ಸರ್ಕಾರವನ್ನೇ ಸೋಲಿಸಿದ ಮಂಡ್ಯ ಗೌಡ್ತಿ


Team Udayavani, May 24, 2019, 3:00 AM IST

m1

ಮಂಡ್ಯ: ಕೊನೆಗೂ ಮಂಡ್ಯದಲ್ಲಿ ಸ್ವಾಭಿಮಾನಕ್ಕೆ ಅಂತಿಮವಾಗಿ ಗೆಲುವು ಸಿಕ್ಕಿದೆ. ಜೆಡಿಎಸ್‌ ಮೇಲಿನ ಅಭಿಮಾನ ನೆಲಕಚ್ಚಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ 8500 ಕೋಟಿ ರೂ. ಅಭಿವೃದ್ಧಿಯ ಆಶಾಗೋಪುರ ತೋರಿಸಿ ಪುತ್ರನನ್ನು ಗೆಲ್ಲಿಸುವ ರಾಜಕೀಯ ತಂತ್ರಗಾರಿಕೆ ನಡೆಸಿದರೂ ಜನರು ಅದಕ್ಕೆ ಮರುಳಾಗದೆ ಚಾಣಾಕ್ಷತನದಿಂದ ಮತ ಚಲಾಯಿಸಿ ಸುಮಲತಾ ಅವರಿಗೆ ಸ್ವಾಭಿಮಾನದ ಭಿಕ್ಷೆ ನೀಡಿ ಗೆಲುವನ್ನು ದಯಪಾಲಿಸಿದ್ದಾರೆ.

ದಿಟ್ಟತನದ ಹೋರಾಟ: ಮಂಡ್ಯ ಲೋಕಸಭಾ ಕ್ಷೇತ್ರದೊಳಗೆ ಸ್ಥಳೀಯ ನಾಯಕತ್ವದ ಕೂಗೆದ್ದ ಸಂದರ್ಭದಲ್ಲಿ ಸ್ವಾಭಿಮಾನವನ್ನು ಪ್ರಮುಖಅಸ್ತ್ರವಾಗಿ ಪ್ರಯೋಗಿಸಿದ ಸುಮಲತಾ ಅದನ್ನು ಗೆಲುವಿನ ಅಸ್ತ್ರವನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪಕ್ಷ, ನಾಯಕರ ಬೆಂಬಲವಿಲ್ಲದೆ ಏಕಾಂಗಿಯಾಗಿಯೇ ಚುನಾವಣಾ ರಣರಂಗದಲ್ಲಿ ದಿಟ್ಟತನದಿಂದ ಹೋರಾಟ ನಡೆಸಿದರು. ತಮ್ಮ ವಿರುದ್ಧ ಎದುರಾದ ಟೀಕಾಸ್ತ್ರಗಳಿಗೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡುತ್ತಾ ಜೆಡಿಎಸ್‌ ವರಿಷ್ಠರೂ ಹಾಗೂ ನಾಯಕರು ನಿಬ್ಬೆರಗಾಗುವಂತೆ ಮಾಡಿದರು. ಮಾತಿನಲ್ಲೇ ಮೋಡಿ ಮಾಡಿ ಜನರ ಹೃದಯ ಗೆದ್ದು ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ.

ಅದ್ಭುತ ಜಯ: ಚುನಾವಣಾ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಗೊಂದಲಕಾರಿ ಹೇಳಿಕೆಗಳನ್ನು ನೀಡದೆ, ರಾಜಕೀಯವಾಗಿ ತಪ್ಪು ಹೆಜ್ಜೆಗಳನ್ನಿಡದೆ ಎಚ್ಚರಿಕೆಯಿಂದ ಚುನಾವಣೆಯನ್ನು ಎದುರಿಸಿದ ಸುಮಲತಾಗೆ ಅಂತಿಮವಾಗಿ ಅದ್ಭುತ ಜಯ ಸಿಕ್ಕಿದೆ. ಜೆಡಿಎಸ್‌ ಶಕ್ತಿ ಕೇಂದ್ರದೊಳಗೆ ಪ್ರಚಂಡ ಶಕ್ತಿಯಾಗಿ ಉದಯಿಸಿದ್ದಾರೆ. ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಚುನಾವಣೆಯಲ್ಲೇ ಗೆಲುವನ್ನು ದಾಖಲಿಸಿ ಮಂಡ್ಯ ರಾಜಕಾರಣದೊಳಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಮೊಳಗಿದ ರಣಕಹಳೆ: ಚುನಾವಣಾ ಪೂರ್ವದಿಂದಲೂ ಒಂಟಿಯಾಗಿಯೇ ಜಿಲ್ಲಾದ್ಯಂತ ಸಂಚಾರ ಮಾಡಿ ಮತದಾರರ ಅಭಿಪ್ರಾಯ ಸಂಗ್ರಹಿಸಿದ ಸುಮಲತಾ, ಜನರ ನಾಡಿಮಿಡಿತ ಸುಲಭವಾಗಿ ಅರ್ಥೈಸಿಕೊಂಡು ಚುನಾವಣೆಗೆ ಸ್ಪರ್ಧಿಸುವ ಧೈರ್ಯ ಮಾಡಿದರು. ಕಾಂಗ್ರೆಸ್‌ ಟಿಕೆಟ್‌ ವಂಚಿತರಾದರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಪಣ ತೊಟ್ಟು ಬಿಜೆಪಿ, ರೈತಸಂಘ, ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲದೊಂದಿಗೆ ಪ್ರಚಂಡ ದಿಗ್ವಿಜಯ ಸಾಧಿಸಿದರು. ಜನಪ್ರಿಯ ನಟರಾದ ದರ್ಶನ್‌, ಯಶ್‌ ಅವರೊಂದಿಗೆ ಚುನಾವಣಾ ಪ್ರಚಾರ ಅಖಾಡದಲ್ಲಿ ಧೂಳೆಬ್ಬಿಸಿ ಸ್ವಾಭಿಮಾನದ ಕಹಳೆ ಮೊಳಗಿಸಿದ ಸುಮಲತಾ ಅಂಬರೀಶ್‌, ಪತಿಯ ನಂತರ ಜಿಲ್ಲಾ ರಾಜಕಾರಣದಲ್ಲಿ ಜನರ ಪ್ರೀತಿ-ವಿಶ್ವಾಸ ಗಳಿಸಿಕೊಳ್ಳುವಲ್ಲಿ ಯಶಸ್ಸನ್ನು ಕಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಗಳೆಲ್ಲರೂ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಭಾರೀ ಮತಗಳ ಅಂತರದಿಂದ ಸೋಲಿಸಿ ಅನಿರೀಕ್ಷಿತ ಫ‌ಲಿತಾಂಶ ಬಂದ ಮಾದರಿಯಲ್ಲೇ ಈಗಿನ ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶವೂ ಅಷ್ಟೇ ಅಚ್ಚರಿ ಮೂಡಿಸಿದೆ. ಜೆಡಿಎಸ್‌ ಶಕ್ತಿಕೇಂದ್ರದೊಳಗಿನ ಪಕ್ಷ ದುರ್ಬಲವಾಗಿರುವುದು ಬಹಿರಂಗಗೊಂಡಿದೆ.

ಘಟಾನುಘಟಿ ನಾಯಕರಿಗೆ ತಿರುಗೇಟು: ಜೆಡಿಎಸ್‌ ಘಟಾನುಘಟಿ ನಾಯಕರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರೇ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಕ್ಕೆ ಅಸಮರ್ಥರಾದರು. ಪಕ್ಷದ ಎಲ್ಲಾ ಶಾಸಕರೂ ಒಮ್ಮತದಿಂದ ಶ್ರಮಿಸಿ ನಿಖೀಲ್‌ ವಿಜಯಮಾಲೆ ತೊಡಿಸುವಲ್ಲಿ ವಿಫ‌ಲರಾದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗಂತೂ ಮಂಡ್ಯದಂತಹ ಜೆಡಿಎಸ್‌ ಭದ್ರಕೋಟೆಯೊಳಗೆ ಪುತ್ರನ ಸೋಲು ಅರಗಿಸಿಕೊಳ್ಳಲಾಗದಂತಾಗಿದೆ. ಇದರಿಂದ ದೇವೇಗೌಡರ ಕುಟುಂಬಕ್ಕೂ ದೊಡ್ಡ ಮುಖಭಂಗವಾದಂತಾಗಿದೆ.

ಸುಮಲತಾ ಗೆಲುವು ಕಾಂಗ್ರೆಸ್‌ ಪಾಳಯದೊಳಗೆ ಹೊಸ ಚೈತನ್ಯಶಕ್ತಿಯನ್ನು ತಂದುಕೊಟ್ಟಿದೆ. ಅಸ್ತಿತ್ವವಿಲ್ಲದೆ ಪರದಾಡುತ್ತಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸುಮಲತಾ ಗೆಲುವು ಆಸರೆ ನೀಡಿದೆ. ಕಾಂಗ್ರೆಸ್‌ ಪಕ್ಷದ ಪರಾಜಿತ ಶಾಸಕರು ನೀಡಿದ ಪರೋಕ್ಷ ಬೆಂಬಲ ಪಕ್ಷೇತರ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಯಿತು.

ಸ್ವಾಭಿಮಾನದ ರಣಕಹಳೆ: ಮಂಡ್ಯ ಲೋಕಸಭಾ ಕ್ಷೇತ್ರದ ಜನರೆದುರು ಸ್ವಾಭಿಮಾನದ ರಣಕಹಳೆ ಮೊಳಗಿಸಿದ್ದ ಸುಮಲತಾ ಅವರಿಗೆ ಮತದಾರರು ಸ್ವಾಭಿಮಾನದ ಗೆಲುವನ್ನೇ ತಂದುಕೊಟ್ಟಿದ್ದಾರೆ. ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶ ಮುಂದಿನ ದಿನಗಳಲ್ಲಿ ಜಿಲ್ಲೆಯೊಳಗೆ ಹೊಸ ರಾಜಕೀಯ ಬದಲಾವಣೆಯನ್ನು ತರುವ ಸ್ಪಷ್ಟ ಸೂಚನೆ ನೀಡಿದೆ.

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.