ಕಾವೇರಿ ನದಿ ಜೋಡಣೆಗೆ ಸಕ್ಕರೆ ನಾಡು ವಿರೋಧ
ತಮಿಳುನಾಡಿನ ಯೋಜನೆ ತಡೆಗೆ ಸರ್ಕಾರ ಮುಂದಾಗಲಿ ,ಕೇಂದ್ರದ ಮಲತಾಯಿ ಧೋರಣೆಗೆ ಕಿಡಿ
Team Udayavani, Feb 24, 2021, 1:12 PM IST
ಮಂಡ್ಯ: ಕಾವೇರಿ ನದಿ ನೀರನ್ನು ಬೇರೆಡೆಗೆಕೊಂಡೊಯ್ಯುವ ತಮಿಳುನಾಡಿನ ಯೋಜನೆಗೆ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ತಡೆಗೆ ಮುಂದಾಗಬೇಕು ಎಂದು ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಏನಿದು ಯೋಜನೆ?: ತಮಿಳುನಾಡಿನ ವೆಲ್ಲಾರು,ವೈಗೈ ಮತ್ತು ಗುಂಡರ್ ನದಿಗಳನ್ನು ಕಾವೇರಿ ನದಿಗೆ ಜೋಡಣೆ ಮಾಡುವ ಮೂಲ ನೀರನ್ನು ಬೇರೆ ಯೋಜನೆಗೆ ಬಳಸಲು ಮುಂದಾಗಿದೆ. ಇದರಿಂದ ಕರ್ನಾಟಕದ ಕಾವೇರಿ ಕಣಿವೆಯ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ತಮಿಳುನಾಡಿನ ಯೋಜನೆಗೆ ತಡೆಗೆ ರಾಜ್ಯ ಸರ್ಕಾರ ಮನವಿಸಲ್ಲಿಸಬೇಕು ಎಂಬ ಆಗ್ರಹಗಳು ಜಿಲ್ಲಾದ್ಯಂತ ಕೇಳಿ ಬರುತ್ತಿದೆ.
140 ಟಿಎಂಸಿ ನೀರು ಹೊರಗೆ ಕೊಂಡೊಯ್ಯುವ ಉದ್ದೇಶ: ಹೇಮಾವತಿ, ಕಬಿನಿ ಮತ್ತು ಕೆಆರ್‌ಎಸ್ ಮೇಲ್ಭಾಗದಲ್ಲಿ ಸಂಗ್ರಹವಾದ ನೀರಿನಿಂದ ತಮಿಳುನಾಡಿಗೆ ನೀಡಬೇಕಾದ ನೀರನ್ನು ಹರಿಸಲಾಗುತ್ತಿತ್ತು. ಈ ಮೂರೂ ಜಲಾಶಯದ ಕೆಳಭಾಗದಿಂದ ಹರಿಯುವ ಹೆಚ್ಚುವರಿ 140 ಟಿಎಂಸಿ ನೀರನ್ನು ಕಣಿವೆಯ ಹೊರಗೆ ಕೊಂಡೊಯ್ಯವ ಸುಮಾರು 261.45 ಕಿ.ಮೀ ಉದ್ದದ ಕಾಲುವೆಗಳನ್ನು ನಿರ್ಮಿಸಿ, ನೀರು ಕೊಂಡೊಯ್ಯುವ ಉದ್ದೇಶವಾಗಿದೆ.
ಆದೇಶ ಉಲ್ಲಂಘನೆ: ಕಾವೇರಿ ನೀರನ್ನು ಹೊರ ಭಾಗಕ್ಕೆ ಕೊಂಡೊಯ್ಯುವ ಮೂಲಕ ಕಾವೇರಿ ನದಿ ನ್ಯಾಯಾಕರಣ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ. 2007ರಲ್ಲಿ ಪ್ರಾಧಿಕಾರ ರಚನೆಯಾದಾಗ ಕಾವೇರಿ ನದಿಯ ನೀರನ್ನು ಯಾವುದೇ ಇತರ ಪ್ರದೇಶಗಳಿಗೆ ಹಂಚುವಂತಿಲ್ಲ ಎಂಬ ನಿಯಮ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.
ರಾಜ್ಯ ಸರ್ಕಾರದ ವೈಫಲ್ಯ: ರಾಜ್ಯ ಸರ್ಕಾರದ ವೈಫಲ್ಯದಿಂದ ಕಾವೇರಿ ನದಿ ನೀರನ್ನು ತಮಿಳುನಾಡು ಇತರ ಭಾಗಗಳ 1054 ಕೆರೆಗಳನ್ನು ತುಂಬಿಸಿ, 1,09,962 ಎಕರೆ ಪ್ರದೇಶದ ಭೂಮಿಗೆನೀರೊದಗಿಸುವ ಯೋಜನೆ ರೂಪಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ನಮ್ಮ ಕೆರೆಗಳಿಗೆ ನೀರು ತುಂಬಿಸುವ ಅಥವಾ ಹೆಚ್ಚವರಿ ಕೃಷಿ ಭೂಮಿ ಹೊಂದುವ ಹಾಗೂ ನೀರೊದಗಿಸುವ ಹಕ್ಕಿಗೆಪ್ರಾಧಿಕಾರ ತಡೆಯೊಡ್ಡಿದೆ. ನಮಗೆ ನೀರಿಲ್ಲದಿರುವಾಗ ನಮ್ಮ ಜಲಾಶಯಗಳ ಕೆಳಭಾಗದ ನೀರನ್ನು ಬಳಸುವ ಹುನ್ನಾರ ಇದಾಗಿದೆ.
ಕೇಂದ್ರದಿಂದ ಮಲತಾಯಿ ಧೋರಣೆ: ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳೆರಡಕ್ಕೂ ಅನುಕೂಲವಾಗುವ ಮೇಕೆದಾಟು ಯೋಜನೆಗೆಅನುಮತಿ ನೀಡದೆ, ತಮಿಳುನಾಡಿನ ನದಿ ಜೋಡಣೆ ಮಾಡಿ ನೀರನ್ನು ಬೇರೆಡೆ ಕೊಂಡೊಯ್ಯುವ ಯೋಜನೆಗೆ ಅನುಮತಿ ನೀಡಿ ಯೋಜನೆಗೆ 6491ಕೋಟಿ ರೂ. ಅನುದಾನ ನೀಡುತ್ತಿರುವುದು ಸರಿಯಲ್ಲ ಎಂದು ಕಾವೇರಿ ಕಣಿವೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ವೆಲ್ಲಾರು, ವೈಗೈ ಮತ್ತು ಗುಂಡರ್ ನದಿಗಳನ್ನು ಕಾವೇರಿ ನದಿಗೆಜೋಡಣೆ ಮಾಡಿ, ಕಾವೇರಿ ತಪ್ಪಲಿನ ರೈತರಿಗೆ ಅನ್ಯಾಯವೆಸಗುವ ತಮಿಳುನಾಡಿನ ಯೋಜನೆಗೆ ತಡೆಗೆರಾಜ್ಯ ಸರ್ಕಾರ ಮನವಿ ಸಲ್ಲಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಕುಡಿಯುವ ನೀರಿಗೂ ತೊಂದರೆಯಾಗಲಿದೆ. – ಬಿ.ಶಿವಲಿಂಗಯ್ಯ, ಮಾಜಿ ಅಧ್ಯಕ್ಷ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಮೇಕೆದಾಟುವಿನಲ್ಲಿ ಉಷ್ಣ ಸ್ಥಾವರ ನಿರ್ಮಾಣ ಮಾಡಲಿದ್ದಾರೆ ಎಂದು ನ್ಯಾಯಾಂಗ ನಿಂದನೆ ಹೆಸರಿನಲ್ಲಿ ತಮಿಳುನಾಡುಸರ್ಕಾರ ತಡೆಯೊಡ್ಡಿದೆ. ಈಗ ತಮಿಳುನಾಡು ಸರ್ಕಾರ ಮಾಡುತ್ತಿರುವುದನ್ನು ಪ್ರಶ್ನಿಸಿ, ಸರ್ಕಾರಮೇಲ್ಮನವಿ ಸಲ್ಲಿಸಬೇಕು. ಕಾವೇರಿ ಕಣಿವೆಯ ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು, ರೈತರು, ಸಾರ್ವಜನಿಕರು ಕೂಡಲೇ ಎಚ್ಚೆತ್ತುಕೊಂಡುತಮಿಳುನಾಡು ಸರ್ಕಾರದ ತಂತ್ರ, ಕುತಂತ್ರಹಾಗೂ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಹೊರಗೆಳೆಯಬೇಕು. ರಾಜ್ಯ ಸರ್ಕಾರ ಕಾವೇರಿ ಕಣಿವೆಯ ಜನರಿಗೆ ನ್ಯಾಯ ಒದಗಿಸಬೇಕು. –ಅರ್ಜುನಹಳ್ಳಿ ಪ್ರಸನ್ನಕುಮಾರ್, ಜಲತಜ್ಞರು
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ತಮಿಳುನಾಡಿನಲ್ಲಿ ಚುನಾವಣೆ ಇರುವುದರಿಂದ ಅವರ ಪರವಾಗಿ ಕಾವೇರಿ ನದಿ ಜೋಡಣೆಗೆ ಅನುಮತಿ ನೀಡಿರುವುದು ಸರಿಯಲ್ಲ. ಇದರ ವಿಚಾರವಾಗಿ ಕರ್ನಾಟಕ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿರುವುದು ಸರಿಯಲ್ಲ. ಕೂಡಲೇ ಯೋಜನೆಗೆ ತಡೆಯೊಡ್ಡಬೇಕು. –ಎಂ.ಶ್ರೀನಿವಾಸ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಡಬೇಕು. ಎರಡು ರಾಜ್ಯಗಳನ್ನು ಕರೆಸಿ, ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಬಳಸಿಕೊಳ್ಳುವಂತೆ ಮಾತುಕತೆ ನಡೆಸುವ ಮೂಲಕ ರಾಜ್ಯದ ಮೇಕೆದಾಟು ಯೋಜನೆಗೂ ಅನುಮತಿನೀಡಬೇಕು. ಕಾನೂನಾತ್ಮಕವಾಗಿ ಹೋದರೆ ಎರಡೂ ರಾಜ್ಯಗಳ ನಡುವೆ ದ್ವೇಷ ಬೆಳೆಯಲಿದೆ. ಕೇಂದ್ರ ಸರ್ಕಾರ ಚುನಾವಣೆ ದೃಷ್ಟಿ ಬಿಟ್ಟು ರಾಜ್ಯಗಳ ನಡುವೆ ಸಮನ್ವಯತೆ ಕಾಪಾಡಲು ಮುಂದಾಗಬೇಕು. – ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷ, ರೈತಸಂಘ
ರಾಜ್ಯ ಸರ್ಕಾರ ಜವಾಬ್ದಾರಿ ಹೊರಬೇಕು. ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕು.ಮೇಕೆದಾಟು ಯೋಜನೆಗೆ ತಡೆಯೊಡ್ಡಿರುವ ತಮಿಳುನಾಡು, ಕಾವೇರಿ ನದಿ ನೀರನ್ನು ಬೇರೆಡೆಕೊಂಡೊಯ್ಯುವ ಯೋಜನೆ ಮಾಡುತ್ತಿದೆ. ಇದಕ್ಕೆಕೇಂದ್ರ ಸರ್ಕಾರವು ಹಣ ಒದಗಿಸುವ ಭರವಸೆ ನೀಡಿದೆ.ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಜನರು ಹನಿ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ಒದಗಲಿದೆ. ಆದ್ದರಿಂದ ರೈತರು ಎಚ್ಚೆತ್ತುಕೊಂಡು ಇದರವಿರುದ್ಧ ಹೋರಾಟ ಮಾಡುವ ಅಗತ್ಯವಿದೆ.ಹೋರಾಟದ ಬಗ್ಗೆ ಜಿ.ಮಾದೇಗೌಡ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದೇವೆ. – ಸುನಂದ ಜಯರಾಂ, ರೈತ ನಾಯಕಿ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.