ಅಭಿವೃದ್ಧಿ ಮಾಡಲು ಮಂತ್ರಿ ಆಗಬೇಕಿಲ್ಲ

ಹೊನ್ನಾವರದಲ್ಲಿ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ „ ಶಾಸಕನಾದರೂ ಅಭಿವೃದ್ಧಿ ಮಾಡಬಹುದು: ಚಲುವರಾಯಸ್ವಾಮಿ.

Team Udayavani, Oct 3, 2021, 2:44 PM IST

mandya – joining ceremony to congress

ನಾಗಮಂಗಲ: 1999ರಿಂದ ಇಲ್ಲಿವರೆಗೆ ಆಗಿರುವ ಅಭಿವೃದ್ಧಿ ಕೆಲಸ ತಾಲೂಕಿನ ಜನತೆಗೆ ಗೊತ್ತಿದೆ. ಅಭಿವೃದ್ಧಿ ಮಾಡಲು ಮಂತ್ರಿ ಆಗಬೇಕಿಲ್ಲ, ಶಾಸಕ  ನಾದರೇ ಸಾಕು ಎಂದು ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಮಾರ್ಮಿಕವಾಗಿ ನುಡಿದರು.

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ಎಚ್‌.ಭೂವನಹಳ್ಳಿ ಗ್ರಾಮದ ಹೊನ್ನಮ್ಮ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಜೆಡಿಎಸ್‌ ಕಾರ್ಯಕರ್ತರು, ಮುಖಂಡರ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಇನ್ನೂ ಮುಗಿದಿಲ್ಲ:ಮಾರ್ಕೋನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರ ಹಸ್ತದಿಂದ ಅಡಿಗಲ್ಲು ಹಾಕಿಸಿದ್ದೇ ನಾನು. ಆದರೆ, ಮೂರೂವರೆ ವರ್ಷ ಕಳೆದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಾನೇ ಶಾಸಕನಾಗಿದ್ದರೆ ಒಂದೇ ವರ್ಷದಲ್ಲಿ ಎಲ್ಲಾ ಹಳ್ಳಿಗಳಿಗೆ ನೀರು ಕೊಡುತ್ತಿದ್ದೆ ಎಂದು ಶಾಸಕ ಸುರೇಶ್‌ಗೌಡರ ಕಾರ್ಯ ವೈಖರಿಯನ್ನು ಪರೋಕ್ಷವಾಗಿ ಟೀಕಿಸಿ ದರು.

ನಾಗಮಂಗಲದಿಂದ ಹೊ ನ್ನಾವರ ರಸ್ತೆ ಮೊದಲ ಪ್ಯಾಕೇಜ್‌ ಪೂರ್ಣಗೊಂಡರೆ 2ನೇ ಪ್ಯಾಕೇಜ್‌ ಅನ್ನು ಮುಗಿದಿಲ್ಲ ಇದಕ್ಕೆ ಕಾರಣರ್ಯಾರು ಎಂದು ಪ್ರಶ್ನಿಸಿದರು. ಜಿÇÉೆಯ ಅಭಿವೃದ್ಧಿಗೆ 8 ಸಾವಿರ ಕೋಟಿ ಮೀಸಲಿಟ್ಟಿದ್ದೇನೆ ಎಂದು ಹೇಳುತ್ತಿ¨ªಾರೆ ಅದು ಎಲ್ಲಿಗೆ ಹೋಯಿತು.

ಇವರ ಕೈಯಲ್ಲಿ ಕೇವಲ 100 ಕೋಟಿ ನೀಡಿ ಮೈಷುಗರ್‌ ಕಾರ್ಖಾನೆ ಆರಂಭಿಸಲು ಆಗಲಿಲ್ಲ ಎಂದು ಎಚ್‌ಡಿಕೆ ಸರ್ಕಾರದ ಅವಧಿಯನ್ನು ಹೆಸರೆತ್ತದೆ ವ್ಯಂಗ್ಯವಾಡಿದರು. ನಿನ್ನೆಯಷ್ಟೇ ಏತ ನೀರಾವರಿ ಯೋಜನೆಗೆ ಪೂಜೆ ಮಾಡಿ¨ªಾರೆ ವರ್ಷದೊಳಗೆ ಕೆರೆ-ಕಟ್ಟೆಗೆ ನೀರು ಬಿಡಿಸಿದರೆ ಸಂತೋಷ. ಆಗದಿದ್ದರೆ ಮುಂದೆ ನಮ್ಮ ಕಾಂಗ್ರೆಸ್‌ ಸರ್ಕಾರ ಬರುತ್ತದೆ. ಆಗ ಕಸಬಾ, ಬಿಂಡಿಗನವಿಲೆ ಮತ್ತು ಹೊಣ ಕೆರೆ ಹೋಬಳಿಯ ಇನ್ನುಳಿದ ಗ್ರಾಮಗಳಿಗೆ ಏತ ನೀರಾವರಿ ಮೂಲಕ ನೀರು ತರುತ್ತೇನೆಂದರು.

ಜಿಪಂ ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದು ಆಗುತ್ತೋ ಇಲ್ಲವೋ, ಆದರೆ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿಕೊಡುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಹಸ್ತದ ಗುರುತು:ನೀವೆಲ್ಲ ನನ್ನ ಅಣ್ಣ, ತಮ್ಮಂದಿರಿದ್ದಂತೆ. ನಾನು ಎಲ್ಲರ ನ್ನು ಒಂದೇ ಗೌರವ ವಿಶ್ವಾಸದಿಂದ ಕಾಣುತ್ತೇನೆ. ಪಕ್ಷಕ್ಕೆ ಬರುವವರನ್ನು ಇನ್ನಷ್ಟು ಕರೆತನ್ನಿ. ಕಾಂಗ್ರೆಸ್‌ ಜಾತ್ಯಾ ತೀತ ಪಕ್ಷ. ಮೋದಿ ಬಗ್ಗೆ ಮಾತನಾಡಲು ಬೇಕಾ ದಷ್ಟು ವಿಚಾರ ಗಳಿವೆ. ಕೇವಲ ಜಾತಿ ಎತ್ತಿಕಟ್ಟುವ ಪಕ್ಷ ಬಿಜೆಪಿ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಹಾಲಿಗೆ, ಅಕ್ಕಿಗೆ ಕೊಟ್ಟ ಸಬ್ಸಿಡಿ ಒಕ್ಕಲಿಗರಿ ಗಷ್ಟೇ ಸಿಕ್ಕಿಲ್ಲ.

ಇದನ್ನೂ ಓದಿ:- ರಾಜನಿವಾಸದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್‌

ದಲಿತರು ಸೇರಿ ಸಮಾಜದ ಎಲ್ಲಾ ಜಾತಿ ಜನಾಂಗಗಳಿಗೂ ಸಿಕ್ಕಿದೆ.ಇನ್ನು ಕ್ಷೇತ್ರದಲ್ಲಿ ತನ್ನ ಫೋಟೋ ಜತೆಗೆ ಕಾಂಗ್ರೆಸ್‌ ಹಸ್ತದ ಗುರುತನ್ನು ಬಳಸಿ. ನಾನು ಕಾಂಗ್ರೆಸ್‌ ಎಂಬುದನ್ನು ತೋರಿಸುವ ಕೆಲಸ ಕಾರ್ಯ ಕರ್ತರಿಂದ ಆಗಬೇಕು ಎಂದರು.  ಈ ವೇಳೆ ಹೊನ್ನಾವರ ಗ್ರಾಪಂ ವ್ಯಾಪ್ತಿಯ ಹತ್ತಾರು ಯುವಕರು ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಪ್ರಸನ್ನ, ಮಾಜಿ ಅಧ್ಯಕ್ಷ ಎಚ್‌.ಟಿ.ಕೃಷ್ಣೇಗೌಡ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ತಿಮ್ಮ ರಾಯಿಗೌಡ, ರಾಜ್ಯ ಸಹಕಾರ ಮಹಾ ಮಂಡಲದನಿರ್ದೇಶಕ ಬಿ.ರಾಜೇಗೌಡ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎನ್‌.ಟಿ.ಕೃಷ್ಣಮೂರ್ತಿ, ಮಖಂಡ ಮುಕುಂದ, ಹೊನ್ನಾವರ ಪುಟ್ಟರಾಜು, ಮಾದಹಳ್ಳಿ ಮಂಜು, ಮಾಚನಾಯಕನಹಳ್ಳಿ ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್‌ ಸರ್ಕಾರವಿದ್ದಾಗ ಮೈಷುಗರ್‌ ನಿಂತಿತು-

ನಾಗಮಂಗಲ: ರಾಜ್ಯದಲ್ಲಿ ಜೆಡಿಎಸ್‌ ಪಕ್ಷದವರೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಷುಗರ್‌ ಕಾರ್ಖಾನೆ ಸ್ಥಗಿತಗೊಂಡಿದ್ದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಚೆನ್ನಾಗಿದ್ದೇನೆಂದು ಹೇಳಿಕೊಂಡಿದ್ದವರು ಕಾರ್ಖಾನೆಯನ್ನು ಮುಂದುವರಿಸಬೇಕಿತ್ತು ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಪರೋಕ್ಷವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕುಟುಕಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ 8ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾಗಿ ಹೇಳಿಕೆ ನೀಡುತ್ತಿರುವವರು ಅದನ್ನು ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿಡಲು ಸಾಧ್ಯವೇ?. ಅದರಲ್ಲಿ 100ಕೋಟಿ ಅನುದಾನವನ್ನು ಮೈಷುಗರ್‌ಗೆ ಕೊಟ್ಟು ಕಾರ್ಖಾನೆ ಆರಂಭಿಸಬಹುದಿತ್ತಲ್ಲವೇ ಎಂದು ಹೆಸರೇಳದೆ ಎಚಿxಕೆ ವಿರುದ್ಧ ವ್ಯಂಗ್ಯವಾಡಿದರು.

ಈ ಹಿಂದಿನ ಸರ್ಕಾರದಲ್ಲಿ ಅನುಮೋದನೆಗೊಂಡು, ಡಿಪಿಆರ್‌ ಆದ ರಸ್ತೆಗಳ ಕೆಲಸ ಈಗ ಆಗುತ್ತಿದೆ. ಇವರು ಏನು ಮಾಡಿದ್ದಾರೆಂಬುದು ಒಂದೂವರೆ ವರ್ಷ ಕಳೆದ ನಂತರವಷ್ಟೇ ಗೊತ್ತಾಗುತ್ತದೆ ಎಂದು ಶಾಸಕ ಸುರೇಶ್‌ ಗೌಡಗೆ ಟಾಂಗ್‌ ನೀಡಿದರಲ್ಲದೇ, ಇಲ್ಲಿನ ಅಭಿವೃದ್ಧಿ ಬಗ್ಗೆ ಜನ ಮಾತನಾಡುತ್ತಾರೆ ಬಿಡಿ ಎಂದರು

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

CM-letter

CM Siddramaiah: “ರಾಜೀನಾಮೆ ನೀಡಬೇಡಿ’ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.