Mandya ಭ್ರೂಣಹತ್ಯೆ: ಹೊರ ಜಿಲ್ಲೆಯ ಗರ್ಭಿಣಿಯರೇ ಟಾರ್ಗೆಟ್‌!


Team Udayavani, Nov 27, 2023, 11:15 PM IST

maMandya ಭ್ರೂಣಹತ್ಯೆ: ಹೊರ ಜಿಲ್ಲೆಯ ಗರ್ಭಿಣಿಯರೇ ಟಾರ್ಗೆಟ್‌!Mandya ಭ್ರೂಣಹತ್ಯೆ: ಹೊರ ಜಿಲ್ಲೆಯ ಗರ್ಭಿಣಿಯರೇ ಟಾರ್ಗೆಟ್‌!

ಮಂಡ್ಯ: ತಾಲೂಕಿನ ದುದ್ದ ಹೋಬಳಿಯ ಹುಳ್ಳೇನಹಳ್ಳಿ ಗ್ರಾಮದ ಬಳಿ ಹಾಡ್ಯದ ಆಲೆಮನೆಯಲ್ಲಿ ಭ್ರೂಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳು ಹೊರ ಜಿಲ್ಲೆಯ ಗರ್ಭಿಣಿಯರನ್ನೇ ಹೆಚ್ಚು ಟಾರ್ಗೆಟ್‌ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

ಹೊರ ಜಿಲ್ಲೆಯ ಗರ್ಭಿಣಿಯರನ್ನು ಕರೆತಂದು ಭ್ರೂಣಪತ್ತೆ ಮಾಡಲಾಗುತ್ತಿತ್ತು. ಐದಾರು ಗರ್ಭಿಣಿಯರನ್ನು ಒಂದೇ ಬಾರಿಗೆ ಆಲೆಮನೆಯ ಶೆಡ್‌ಗೆ ಕರೆತರುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ಹೊರ ಜಿಲ್ಲೆಯ ಸ್ತ್ರೀಶಕ್ತಿ ಸಂಘದ ಸದಸ್ಯರು ಎಂದು ಹೇಳಿಕೊಂಡು ಕೃತ್ಯ ನಡೆಸಲಾಗುತ್ತಿತ್ತು.

ಹುಳ್ಳೇನಹಳ್ಳಿ ಗ್ರಾಮದ ನಯನ್‌ಕುಮಾರ್‌ ಹಾಗೂ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್‌ ಭ್ರೂಣಪತ್ತೆಯಲ್ಲಿ ತೊಡಗಿದ್ದರು. ನಯನ್‌ಕುಮಾರ್‌ ಅಕ್ಕನನ್ನೇ ನವೀನ್‌ ಮದುವೆಯಾಗಿದ್ದ. ನಯನ್‌ ಗ್ರಾಮದಲ್ಲಿ ಕಿರಾಣಿ ಅಂಗಡಿ, ವ್ಯವಸಾಯ, ಹಸು ಸಾಕಾಣಿಕೆ ಮಾಡುತ್ತಿದ್ದರೆ, ನವೀನ್‌ ಗ್ರಾಮದಲ್ಲಿ ಕೇಬಲ್‌ ಆಪರೇಟರ್‌ ಆಗಿದ್ದ. ಹೆಚ್ಚು ಹಣ ಸಂಪಾದಿ ಸಲು ಹೇಯ ಕೃತ್ಯಕ್ಕೆ ಕೈಹಾಕಿದ್ದರು ಎಂದು ತಿಳಿದು ಬಂದಿದೆ.

ನವೀನ್‌ ಸಂಬಂ ಧಿಕರ ಆಲೆಮನೆಯನ್ನೇ ಬಾಡಿಗೆ ಪಡೆದಿದ್ದರು. ಆಲೆಮನೆಯ ಹೆಸರಲ್ಲಿ ಕರಾಳ ದಂಧೆ ನಡೆಸುತ್ತಿದ್ದರು. ವಾರಕ್ಕೆ ಎರಡು ಮೂರು ಬಾರಿ ಕಾರಿನಲ್ಲಿ ಸಂಜೆ ವೇಳೆ ಕರೆದುಕೊಂಡು ಬಂದು ಕೆಲವೇ ಗಂಟೆಗಳಲ್ಲಿ ಸ್ಕ್ಯಾನಿಂಗ್‌ ಮಾಡಿ ಕಳುಹಿಸುತ್ತಿದ್ದರು.

ಈ ದಂಧೆಯಿಂದ ನಯನ್‌ಕುಮಾರ್‌ ಲಕ್ಷ ಲಕ್ಷ ಹಣ ಸಂಪಾದಿಸಿದ್ದ. ಬಳಿಕ ಹಸು ನೋಡಿಕೊಳ್ಳಲು, ಮೇವು ತರಲು ಆಳುಗಳನ್ನು ಇಟ್ಟುಕೊಂಡಿದ್ದ. ನೋಡ ನೋಡುತ್ತಿದ್ದಂತೆಯೇ ದಿಢೀರ್‌ ಹಣ ಸಂಪಾದಿಸಿದ್ದನ್ನು ಕಂಡು ಗ್ರಾಮಸ್ಥರೇ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈಗ ಹಾಡ್ಯ ಗ್ರಾಮಕ್ಕೆ ಯಾರೇ ಹೊಸಬರು ಬಂದರೂ ಅನುಮಾನದಿಂದ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಆಲೆಮನೆ ಬಗ್ಗೆ ಗ್ರಾಮದ ಎಷ್ಟೋa ಮಂದಿಗೆ ಗೊತ್ತೇ ಇಲ್ಲ. ಅಲ್ಲಿ ಭ್ರೂಣಪತ್ತೆ ನಡೆಯುತ್ತಿದ್ದುದರ ಬಗ್ಗೆಯೂ ಗ್ರಾಮಸ್ಥರಿಗೆ ಸುಳಿವೇ ಇಲ್ಲದಂತೆ ಆರೋಪಿಗಳು ಕೃತ್ಯ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಇಷ್ಟೆಲ್ಲ ಆದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.

ಟಾಪ್ ನ್ಯೂಸ್

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

1-lo

Police; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್.

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

13

Srirangapatna: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕ ಸಾವು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

23

Actor Darshan: ಕಾನ್‌ಸ್ಟೇಬಲ್‌ ಮೇಲೆಯೂ ನಟ ದರ್ಶನ್‌ ಗ್ಯಾಂಗ್‌ ಹಲ್ಲೆ 

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Queen’s Premier League: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಜೆರ್ಸಿ ಬಿಡುಗಡೆ

Queen’s Premier League: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಜೆರ್ಸಿ ಬಿಡುಗಡೆ

7

‘The Indian House’ Movie: ರಾಮ್‌ಚರಣ್‌ ನಿರ್ಮಾಣದಲ್ಲಿ ʼದಿ ಇಂಡಿಯನ್‌ ಹೌಸ್‌ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.