ಅಲುಗಾಡುತ್ತಿದೆಯಾ ಜೆಡಿಎಸ್‌ ಭದ್ರಕೋಟೆ


Team Udayavani, Jan 30, 2022, 2:37 PM IST

ಅಲುಗಾಡುತ್ತಿದೆಯಾ ಜೆಡಿಎಸ್‌ ಭದ್ರಕೋಟೆ

ಮಂಡ್ಯ: ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆ ಕಳೆದೆರಡು ಚುನಾವಣೆಗಳಿಂದ ತನ್ನ ಅಸ್ತಿತ್ವಕಳೆದುಕೊಳ್ಳುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಪಕ್ಷದ ನಾಯಕತ್ವದ ಪ್ರಶ್ನೆಯೂ ಎದ್ದಿದೆ. ಅಲ್ಲದೆ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಶಾಸಕರ ನಡುವೆ ಅಂತರ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ಈಗಾಗಲೇ ಲೋಕಸಭೆ ಹಾಗೂ ವಿಧಾನಪರಿಷತ್‌ ಚುನಾವಣೆಯ ಸೋಲಿ ನಿಂದ ಭದ್ರಕೋಟೆ ಅಲುಗಾಡುವ ಸ್ಥಿತಿಗೆ ಬಂದು ನಿಂತಿದೆ.ಇದಕ್ಕೆ ದಳಪತಿಗಳ ನಡುವಿನ  ಒಗ್ಗಟ್ಟು ಹಾಗೂ ನಾಯಕತ್ವದ ಕೊರತೆಯೂ ಕಾರಣವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಎಚ್‌ಡಿಕೆ-ಪುಟ್ಟರಾಜು ಮುನಿಸು: ಪಕ್ಷದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪಾಂಡವ ಪುರ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಅವರನಡುವೆ ಎಲ್ಲವೂ ಸರಿಯಿಲ್ಲ ಎಂಬುದು ತಿಳಿದವಿಚಾರವಾಗಿದೆ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಾತಿಗೆ ಕಟ್ಟುಬಿದ್ದಿರುವ ಪುಟ್ಟರಾಜು ಎಲ್ಲವನ್ನು ಸಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಾರ್ಯಕರ್ತರು ಮುಖ್ಯ: ಗುರುವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡುವ ಮೊದಲು ದೇವೇ ಗೌಡರಿಗೆ ತಿಳಿಸಿದ್ದೆ ಎಂದು ಪುಟ್ಟರಾಜು ಹೇಳುತ್ತಾರೆ.ಆದರೆ ಕುಮಾರಸ್ವಾಮಿ ಬಗ್ಗೆ ಚಕಾವೆತ್ತಿಲ್ಲ. ಅಲ್ಲದೆ, ಕುಮಾರಸ್ವಾಮಿ ಸಹ ಚನ್ನಪಟ್ಟಣದಲ್ಲಿಯಾರೇ ಪಕ್ಷ ಬಿಟ್ಟರೂ ತೊಂದರೆಯಿಲ್ಲ. ಪಕ್ಷ,ಕಾರ್ಯಕರ್ತರು ಮುಖ್ಯ ಎಂದಿದ್ದಾರೆ. ಅಲ್ಲದೆ,ಪುಟ್ಟರಾಜು ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ ಎಂದಿರುವುದು ಎಲ್ಲ ಅನುಮಾನಕ್ಕೂ ಪುಷ್ಟಿ ನೀಡಿದಂತಾಗಿದೆ.

ಈಗಾಗಲೇ ಹಲವು ಬಾರಿಶಾಸಕ ಪುಟ್ಟರಾಜು ಅವರ ಮನವೊಲಿಸಿ ಪಕ್ಷ ಬಿಡದಂತೆ ದೇವೇಗೌಡರು ಮನವೊಲಿಸಿದ್ದರು ಎಂದು ಹೇಳುತ್ತಾರೆ ಜೆಡಿಎಸ್‌ ಮುಖಂಡರೊಬ್ಬರು.

ಒಗ್ಗಟ್ಟಿನ ಕೊರತೆ: ಪ್ರಸ್ತುತ ಜೆಡಿಎಸ್‌ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ಯಾರೂ ಮುಂದಾಗುತ್ತಿಲ್ಲ. ವಿಧಾನ ಪರಿಷತ್‌ ಚುನಾವಣೆಯಲ್ಲಿ ದೇವೇಗೌಡರು ಹಾಗೂಕುಮಾರಸ್ವಾಮಿ ಬಂದಾಗ ಮಾತ್ರ ಒಗ್ಗಟ್ಟು ಎಂದು ಬಿಂಬಿಸಿಕೊಂಡವರು ಮತ್ತೆ ಒಂದುಗೂಡಲಿಲ್ಲ.ಶಾಸಕರಾದ ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜುಈಗಾಗಲೇ ಕುಮಾರಸ್ವಾಮಿ ಶಕ್ಯದಿಂದ ದೂರಸರಿಯುತ್ತಿದ್ದಾರೆ. ಅತ್ತ ಹಿರಿಯ ಶಾಸಕ ಡಿ.ಸಿ.ತಮ್ಮಣ್ಣ,ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ.

ಕಾಂಗ್ರೆಸ್‌ ಸೇರುವ ಬಗ್ಗೆ ವದಂತಿ :

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಈಗಾಗಲೇ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇವರ ಜತೆಯಲ್ಲಿಯೇ ಶಾಸಕ ಸಿ.ಎಸ್‌.ಪುಟ್ಟರಾಜು, ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇ ಗೌಡ ಅವರು ಕಾಂಗ್ರೆಸ್‌ ಸೇರುವ ಚರ್ಚೆ, ವದಂತಿಗಳು ಹರಿದಾಡುತ್ತಿವೆ. ಈಗಾಗಲೇ ಮರಿತಿಬ್ಬೇಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ ನಡುವೆ ತಮ್ಮ ಆಪ್ತರಿಗೆ ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್‌ ಕೊಡಿಸುವ ನಿಟ್ಟಿನಲ್ಲಿ ಕೋಲ್ಡ್‌ ವಾರ್‌ ನಡೆದಿತ್ತು. ಕೊನೆಗೆ ಶ್ರೀಕಂಠೇಗೌಡ ತಮ್ಮ ಆಪ್ತನಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಮರಿತಿಬ್ಬೇಗೌಡ ಅಸಮಾಧಾನಗೊಂಡಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ ನಾವಿಕನಿಲ್ಲದ ದೋಣಿ :

ಜಿಲ್ಲೆಯಲ್ಲಿ ನಾಯಕತ್ವದ ಕೊರತೆಯೂ ಜೆಡಿಎಸ್‌ ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರು ತಿಳಿಸಿದ್ದರು. ಆದರೆ ಸಾಮೂಹಿಕವಾಗಿ ಶಾಸಕರು ಚುನಾವಣೆಯಲ್ಲಿ ಒಂದಾಗಲೇ ಇಲ್ಲ. ತಮ್ಮ ಕ್ಷೇತ್ರಗಳಿಗೆ ಸೀಮಿತ ರಾಗಿದ್ದರು. ಇದರಿಂದ ಜೆಡಿಎಸ್‌ಗೆ ನಾವಿಕನಿಲ್ಲದ ದೋಣಿಯಂತಾದ ಸ್ಥಿತಿ ಎದುರಾಗಿತ್ತು. ಅಲ್ಲದೆ, ಜಿಲ್ಲೆಯ ಶಾಸಕರಿಗೆ ನಾಯಕತ್ವ ನೀಡುವ ಬದಲು ನಿಖೀಲ್‌ಕುಮಾರಸ್ವಾಮಿ ಅವರಿಗೆ ನೇತೃತ್ವ ವಹಿಸಲಾಗಿತ್ತು. ಇದು ಸಹ ಜಿಲ್ಲೆಯ ಶಾಸಕರಿಗೆಪಕ್ಷದಲ್ಲಿನ ನಾಯಕತ್ವ ಪ್ರಶ್ನಿಸುವಂತಾಗಿತ್ತು. ನಾಯಕತ್ವ ವಿಚಾರದಲ್ಲೂ ಪಕ್ಷದ ವರಿಷ್ಠರನಿರ್ಧಾರಗಳು ಜಿಲ್ಲೆಯಲ್ಲಿನ ಪಕ್ಷದ ಹಿನ್ನಡೆಗೆಕಾರಣವಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಟಾಪ್ ನ್ಯೂಸ್

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ISREL

UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kerala Lottery: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಾಂಡವಪುರದ ಮೆಕ್ಯಾನಿಕ್

Kerala Lottery: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಾಂಡವಪುರದ ಮೆಕ್ಯಾನಿಕ್

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

CM-letter

CM Siddramaiah: “ರಾಜೀನಾಮೆ ನೀಡಬೇಡಿ’ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

14

Punjalkatte; ಸರಕಾರಿ ಶಾಲೆ ಉಳಿಸಲು ನವರಾತ್ರಿ ವೇಷ!

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.