ಮಂಡ್ಯ: ಕೋವಿಡ್ ಗೆ ಇಬ್ಬರ ಬಲಿ ; 127ಕ್ಕೇರಿದ ಸಾವಿನ ಸಂಖ್ಯೆ ; 216 ಮಂದಿಗೆ ಸೋಂಕು
Team Udayavani, Oct 14, 2020, 7:27 PM IST
ಸಾಂದರ್ಭಿಕ ಚಿತ್ರ
ಮಂಡ್ಯ: ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಗೆ ಇಬ್ಬರು ಮೃತಪಟ್ಟಿದ್ದು, ಇದರಿಂದ 127 ಸಾವಿನ ಪ್ರಕರಣ ದಾಖಲಾಗಿದೆ. ಅದರಂತೆ 216 ಮಂದಿಗೆ ಕೋವಿಡ್ದೃ ಢಪಟ್ಟಿದ್ದು, 172 ಮಂದಿ ಚೇತರಿಸಿಕೊಂಡಿದ್ದಾರೆ.
ಮದ್ದೂರು ತಾಲ್ಲೂಕಿನ 60 ಹಾಗೂ 80 ವರ್ಷದ ವೃದ್ಧರಿಬ್ಬರಿಗೆ ಕೋವಿಡ್, ಮಧುಮೇಹ, ತೀವ್ರ ಉಸಿರಾಟ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
216 ಹೊಸ ಪ್ರಕರಣ:
ಮಂಡ್ಯ 28, ಮದ್ದೂರು 26, ಮಳವಳ್ಳಿ 7, ಪಾಂಡವಪುರ 27, ಶ್ರೀರಂಗಪಟ್ಟಣ 28, ಕೆ.ಆರ್.ಪೇಟೆ 29, ನಾಗಮಂಗಲ 20 ಮಂದಿಗೆ ಹೊಸದಾಗಿ ಸೋಂಕು ಆವರಿಸಿದೆ. ಹೊರ ಜಿಲ್ಲೆಯ ಒಬ್ಬ ಮಂಡ್ಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 14096ಕ್ಕೇರಿದೆ.
172 ಚೇತರಿಕೆ:
ಮಂಡ್ಯ 54, ಮದ್ದೂರು 8, ಮಳವಳ್ಳಿ 1, ಪಾಂಡವಪುರ 3, ಶ್ರೀರಂಗಪಟ್ಟಣ 21, ಕೆ.ಆರ್.ಪೇಟೆ 67, ನಾಗಮಂಗಲ 18 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 12104 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
1865 ಸಕ್ರಿಯ ಪ್ರಕರಣಗಳು:
ಜಿಲ್ಲೆಯಲ್ಲಿ 1865 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 499, ಖಾಸಗಿ ಆಸ್ಪತ್ರೆಗಳಲ್ಲಿ 119, ಕೋವಿಡ್ ಕೇರ್ ಸೆಂಟರ್ನಲ್ಲಿ 250 ಹಾಗೂ ಮನೆಗಳಲ್ಲಿ 997 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.