ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ!
ಹಳ್ಳ ಹಿಡಿದ ಪಡಿತರ ವಿತರಣೆ ಅಂತರ್ಜಾಲ ಪಡಿತರದಾರರಿಗೆ ನಾಳೆ ಬಾ ಎನ್ನುವ ಸ್ಥಿತಿ
Team Udayavani, Jan 23, 2020, 5:30 PM IST
ಮಂಡ್ಯ: ಪಡಿತರ ವಿತರಣೆ ವ್ಯವಸ್ಥೆಗೆ ಸರ್ವರ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಿನವಿಡೀ ಸರ್ವರ್ ಸಂಪರ್ಕ ದೊರೆಯದೆ ಪಡಿತರದಾರರು ಪರದಾಡುವಂತಾಗಿದೆ. ಆಹಾರ ಪದಾರ್ಥಗಳಿಗೆ ದಿನವಿಡೀ ಕಾದು ಕುಳಿತರೂ ಸಿಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ಜಾಲ ಹಳ್ಳ ಹಿಡಿಯುಂತಾಗಿದೆ. ಪಡಿತರ ಪಡೆಯಲು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರು ದಿನವಿಡೀ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುತ್ತಿದ್ದಾರೆ.
ಅಂಗಡಿಯೇನೋ ತೆರೆದಿರುತ್ತದೆ. ಆದರೆ, ಸರ್ವರ್ ಮಾತ್ರ ಇರುವುದಿಲ್ಲ. ಪಡಿತರದಾರರು ಹೆಬ್ಬೆಟ್ಟು (ಥಂಬ್ ಇಂಪ್ರಶನ್) ಕೊಟ್ಟರಷ್ಟೇ ಪಡಿತರ ಆಹಾರ ಧಾನ್ಯ ವಿತರಣೆ ಕೊಡಲು ಸಾಧ್ಯ. ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಂದ ಹೆಬ್ಬೆಟ್ಟು ತೆಗೆದು ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಡಿತರ ಅಂಗಡಿ ಮಾಲೀಕರು, ಪಡಿತರದಾರರು ತ್ರಿಶಂಕು ಪರಿಸ್ಥಿತಿ ಎದುರಿಸು ವಂತಾಗಿದೆ. ಪಡಿತರ ಪಡೆಯಲು ಚೀಲ ಹಿಡಿದು ಬರುವ ಕಾರ್ಡ್ ದಾರರು ದಿನವಿಡೀ ಕಾದರೂ ಪಡಿತರ ಪದಾರ್ಥಗಳು ಸಿಗುತ್ತಿಲ್ಲ.
ಕೂಲಿಕಾರರ ಪರಿಸ್ಥಿತಿ ಇನ್ನಷ್ಟು ಶೋಚನೀಯ ವಾಗಿದೆ. ಪಡಿತರ ಕ್ಕಾಗಿ ಕಾದು ಕೂರುವ ಅವರು ಇತ್ತ ಪಡಿತರವೂ ಇಲ್ಲ, ಮತ್ತೂಂದೆಡೆ ಕೂಲಿಯೂ ಸಿಗದೆ ಒ¨ªಾಡುವಂತಾಗಿದೆ. ತನ್ಮಧ್ಯೆ ಬೆಳಗ್ಗೆಯಿಂದ ಕಂಪ್ಯೂಟರ್ ಎದುರು ಕುಳಿತರೂ “ದಿಸ್ ಸೈಟ್ ಕಾಂಟ್ ಬೀ ರೀಚ್x’
ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೆಜ್ ಓದಿ ಓದಿ ಸುಸ್ತಾಗಿದೆ ಎನ್ನುತ್ತಾರೆ ಪಡಿತರ ವಿತರಕರು. ಇದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸರ್ವರ್ ಅವಾಂತರದ ವಾಸ್ತವದ ಸ್ಥಿತಿ. ಕಳೆದ 15-20 ದಿನಗಳಿಂದ ಸರ್ವರ್ ನರ್ವಸ್ ಆಗಿದ್ದು, ಫಲಾನುಭವಿಗಳು ಪಡಿತರ ಅಂಗಡಿ ಗಳ ಮುಂದೆ ನಿಂತು ನಿಂತು ಸೋತು “ನಾಳೆ ಬಾ’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಪಡಿತರ ಕಾರ್ಡ್ ಇರುವ ಎಲ್ಲ ಸದಸ್ಯರ ಬೆರಳಚ್ಚು ಪಡೆಯಲು (ಕೆವೈಸಿ) ಪ್ರತ್ಯೇಕ ಸರ್ವರ್ ಲೈನ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಇಲಾಖೆ, ಈವರೆಗೂ ಯಾವುದೇ ಬೆಳವಣಿಗೆಗಳು ಕಾಣದೆ, ಹಳೆಯ ಸರ್ವರ್ ಕೂಡ ಡೌನ್ ಎಂದು ಕಾಣಿಸಿಕೊಂಡು ವಿತರಣೆ ವ್ಯವಸ್ಥೆಗೆ ಲಕ್ವಾ ಹೊಡೆದಂತಿದೆ. ಇಷ್ಟೊತ್ತಿಗೆ ಶೇ.70-75 ರಷ್ಟು ಆಹಾರ ಧಾನ್ಯ ವಿತರಣೆಯಾಗ ಬೇಕಿತ್ತು. ಆದರೆ, 30 ರಿಂದ 35ರಷ್ಟು ಮಾತ್ರ ವಿತರಣೆಯಾಗಿರುವು ದನ್ನು ಇಲಾಖೆ ವೆಬ್‌ಸೈಟ್‌ನ ಅಂಕಿ-ಅಂಶಗಳೇ ಸಾಕ್ಷೀಕರಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.