ಮಗಳ ಶವದ ಜೊತೆ ನಾಲ್ಕು ದಿನ ಕಳೆದ ತಾಯಿ : ಮಂಡ್ಯದಲ್ಲೊಂದು ಮನಕಲಕುವ ಘಟನೆ
Team Udayavani, May 31, 2022, 7:53 PM IST
ಮಂಡ್ಯ : ಮೃತಪಟ್ಟಿದ್ದ ಮಗಳ ಶವದ ಜೊತೆಗೆ ನಾಲ್ಕು ದಿನಗಳಿಂದ ತಾಯಿಯೊಬ್ಬಳು ವಾಸವಿದ್ದ ಘಟನೆ ನಗರದ ಹಾಲಹಳ್ಳಿ ಸ್ಲಂ ನ ನ್ಯೂ ತಮಿಳು ಕಾಲೋನಿಯಲ್ಲಿ ಸೋಮವಾರ ಸಂಜೆ ಬೆಳಕಿಗೆ ಬಂದಿದೆ.
ಕಾಲೋನಿಯ ನಿವಾಸಿ ರೂಪ(30) ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಕೆಯ ತಾಯಿ ನಾಗಮ್ಮ ಮಗಳ ಸಾವಿನ ವಿಚಾರ ಯಾರಿಗೂ ತಿಳಿಸದೆ ಶವದ ಜೊತೆಯೇ ನಾಲ್ಕು ದಿನ ಕಳೆದಿದ್ದಾರೆ.
ನಾಲ್ಕು ದಿನಗಳಿಂದ ಮನೆಯಲ್ಲೇ ಇದ್ದ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಇಲಿ, ಹೆಗ್ಗಣ ಸತ್ತಿರಬಹುದು ಎಂದುಕೊಂಡು ಅಕ್ಕಪಕ್ಕದವರು ಸುಮ್ಮನಿದ್ದರು. ಆದರೆ ದುರ್ವಾಸನೆ ಹೆಚ್ಚಾದ ಪರಿಣಾಮ ಹುಡುಕಾಡಿದ ಜನರಿಗೆ ನಾಗಮ್ಮ ಮತ್ತು ರೂಪ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ, ನಾಲ್ಕು ದಿನಗಳಿಂದ ತಾಯಿ-ಮಗಳು ಮನೆಯಿಂದ ಹೊರಬರದೆ ಇದ್ದದ್ದನ್ನು ಗಮನಿಸಿ ಅನುಮಾನಗೊಂಡಿದ್ದಾರೆ.
ನಂತರ ಮಿಕ್ಸಿ ರಿಪೇರಿಯ ವ್ಯಕ್ತಿಯಿಂದ ಮನೆಯ ಬಾಗಿಲು ಹೊಡೆಸಿದ ಸ್ಥಳೀಯರು ಮನೆ ಒಳಗಿನ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮೃತಪಟ್ಟ ಮಗಳು ರೂಪಾ ಶವದ ಜೊತೆ ನಾಗಮ್ಮ ಅಸ್ವಸ್ಥಳಾಗಿ ಕುಳಿತಿದ್ದಳು. ತಕ್ಷಣ ಸ್ಥಳೀಯರು ನಗರದ ಪೂರ್ವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಮೃತದೇಹವನ್ನು ಮಿಮ್ಸ್ ನ ಶವಾಗಾರಕ್ಕೆ ರವಾನಿಸಿದ್ದಾರೆ.
ಇದನ್ನೂ ಓದಿ : ವಿವಾಹಿತ ಮಹಿಳೆಗೆ ತಾಯಿ ,ಅತ್ತೆ ಮನೆಯಲ್ಲೂ ವಾಸದ ಹಕ್ಕು ಇದೆ: ಸುಪ್ರೀಂಕೋರ್ಟ್
ಮೃತ ರೂಪ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂದ ಕೆಲಸವನ್ನು ಬಿಟ್ಟಿದ್ದಳು. ಇತ್ತೀಚಿಗೆ ಮತ್ತೆ ಕೆಲಸಕ್ಕೆ ಬರುವುದಾಗಿ ಪತ್ರ ಬರೆದಿದ್ದರು. ಇನ್ನೂ ಕಳೆದ 10 ವರ್ಷಗಳ ಹಿಂದೆ ಪಾಂಡವಪುರದ ವ್ಯಕ್ತಿಯೊಬ್ಬನೊಂದಿಗೆ ವಿವಾಹವಾಗಿದ್ದ ರೂಪ ಕೌಟುಂಬಿಕ ಕಲಹ ಹಿನ್ನೆಲೆ 5 ವರ್ಷಗಳ ಹಿಂದೆ ಗಂಡ, ಇಬ್ಬರು ಮಕ್ಕಳಿಂದ ಪ್ರತ್ಯೇಕವಾಗಿ ತಾಯಿ ಮನೆಯಲ್ಲಿಯೇ ವಾಸವಿದ್ದರು.
ಇನ್ನೂ ಕೆಲ ದಿನಗಳಿಂದ ಕುಡಿತದ ಚಟಕ್ಕೆ ತಾಯಿ ಮಗಳಿಬ್ಬರು ಒಳಗಾಗಿದ್ದರಂತೆ. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಯಾವುದೇ ಮಾತುಕತೆ ಇಲ್ಲದೇ ಇಬ್ಬರೂ ಸಹ ಮನೆಯಿಂದ ಹೊರಬಾರದೆ ಇದ್ದಾಗ ಅಕ್ಕಪಕ್ಕದವರು ಅನುಮಾನಗೊಂಡಿದ್ದಾರೆ. ತಾಯಿ ನಾಗಮ್ಮ ಸ್ವಲ್ಪ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ನಾಲ್ಕು ದಿನಗಳಿಂದ ಮಗಳು ರೂಪ ಎಲ್ಲಿಗೋ ಹೋಗಿರಬಹುದು ಎಂದು ಸ್ಥಳೀಯರು ತಿಳಿದುಕೊಂಡಿದ್ದರು.
ಆದರೆ ಮನೆಯಿಂದ ಸೋಮವಾರ ಸಂಜೆ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಮನೆ ಬಾಗಿಲು ಹೊಡೆದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ರೂಪಾ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನು ರೂಪಾ ಲೋಬಿಪಿ ಅಥವಾ ಹೃದಯಾಘಾತದಿಂದ ಸಾವಾಗಿರಬಹುದೆಂದು ನಗರದ ಪೂರ್ವ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ಅದರನ್ವಯ ಪೊಲೀಸರು ಸ್ಥಳ ಮಹಜರು ಮಾಡಿ, ತನಿಖೆ ಆರಂಭಿಸಿದ್ದಾರೆ. ಜೊತೆಗೆ ಆಕೆಯ ಯೂರಿಯಾವನ್ನು ದಾಖಲು ಮಾಡಿಕೊಂಡಿದ್ದಾರೆ. ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಶವ ಪರೀಕ್ಷೆ ಬಳಿಕ ಸಹಜ ಸಾವೋ ಇಲ್ಲವೋ ಎಂಬ ಸತ್ಯ ಹೊರಬರಲಿದೆ.
ಎಲ್ಲ ಆಯಾಮದಲ್ಲೂ ವಿಚಾರಣೆ: ಎಸ್ಪಿ
ಇನ್ನು ರೂಪಾ ಸಾವನ್ನಪ್ಪಿ ಮರ‍್ನಾಲ್ಕು ದಿನ ಕಳೆದಿದ್ದರೂ ಆಕೆಯ ತಾಯಿ ನಾಗಮ್ಮ ಮಾತ್ರ ಮನೆಯಿಂದ ಹೊರ ಬಂದಿಲ್ಲ ಎಂಬುದು ಅಕ್ಕಪಕ್ಕದ ಮನೆಯವರ ವಿಚಾರಣೆಯಿಂದ ಬೆಳಕಿಗೆ ಬಂದಿದ್ದು, ಇನ್ನು ರೂಪಾಳ ತಾಯಿ ಮಾನಸಿಕ ಅಸ್ವಸ್ಥೆ ಬಗ್ಗೆ ನಮಗೆ ಮಾಹಿತಿ ಇಲ್ಲ. ರೂಪಾ ಮತ್ತು ಆಕೆಯ ತಾಯಿ ದುರಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡು ರೂಪಾಳ ತಾಯಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು. ಅಲ್ಲದೆ, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಎನ್.ಯತೀಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.