ಮಾಸ್ತಿ ಕನ್ನಡ ಸಣ್ಣ ಕಥೆಗಳ ಜನಕ
Team Udayavani, Jun 8, 2020, 5:57 AM IST
ಮಂಡ್ಯ: ಮಾಸ್ತಿ ನಮ್ಮ ಜಿಲ್ಲೆಯ ಮಳವಳ್ಳಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಕನ್ನಡ ಸಣ್ಣ ಕಥೆಗಳ ಜನಕ ಎಂದು ಹೆಸರು ಪಡೆದಿರುವ ಇವರ ಕಥಾ ಸಾಹಿತ್ಯ ಅಜರಾಮರವಾದುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ. ರವಿಕುಮಾರ ಸ್ಮರಿಸಿದರು.
ಜಿಲ್ಲಾ ಕಸಾಪದಿಂದ ಪರಿಷತ್ ಭವನದಲ್ಲಿ ನಡೆದ ಸಾಹಿತಿ, ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಮಾಸ್ತಿ ಅವರು ಕಥೆಗಳನ್ನಲ್ಲದೇ ಕನ್ನಡ ಸಾರಸ್ವತ ಲೋಕಕ್ಕೆ ಹಲವು ಪ್ರಕಾರದ ಸಾಹಿತ್ಯದ ಮಹಾನ್ ಕೊಡುಗೆ ನೀಡಿರುವ ಮೇರು ಸಾಹಿತಿ ಎಂದು ಹೇಳಿದರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಮಾಸ್ತಿಯವರು ಸಣ್ಣ ಕಥೆಗಳ ಮೂಲಕ ಜನರಿಗೆ ತಿಳಿವಳಿಕೆ ನೀಡುವುದರ ಜತೆಗೆ ಜೀವನದ ಸಂಕಷ್ಟಗಳನ್ನು ತಮ್ಮ ಕಥೆಗಳ ಮೂಲಕ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಶ್ರೀನಿವಾಸ ಕಾವ್ಯನಾಮದಿಂದ ಪ್ರಸಿದರಾದ ಇವರು ಸುಬ್ಬಣ್ಣ ಎಂಬ ನೀಳತೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಮಂಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ಕಸಾಪದ ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಕನ್ನಡ ಸಾಹಿತ್ಯ ಲಯನ್ಸ್ ಅಧ್ಯಕ್ಷ ನಾಗಲಿಂಗಪ್ಪ, ನಿವೃತ್ತ ಪ್ರಾಂಶುಪಾಲ ನಾಗಾನಂದ, ಶಿಕ್ಷಕ ಕೆ.ಪಿ.ಬಾಬು, ಕಚ್ಚಿಗೆರೆ ಶಿವಲಿಂಗು, ನಿರಂಜನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.