಾಲ್ ಮಾಡಿ ನಡೆದ ಘಟನೆಯಲ್ಲಿ ವಿವರಿಸಿದ್ದಾನೆ. ಅಪಹರಣಕಾರರು ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು.
ಕೂಡಲೇ ಪಿರಿಯಾಪಟ್ಟಣಕ್ಕೆ ತೆರಳಿದ್ದ ಸಂಬಂಧಿಕರು ಬಾಲಕನನ್ನು ಕರೆದುಕೊಂಡು ಮಳವಳ್ಳಿಗೆ ಬಂದಿದ್ದಾರೆ ಎಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಾಲಕನ ತಂದೆ ಈರೇಗೌಡ ದೂರು ನೀಡಿದ್ದಾರೆ. ಈ ಸಂಬಂಧ ಐವರು ಅಪರಿಚಿತರು ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ: ಅಮ್ಮ ಪಾರು, ಇಬ್ಬರು ಮಕ್ಕಳು ನೀರುಪಾಲು
Aishwarya Gowda Fraud: ಮಂಡ್ಯದಲ್ಲಿ ವಂಚನೆ; ಐಶ್ವರ್ಯಗೆ 5 ತಾಸು ಗ್ರಿಲ್
Mandya: 10 ಲಕ್ಷ ರೂ. ವಂಚಿಸಿದ ಪೋಸ್ಟ್ ಮಾಸ್ಟರ್ ಪುತ್ರ!
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
MUST WATCH
ಹೊಸ ಸೇರ್ಪಡೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!