Mandya:ಚೆಲುವನಾರಾಯಣಸ್ವಾಮಿಗೆ ವಿಶೇಷ ವಸ್ತ್ರ ಮಾರ್ಯಾದೆ
ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ
Team Udayavani, Nov 21, 2023, 1:35 PM IST
ಮೇಲುಕೋಟೆ: ತಮಿಳುನಾಡು ಸರ್ಕಾರದ ವಿಶೇಷ ಆದೇಶದಂತೆ ಅಲ್ಲಿನ ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಅರ್ಚಕರ ತಂಡ ರಾಜಮುಡಿ ಉತ್ಸವದಂದು ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಗೆ ವಿಶೇಷ ವಸ್ತ್ರ ಮರ್ಯಾದೆ ಸಮರ್ಪಿಸಿದರು.
ರಾಮಾನುಜರ ತಿರುತ್ತಂಬಿ ಎಂದೇ ಹೆಸರಾದ ಕಾಂಚೀಪುರಂ ಜಿಲ್ಲೆಯ ಮದುರಮಂಗಲಮ್‌ನ ಅರುಲ್‌ಮಿಗು ಶ್ರೀವೈಕುಂಠ ಪೆರುಮಾಳ್, ಎಂಬಾರ್ ದೇವಾಲಯದಿಂದ ಎರಡನೇ ವರ್ಷದ ಪರಂಪರೆಯ ಸಮ್ಮಿಲನದ ಉದ್ದೇಶದಿಂದ ಕಾಂಚೀಪುರಂ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆ ಜಂಟಿ ಆಯುಕ್ತೆ ಆರ್.ವಾಗ್ಮತಿ ನೇತೃತ್ವದ ಅಧಿ ಕಾರಿಗಳ ತಂಡದೊಂದಿಗೆ ಆಗಮಿಸಿ ವಿಶೇಷವಾಗಿ ತಂದಿದ್ದ ರೇಷ್ಮೆ ವಸ್ತ್ರಗಳನ್ನು ಮೇಲುಕೋಟೆಯಲ್ಲಿ ಛತ್ರಿಚಾಮರ
ದೀವಟಿಗೆಗಳೊಂದಿಗೆ ದೇವಾಲಯದ ಸುತ್ತ ಮೆರವಣಿಗೆ ಮಾಡಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಚಾರ್ಯರಿಗೆ ಸಮರ್ಪಿಸಿದರು.
ಜಂಟಿ ಆಯುಕ್ತೆ ಆರ್.ವಾಗ¾ತಿ ಮಾತನಾಡಿ, ಮೇಲುಕೋಟೆ ಭಾರತದ ಶ್ರೀಮಂತಿಕೆಯ ಭವ್ಯ ಪರಂಪರೆಯ ತಾಣವಾಗಿದೆ. ತಮಿಳುನಾಡಿಗೂ ಕ್ಷೇತ್ರಕ್ಕೂ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಪಾರ ಬಾಂಧವ್ಯವಿದೆ. ತಮಿಳುನಾಡಿನಿಂದ ಸಾಕಷ್ಟು ಭಕ್ತರು ಮೇಲುಕೋಟೆಗೆ ಭೇಟಿ ನೀಡುತ್ತಾರೆ.
ರಾಮಾನುಜರೂ ಸಹ ತಮಿಳುನಾಡಿನಿಂದ ಬಂದು ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿ ಭಾರತದ ಸಂಸ್ಕೃತಿ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಸಾಂಸ್ಕೃತಿಕ ಪರಂಪರೆಯ ಮುಂದುವರೆಸುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ರಾಜಮುಡಿ ಉತ್ಸವದಂದು ಚೆಲುವನಾರಾಯಣನಿಗೆ ವಿಶೇಷ ವಸ್ತ್ರ ಸಮರ್ಪಣೆ ಮಾಡುತ್ತಾ ಬಂದಿದೆ.
ತಮಿಳುನಾಡು ಸರ್ಕಾರ ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧವಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರ ಸಹಮತ ನೀಡಿದರೆ ಮುಂದಿನ ಯೋಜನೆಯ ರೂಪುರೇಷೆ ಸಿದ್ಧ ಮಾಡಲು ಶ್ರಮಿಸುತ್ತೇವೆಂದು ತಿಳಿಸಿದರು.
ಮೇಲುಕೋಟೆಯ ಕಲ್ಯಾಣಿ ಸಮುಚ್ಛ ಯ, ಯೋಗ ನರಸಿಂಹಸ್ವಾಮಿಬೆಟ್ಟ, ಇಲ್ಲಿನ ಭವ್ಯ ಸ್ಮಾರಕಗಳು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ತಮ್ಮದೇ ಕೊಡುಗೆ ನೀಡಿವೆ. ಇಂತಹ ಶ್ರೀಮಂತಿಕೆಯ ಮಹತ್ವವನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಶ್ರೀಪೆರಂಬೂದೂರಿನ ಚಕ್ರಪಾಣಿಯವರ ಸಂಘಟನೆಯಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮದ ವಸ್ತ್ರ ಸಮರ್ಪಣೆಯ
ಮೆರವಣಿಗೆಯಲ್ಲಿ ಮೇಲುಕೋಟೆ ದೇವಾಲಯದ ಸಿಇಒ ಮಹೇಶ್, ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್ ಗುರೂಜಿ, ಪರಿಚಾರಕ ಎಂ.ಎನ್.ಪಾರ್ಥಸಾರಥಿ, ಶ್ರೀಪೆರಂಬೂದೂರು ವೈಕುಂಠ ಪೆರುಮಾಳ್ ಎಂಬಾರ್ ದೇವಾಲಯದ ಇಒ ರಾಜಾ ಎಸ್.ಇರುಂಪೆರುವಳದಿ, ಟ್ರಸ್ಟಿ ಪಿ.ನರಸಿಂಹನ್, ಲಕ್ಷ್ಮಣರಾವ್, ವೆಂಕಟೇಶನ್, ಕಾಂಚೀಪುರಂ ವರದರಾಜಸ್ವಾಮಿ ದೇವಾಲಯದ ಸಿಇಒಗಳಾದ ಎಸ್. ಶ್ರೀನಿವಾಸನ್, ಮುತ್ತುಲಕ್ಷ್ಮೀ, ಎಚ್‌ಆರ್‌ಎಂಸಿ ಇನ್ಸ್‌ಪೆಕ್ಟರ್ ಜೆ.ಸುರೇಶಕುಮಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.