ನಿತ್ಯ 3,500 ಟನ್ ಕಬ್ಬು ಅರೆದರಷ್ಟೇ ಲಾಭ!
Team Udayavani, Jun 20, 2023, 1:26 PM IST
ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯು ಕಬ್ಬು ಅರೆಯಲು ಸಜ್ಜಾಗಿದ್ದು, ಈಗಾಗಲೇ ಸಾಂಕೇತಿಕವಾಗಿ ಬಾಯ್ಲರ್ ಅಗ್ನಿಸ್ಪರ್ಶ ಮಾಡಲಾಗಿದೆ. ಆದರೆ, ಇದೀಗ ಹೆಚ್ಚು ಕಬ್ಬು ಕಾರ್ಖಾನೆಗೆ ಅಗತ್ಯವಾಗಿದ್ದು, ಪ್ರತಿದಿನ 3500 ಟನ್ ಕಬ್ಬು ಅರೆದರೆ ಮಾತ್ರ ಲಾಭದಾಯಕವಾಗಲಿದೆ.
ಕಳೆದ ವರ್ಷ ತರಾತುರಿಯಲ್ಲಿ ಕಾರ್ಖಾನೆ ಆರಂಭಿ ಸಿ ದ್ದರಿಂದ ಸರಿಯಾದ ಸಮಯಕ್ಕೆ ಕಬ್ಬು ಸಿಗಲಿಲ್ಲ. ಪ್ರತಿದಿನ ಅಗತ್ಯ ಪ್ರಮಾಣದಷ್ಟೂ ಅರೆಯಲು ಸಾಧ್ಯವಾಗಲಿಲ್ಲ. ಆದರೆ, ಈ ವರ್ಷ ಬೇಗನೇ ಕಾರ್ಖಾನೆ ಆರಂಭಿಸಲಾ ಗುತ್ತಿದೆ. ಯಂತ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಪ್ರಾರಂಭ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ.
ಮುಗಿಯದ ದುರಸ್ತಿ ಕಾರ್ಯ: ಪ್ರತಿದಿನ ಕಾರ್ಖಾನೆಯಲ್ಲಿ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ವಿದೆ. ಆದರೆ, ಅಧಿಕಾರಿಗಳು ಯಂತ್ರ ಗಳನ್ನು ಯಾವ ರೀತಿ ನಿರ್ವಹಣೆ ಮಾಡುವುದರ ಮೇಲೆ ನಿಂತಿದೆ. ಪ್ರತಿದಿನ 3500 ಟನ್ ಕಬ್ಬು ಅರೆದರೆ ಮಾತ್ರ ಕಾರ್ಖಾನೆ ಲಾಭದಾಯಕದತ್ತ ಸಾಗಲಿದೆ. ಆ ನಿಟ್ಟಿನಲ್ಲಿ ಕಾರ್ಖಾನೆಯ ಯಂತ್ರಗಳ ಸುಸ್ಥಿತಿಯ ಲ್ಲಿಡ ಬೇಕಾದ ಜವಾಬ್ದಾರಿ ಸರ್ಕಾರ ಹಾಗೂ ಅಧಿಕಾರಿಗಳ ಮೇಲಿದೆ. ಆದರೆ, ಇನ್ನೂ ದುರಸ್ತಿ ಕಾರ್ಯ ನಡೆ ಯುತ್ತಲೇ ಇದೆ. ಫೆಬ್ರವರಿಯಲ್ಲಿ ಕಾರ್ಖಾನೆ ನಿಂತಿತ್ತು. ಇಷ್ಟೊತ್ತಿಗಾಗಲೇ ಕಾರ್ಖಾನೆಯ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಇನ್ನೂ ಮುಗಿದಿಲ್ಲ.
ಕಳೆದ ವರ್ಷ 300-600 ಟನ್ ಅರೆದಿದ್ದ ಕಾರ್ಖಾನೆ: ಕಳೆದ ವರ್ಷ ಕಾರ್ಖಾನೆ ಪ್ರತಿದಿನ 1 ಸಾವಿರ ಟನ್ ಕಬ್ಬು ಅರೆಯಲು ಸಾಧ್ಯ ವಾಗಿ ರಲಿಲ್ಲ. ಕೇವಲ 300ರಿಂದ 600 ಟನ್ ಅರೆಯಲಾ ಗುತ್ತಿತ್ತು. ಇದರಿಂದ ಪ್ರಾರಂಭದಲ್ಲಿ ಅಗತ್ಯದಷ್ಟು ಕಬ್ಬು ಬಂದರೂ ಕಾರ್ಖಾನೆ ಮಾತ್ರ ಸರಿ ಯಾದ ಪ್ರಮಾಣದಲ್ಲಿ ಕಬ್ಬು ಅರೆಯಲಿಲ್ಲ. ಇದರಿಂದ ರೈತರು ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿ ದರು. ಇದರಿಂದ ಕೊನೆಯಲ್ಲಿ ಕಬ್ಬಿನ ಕೊರತೆ ಎದುರಾಗಿತ್ತು.
ಇಳುವರಿ ಅಗತ್ಯ: ಪ್ರತಿದಿನ 3500 ಟನ್ ಕಬ್ಬು ಅರೆಯುವುದಲ್ಲದೆ, ಇಳುವರಿಯೂ ಅಗತ್ಯವಾಗಿದೆ. ಶೇ.10ರಷ್ಟು ಇಳುವರಿ ತೆಗೆದರೆ ಕಾರ್ಖಾನೆ ಲಾಭ ದಾಯಕ ವಾಗಲಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸ ಬೇಕಾಗಿದೆ. ಅಲ್ಲದೆ, ಗುಣಮಟ್ಟದ ಸಕ್ಕರೆ ಉತ್ಪಾದನೆ ಮಾಡಲು ಆದ್ಯತೆ ನೀಡಬೇಕಾಗಿದೆ. ತಾಂತ್ರಿಕ ತಜ್ಞರ ಕೊರತೆಯಿಂದ ಕಳಪೆ ಗುಣಮಟ್ಟದ ಸಕ್ಕರೆ ಉತ್ಪಾದನೆ ಮಾಡಿರುವುದು ಕಂಡು ಬಂದಿತ್ತು. ಅದು ಮತ್ತೆ ಪುನರಾವರ್ತನೆಯಾಗದಂತೆ ಕ್ರಮ ವಹಿಸಬೇಕಾಗಿದೆ.
ಕಬ್ಬು ಕೊರತೆಗೆ ಅಧಿಕಾರಿಗಳೇ ಕಾರಣ?: ನಿಗದಿತ ಸಮಯಕ್ಕೆ ಕಾರ್ಖಾನೆಯನ್ನು ಆರಂಭಿಸದಿರುವುದು ಕಬ್ಬು ಕೊರತೆಗೆ ಕಾರಣವಾಗಲಿದೆ. ಇದಕ್ಕೆ ಕಾರ್ಖಾನೆಯ ಅಧಿಕಾರಿಗಳು ಕಾರಣರಾಗಲಿದ್ದಾರೆ. ಕಬ್ಬು ಸರಬರಾಜು ಮಾಡಿದಂತೆ ಅಗತ್ಯಕ್ಕೆ ತಕ್ಕಂತೆ ಕಬ್ಬು ಅರೆದರೆ ರೈತರಿಗೂ ನಂಬಿಕೆ ಬರಲಿದೆ. ಆದರೆ, ಯಂತ್ರಗಳಲ್ಲಿ ದೋಷ ಕಂಡು ಬಂದು ಕಾರ್ಖಾನೆ ಅರ್ಧಕ್ಕೆ ನಿಂತರೆ ರೈತರು ಕಬ್ಬು ಸರಬರಾಜು ಮಾಡಲು ಹಿಂದೇಟು ಹಾಕುತ್ತಾರೆ. ಇದು ಕಳೆದ ವರ್ಷವೂ ಪರಿಸ್ಥಿತಿ ಇತ್ತು.
5 ಲಕ್ಷ ಟನ್ ಕಬ್ಬು ಒಪ್ಪಿಗೆ: ಪ್ರಸ್ತುತ ಕಾರ್ಖಾನೆಯು 5 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದೆ. ಮೈಷುಗರ್ ವ್ಯಾಪ್ತಿಯಲ್ಲಿ ಸುಮಾರು 7ರಿಂದ 8 ಲಕ್ಷ ಟನ್ ಕಬ್ಬು ಸಿಗಲಿದೆ. ಆದರೆ, ಈಗಾಗಲೇ 5 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಇದನ್ನು ಸಂಪೂರ್ಣವಾಗಿ ಅರೆಯಬೇಕಾಗಿದೆ. ಕಳೆದ ವರ್ಷವೂ 3 ಲಕ್ಷ ಟನ್ ಗುರಿ ಹೊಂದಲಾಗಿತ್ತು. ಆದರೆ, ಅರೆದಿದ್ದು ಮಾತ್ರ ಕೇವಲ 1.01 ಲಕ್ಷ ಟನ್ ಮಾತ್ರ. ಇದರಿಂದ ರೈತರು ಕಬ್ಬು ಸರಬರಾಜು ಮಾಡಲು ಹಿಂದೇಟು ಹಾಕಿದ್ದರು. ಆದರೆ, ಈ ಬಾರಿ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಿದರೆ ಮಾತ್ರವೇ ಕಾರ್ಖಾನೆ ಲಾಭದತ್ತ ನಡೆಯಲು ಸಾಧ್ಯ.
ಮೈಷುಗರ್ ವ್ಯಾಪ್ತಿ ಕಬ್ಬಿನ ಮೇಲೆ ಖಾಸಗಿಯವರ ಕಣ್ಣು : ಈಗಾಗಲೇ ಖಾಸಗಿ ಕಾರ್ಖಾನೆಗಳು ಆರಂಭಗೊಂಡಿವೆ. ಮೈಷುಗರ್ ಕಾರ್ಖಾನೆ ಕಳೆದ ಸೆಪ್ಟಂಬರ್‌ನಲ್ಲಿ ಆರಂಭಗೊಂಡು ಫೆಬ್ರವರಿಯಲ್ಲಿ ಕಬ್ಬು ಅರೆಯುವಿಕೆ ನಿಲ್ಲಿಸಲಾಗಿತ್ತು. ಖಾಸಗಿ ಕಾರ್ಖಾನೆಗಳು ಏಪ್ರಿಲ್‌ನಲ್ಲಿ ನಿಲ್ಲಿಸಿದ್ದವು. ಆದರೆ, ಈಗಾಗಲೇ ಖಾಸಗಿ ಕಾರ್ಖಾನೆಗಳು ಆರಂಭಗೊಂಡಿವೆ. ಇದರಿಂದ ಮೈಷುಗರ್ ವ್ಯಾಪ್ತಿಯ ಕಬ್ಬು ಖಾಸಗಿ ಕಾರ್ಖಾನೆಗಳ ಪಾಲಾಗುವ ಸಾಧ್ಯತೆ ಇದೆ. ಆದ್ದರಿಂದ ಮೈಷುಗರ್ ಕಾರ್ಖಾನೆಯನ್ನು ಶೀಘ್ರ ದುರಸ್ತಿಗೊಳಿಸಿ ಕಾರ್ಯಾರಂಭ ಮಾಡಬೇಕಿದೆ. ಅಧಿಕಾರಿಗಳು ಜೂನ್ ಅಂತ್ಯದಲ್ಲಿ ಆರಂಭಿಸಲಾಗುವುದು ಎಂದು ಹೇಳುತ್ತಿದ್ದಾರೆ.
ಆದರೆ, ಕಾರ್ಖಾನೆಯ ಪರಿಸ್ಥಿತಿ ಅವಲೋಕಿಸಿದರೆ ಆರಂಭದ ಲಕ್ಷಣಗಳ ಸಾಧ್ಯತೆ ಕಡಿಮೆ ಇದ್ದಂತಿದೆ.
ಪ್ರಸ್ತುತ ಸಾಲಿನಲ್ಲಿ ಕಾರ್ಖಾನೆಯಿಂದ 5 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಸಂಪೂರ್ಣವಾಗಿ ಅರೆಯಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೈಷುಗರ್ ವ್ಯಾಪ್ತಿಯಲ್ಲಿ 7 ಲಕ್ಷ ಟನ್ ಲಭ್ಯವಿದ್ದು, ಅದರಲ್ಲಿ 5 ಲಕ್ಷ ಟನ್ ಕಬ್ಬು ಕಾರ್ಖಾನೆ ಅರೆಯಲಿದೆ. -ಚಂದ್ರಶೇಖರ್, ಕಬ್ಬು ಅಭಿವೃದ್ಧಿ ಅಧಿಕಾರಿ, ಮೈಷುಗರ್ ಕಾರ್ಖಾನೆ
-ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.