4ರಂದು ಮಂಡ್ಯ ನಗರ 5ನೇ ಕನ್ನಡ ಸಾಹಿತ್ಯ ಸಮ್ಮೇಳನ  


Team Udayavani, Jan 1, 2023, 12:42 PM IST

tdy-12

ಮಂಡ್ಯ: ನಗರ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜ.4ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಂಡ್ಯ ನಗರ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಯುವ ಸಾಹಿತಿ ಹಾಗೂ ನವೋದಯ ತರಬೇತಿ ಸಂಸ್ಥೆಯ ಅಧ್ಯಕ್ಷೆ ಡಾ.ಎಚ್‌.ಆರ್‌.ಕನ್ನಿಕಾ ಅವರನ್ನು ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಮ್ಮೇ ಳನ ಸ್ವಾಗತ ಸಮಿತಿ ಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ ಜಯರಾಂ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೊಂದು ಮಹಿಳಾ ಪ್ರಾತಿನಿಧ್ಯದ ಸಮ್ಮೇಳನ. ಬೆಂಗಳೂರು ಕಿದ್ವಾಯಿ ಆಸ್ಪತ್ರೆ ಸಹಕಾರದಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ಅಂಬೇಡ್ಕರ್‌ ಭವನದಲ್ಲಿ ಸ್ತನ ಕ್ಯಾನ್ಸರ್‌, ಗರ್ಭಕೋಶ ಕ್ಯಾನ್ಸರ್‌ ತಪಾಸಣೆ, ಕಿಮ್ಸ್‌ ಆಸ್ಪತ್ರೆ ಸಹಕಾರದೊಂದಿಗೆ ಕಣ್ಣು ಮತ್ತು ದಂತ ತಪಾಸಣೆ, ಎಸ್‌.ಡಿ.ಜಯರಾಂ ಆಸ್ಪತ್ರೆ ಸಹಯೋಗದಲ್ಲಿ ಫೈಲ್ಸ್‌ (ಮೊಳೆರೋಗ), ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆ ಮಾಡಲಾಗುವುದೆಂದರು.

ಇನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಆಯು ಷ್ಮಾನ್‌ ಭಾರತ್‌ ಕಾರ್ಡ್‌ ವಿತರಣೆ, ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಹಾಗೂ ಆಧಾರ್‌ ಸಂಖ್ಯೆ ಜೋಡಣೆ, ನಮೂನೆ 9 ಅರ್ಜಿ ಸ್ವೀಕರಿಸಲಾಗುವುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹರಿಗೆ ಮಾಸಾಶನ ಮಾಡಿಸಿಕೊಡಲಾಗುವುದು. ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಮಳಿಗೆ ತೆರೆಯಲಾಗುವುದು. ಅಲ್ಲಿ ತಿಂಡಿ ತಿನಿಸು ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ. ರವಿಕುಮಾರ ಚಾಮ ಲಾಪುರ ಮಾತನಾಡಿ, ನಗರದ ರೈತ ಸಭಾಂಗಣದ ಆವರಣದಿಂದ ಹೊರಡುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಚಾಲನೆ ನೀಡು ವರು. ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಜಯ ರಾಮ ರಾಯಪುರ ಆಶಯ ನುಡಿಗಳನ್ನಾಡುವರು. ಸಮ್ಮೇಳನ ಅಧ್ಯಕ್ಷೆ ಕನ್ನಿಕಾ ಅವರ ಹಣತೆ ಕವನ ಸಂಕಲನವನ್ನು ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ ಬಿಡುಗಡೆ ಮಾಡುವರು ಎಂದು ತಿಳಿಸಿದರು.

ಹುಲಿ ಮಂಜುನಾಥ್‌ ಕಾಳೇನಹಳ್ಳಿ ತಂಡದಿಂದ ಸಿದ್ದಪ್ಪಾಜಿ ಕಥಾಪ್ರಸಂಗ ನಡೆಯಲಿದ್ದು, ಮಧ್ಯಾಹ್ನ 2ಕ್ಕೆ ಸಾಹಿತ್ಯ ಮತ್ತು ರಾಷ್ಟ್ರೀಯತೆ ಕುರಿತು ಮೈಸೂರಿನ ಅಂಕಣ ಬರಹಗಾರ ಡಾ.ರಂಗನಾಥ್‌, ಯುವಜನತೆ ಮತ್ತು ಸಾಹಿತ್ಯ ಕುರಿತಾಗಿ ಪ್ರಸನ್ನಕುಮಾರ್‌ ಕೆರ ಗೋಡು, ಸಾಹಿತ್ಯ, ಶಿಕ್ಷಣ ಮತ್ತು ಸಹಕಾರ ಕ್ಷೇತ್ರಗಳಿಗೆ ಮಂಡ್ಯ ನಗರದ ಕೊಡುಗೆ ಕುರಿತಾಗಿ ನಿವೃತ್ತ ಪ್ರಾಂಶುಪಾಲ ಶಿಕ್ಷಣ ತಜ್ಞ ಡಾ.ಎಸ್‌.ಬಿ.ಶಂಕರಗೌಡ ಉಪನ್ಯಾಸ ನೀಡುವರು ಎಂದರು.

ಖ್ಯಾತ ಹರಟೆ ಮಲ್ಲರಾದ ರಿಚರ್ಡ್‌ ಲೂಯಿಸ್‌, ಮಿಮಿಕ್ರಿ ಗೋಪಿ, ಕಿರ್ಲೋಸ್ಕರ್‌ ಸತ್ಯ, ಅಸಾದುಲ್ಲಾ ಬೇಗ್‌ ತಂಡದಿಂದ ಮಧ್ಯಾಹ್ನ 2.30ಕ್ಕೆ ಹಾಸ್ಯಗೋಷ್ಠಿ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಸಮಾ ರೋಪದ ಅಧ್ಯಕ್ಷತೆಯನ್ನು ಸಚಿವ ಕೆ.ಸಿ.ನಾರಾಯಣ ಗೌಡ ವಹಿಸುವರು. ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಸಮಾರೋಪ ಭಾಷಣ ಮಾಡುವರು. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡುವರು ಎಂದರು.

ವಿವಿಧ ಕ್ಷೇತ್ರದ ಸಾಧಕರಾದ ಡಿ.ಮಂಜುನಾಥ್‌, ಕೆ.ಬಿ.ಜವರೇಗೌಡ, ಪುಷ್ಪ ಕಕ್ಕಿಲಾಯ, ಎಂ.ಸಿ. ರಾಜಗೋಪಾಲ್‌, ಹಸೀನಾ ತಾಜ್‌, ಬಿ.ಟಿ. ಗುರುರಾಜ್‌ ಮತ್ತಿತರರಿಗೆ ಸನ್ಮಾನ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರ ಘಟಕದ ಅಧ್ಯಕ್ಷೆ ಸುಜಾತಾಕೃಷ್ಣ, ಮಂಡ್ಯ ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ, ಚಂದ್ರಕುಮಾರ್‌ ಮತ್ತಿತರರು ಇದ್ದರು.

ಜಿಪಂ ಸಿಇಒಯಿಂದ ರಾಷ್ಟ್ರಧ್ವಜಾರೋಹಣ: ಅಂದು ಬೆಳಗ್ಗೆ 8.30ಕ್ಕೆ ರಾಷ್ಟ್ರಧ್ವಜವನ್ನು ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ, ನಾಡಧ್ವಜವನ್ನು ಅಶೋಕ್‌ ಜಯರಾಂ, ಪರಿಷತ್‌ ಧ್ವಜಾರೋಹಣ ನೆರವೇರಿಸುವರು. 10.30ಕ್ಕೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರಸಭೆ ಅಧ್ಯಕ್ಷ ಎಚ್‌. ಎಸ್‌.ಮಂಜು ಉದ್ಘಾಟಿಸುವರು.

ಈ ವೇಳೆ ಪತ್ರಕರ್ತ ಹೊಳಲು ಶ್ರೀಧರ್‌ ಅವರ “ಪದ ಸಂಚಯ’ ಕೃತಿಯನ್ನು ಜಿಲ್ಲಾ ಧಿಕಾರಿ ಡಾ.ಎಚ್‌. ಎನ್‌.ಗೋಪಾಲಕೃಷ್ಣ ಬಿಡುಗಡೆ ಮಾಡುವರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ತಿಳಿಸಿದರು.

ಟಾಪ್ ನ್ಯೂಸ್

Jammu–Fire-LOC

Line of Control: ಭಾರತ, ಪಾಕ್‌ ಗಡಿಯಲ್ಲಿ ಗುಂಡಿನ ಚಕಮಕಿ: ಯಾವುದೇ ಅಪಾಯವಿಲ್ಲ

MH-CM-Fadanavis

Inter Faith: ಅಂತರ್‌ಧರ್ಮೀಯ ವಿವಾಹಗಳು ತಪ್ಪಲ್ಲ: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

supreme-Court

Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್‌ ಅಪರಾಧವಲ್ಲ: ಸುಪ್ರೀಂಕೋರ್ಟ್‌

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Mandya-Mur

Mandya: ತಮ್ಮನ ಕೊಲೆಗೆ ಸುಪಾರಿ ನೀಡಿ, ಕುಂಭಮೇಳಕ್ಕೆ ಹೋದ ಅಣ್ಣ!

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

1-dess

Mandya: ಬೆಳ್ಳಂಬೆಳಗ್ಗೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹ*ತ್ಯೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jammu–Fire-LOC

Line of Control: ಭಾರತ, ಪಾಕ್‌ ಗಡಿಯಲ್ಲಿ ಗುಂಡಿನ ಚಕಮಕಿ: ಯಾವುದೇ ಅಪಾಯವಿಲ್ಲ

MH-CM-Fadanavis

Inter Faith: ಅಂತರ್‌ಧರ್ಮೀಯ ವಿವಾಹಗಳು ತಪ್ಪಲ್ಲ: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

supreme-Court

Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್‌ ಅಪರಾಧವಲ್ಲ: ಸುಪ್ರೀಂಕೋರ್ಟ್‌

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.