![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 13, 2021, 8:24 PM IST
ಮಂಡ್ಯ: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ವ್ಯಾಪ್ತಿಯಆಶಾ ಕಾರ್ಯಕರ್ತೆಯರ ಮತ್ತು ಪೌರಕಾರ್ಮಿಕರ ಸೇವೆ ಅನನ್ಯ ಎಂದು ಲಾರಿ ಮಾಲಿಕರ ಸಂಘದಅಧ್ಯಕ್ಷ ಕುಮಾರ್ ಹೇಳಿದರು.
ತಾಲೂಕಿನ ದುದ್ದಹೋಬಳಿ ಹಾಡ್ಯ ಗ್ರಾಮದಸರ್ಕಾರಿ ಶಾಲೆ ಆವರಣದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅಭಿಮಾನಿಗಳ ಬಳಗ ಮತ್ತುಗಂಗಾಭೈರವೇಶ್ವರ ಯುವಕರ ಸಂಘದವತಿಯಿಂದ ಹುಳ್ಳೇನಹಳ್ಳಿ ಗ್ರಾಪಂ ವ್ಯಾಪ್ತಿಯಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆನಡೆದ ಸನ್ಮಾನ ಕಾರ್ಯಕ್ರಮದಲ್ಲಿಮಾತನಾಡಿದರು.
ಸೋಂಕಿನ 2ನೇ ಅಲೆಯಲ್ಲಿ ಗ್ರಾಮೀಣ ಜನಸಂಕಷ್ಟಕ್ಕೆ ಸಿಲುಕಿದ್ದಾರೆ. ಕಡು ಬಡವರು ಕೂಲಿಇಲ್ಲದೆ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕಸಿ.ಎಸ್.ಪುಟ್ಟರಾಜು, ವಾರಿಯರ್ ಆಗಿ ಕ್ಷೇತ್ರದಜನರ ಆರೋಗ್ಯ ಸಮಸ್ಯೆ ಮತ್ತು ಸಂಕಷ್ಟಕ್ಕೆತಕ್ಷಣವೇ ಸ್ಪಂದಿಸುತ್ತಿದ್ದಾರೆಂದರು.
ರಕ್ಷಣಾ ಸಾಮಗ್ರಿ ನೀಡಿ: ಜನ ಆಶಾ ಕಾರ್ಯಕರ್ತೆಯರ ಸಲಹೆ ಮತ್ತು ಮಾತುಗಳನ್ನು ಕೇಳಬೇಕು.ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡಿರುವಮಾರ್ಗಸೂಚಿ ಪಾಲಿಸಿ, ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕೆಂದರು. ಪೌರ ಕಾರ್ಮಿ ಕರಿಗೆ ಮೂಲಸೌಲಭ್ಯ ಒದಗಿಸುವತ್ತ ಸರ್ಕಾರ, ಜನಪ್ರತಿನಿಧಿಗಳು ನೆರವಾಗಬೇಕು. ಆರೋಗ್ಯ ಹಿತದೃಷ್ಟಿಯಿಂದರಕ್ಷಣಾ ಸಾಮಗ್ರಿ ನೀಡಬೇಕು ಎಂದರು.
ಆಹಾರ ಪದಾರ್ಥ ಕಿಟ್: ಹುಳ್ಳೇನಹಳ್ಳಿ ಗ್ರಾಪಂವ್ಯಾಪ್ತಿಯ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವಆಶಾ ಕಾರ್ಯಕರ್ತೆಯರಿಗೆ ಮತ್ತುಪೌರಕಾರ್ಮಿಕರಿಗೆ ಗಣ್ಯರು ಅಭಿನಂದನೆ ಸಲ್ಲಿಸಿ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.ಶ್ರೀಗಂಗಾಭೈರವೇಶ್ವರ ಯುವಕರ ಸಂಘದಅಧ್ಯಕ್ಷ ಹಾಡ್ಯ ಉಮೇಶ್, ತಾಪಂ ಸದಸ್ಯಬೆಟ್ಟಸ್ವಾಮಿ, ಗ್ರಾಪಂ ಸದಸ್ಯರಾದ ಆತ್ಮಾನಂದ, ದೊಳ್ಳೇಗೌಡ, ಶಿವಕುಮಾರ್, ಮರಿಲಿಂಗಯ್ಯ,ಬಸವಣ್ಣ, ಗ್ರಾಪಂ ಅಧ್ಯಕ್ಷೆ ರಮ್ಯಾ, ನಂದಿನಿಗೌರಮ್ಮ, ಕೆಂಚಯ್ಯ, ಬದ್ರಿನಾರಾಯಣ್,ರಾಘವೇಂದ್ರ ಮತ್ತಿತರರಿದ್ದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.