![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 8, 2020, 5:46 AM IST
ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯ ನಿವಾಸಿಯೊಬ್ಬರು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದು, ಇದು ಮಂಡ್ಯ ಜಿಲ್ಲೆಯಲ್ಲಿಯೇ ಕೋವಿಡ್ -19 ಪ್ರಕರಣದ ಮೊದಲ ಬಲಿಯಾಗಿದೆ. ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆ ನಿವಾಸಿ 53 ವರ್ಷದ ಮಹಮದ್ ಸಲೀಮ್ ಕೋವಿಡ್ -19ಗೆ ಬಲಿಯಾದ ವ್ಯಕ್ತಿ. ಮೃತರು ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯ ಸಗಟು ವ್ಯಾಪಾರಿಯಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರ ಹಾಗೂ ನರ ರೋಗದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಸೋಂಕು ಇರುವುದು ದೃಢ: ಇವರು ನರ ರೋಗ ಸಂಬಂಧಿ ಮೂರ್ಚೆ ರೋಗ ವ್ಯಾದಿಯಿಂದ ಬಳಲುತ್ತಿದ್ದರು. ಗಂಟಲಿನ ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ ವೇಳೆ ಕೋವಿಡ್ 19 ಸೋಂಕು ಇರುವುದು ಖಾತ್ರಿಯಾದ ಹಿನ್ನೆಲೆಯಲ್ಲಿ ರೋಗಿಯೂ ಮೂಲತಃ ಮಂಡ್ಯ ಜಿಲ್ಲೆಯಾವರಾಗಿದ್ದರಿಂದ ಅವರನ್ನು ಮೈಸೂರಿನಿಂದ ಮಂಡ್ಯ ಜಿಲ್ಲಾಸ್ಪತ್ರೆ (ಕೋವಿಡ್-19) ರವಾನಿಸಲು ಸೂಚಿಸಿದ್ದಾರೆ. ಮೃತ ಸಲೀಮ್ ಅವರನ್ನು ಮಂಡ್ಯದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಎಂದು ಕರೆ ತರುವ ಮಾರ್ಗಮಧ್ಯೆ ಅಸುನೀಗಿರುವು ದ್ದು, ಮೃತರ ಶವವನ್ನು ಮಂಡ್ಯದ ಶವಗಾರದಲ್ಲಿ ಇರಿಸಲಾಗಿದೆ.
ಸಂಪರ್ಕಿತರು ಕ್ವಾರಂಟೈನ್: ಮೃತರ ಪತ್ನಿ ಸಹೋದರ ಹಾಗೂ ಅವರ ಸಂಪರ್ಕದಲ್ಲಿದ್ದ ಮದ್ದೂರು ಪಟ್ಟಣದ ವ್ಯಕ್ತಿಯೋರ್ವ ನನ್ನು ಮುಂಜಾಗ್ರತಾ ಕ್ರಮವಾಗಿ ಮಂಡ್ಯದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಮದ್ದೂರು ನಿವಾಸವನ್ನು ಸೀಲ್‌ಡೌನ್ ಮಾಡಲು ಸ್ಥಳೀಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.