ಸೋಂಕಿತರಿಗೆ ಮೊದಲು ಲಸಿಕೆ ನೀಡಿ
Team Udayavani, Dec 16, 2020, 4:12 PM IST
ಮಂಡ್ಯ: ಕೋವಿಡ್-19 ಪಾಸಿಟಿವ್ ಬರುವವರಿಗೆ ಹಾಗೂ ಅವರ ಕುಟುಂಬದವರಿಗೆ ಮೊದಲು ಕೋವಿಡ್ ಲಸಿಕೆ ನೀಡಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆಪರಿಚಯ ಕುರಿತ 3ನೇ ಜಿಲ್ಲಾ ಮಟ್ಟದ ಚಾಲನಾ ಸಭೆಯಲ್ಲಿ ಮಾತನಾಡಿದ ಅವರು,ಈ ಕೋವಿಡ್-19 ಚುಚ್ಚು ಮದ್ದು ನೀಡಲುಹಾಸ್ಟೆಲ್‌ಗಳು,ಹೈಸ್ಕೂಲ್‌ಗಳು, ಕಾಲೇಜುಗಳು, ವಸತಿ ಶಾಲೆಗಳು, ವೈದ್ಯಕೀಯ ಕಾಲೇಜುಗಳನ್ನು ಬಳಸಿಕೊಳ್ಳಿ ಎಂದರು.
ಸಮರ್ಪಕವಾಗಿ ನಿರ್ವಹಿಸಿ: ಬೆಡ್, ಚೇರ್, ಹಾಸಿಗೆ, ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಶೌಚಾಲಯ,ನೀರು, ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಕೋವಿಡ್-19 ವ್ಯಾಕ್ಸಿನೇಷನ್‌ಕಂಟ್ರೋಲ್ ರೂಂ ಕೆಲಸ ಮಾಡುತ್ತಿದ್ದು, ಪರಿಶೀಲನಾ ಹಂತ, ಚುಚ್ಚು ಮದ್ದು ನೀಡುವಿಕೆ ಹಂತ, ಚುಚ್ಚುಮದ್ದು ನಂತರದ ಪರೀಕ್ಷಾ ಹಂತ, ಇವುಗಳನ್ನಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
3 ವರ್ಗದಲ್ಲಿ ಚುಚ್ಚುಮದ್ದು: ಕೋವಿಡ್-1 9ಚುಚ್ಚು ಮದ್ದನ್ನು ಮೊದಲಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ,ಪೌರಕಾರ್ಮಿಕರಿಗೆ ಹಾಗೂ 50 ವರ್ಷ ಮೇಲ್ಪಟ್ಟವರು ಎಂಬ3ವರ್ಗಗಳಾಗಿಚುಚ್ಚುಮದ್ದನ್ನುನೀಡಲಾಗುತ್ತದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಸಿ. ಸೋಮಶೇಖರ್ ಹೇಳಿದರು.
ಚುಚ್ಚುಮದ್ದು ನೀಡುವಾಗ ಸ್ಥಳಗಳನ್ನು ಮೊದಲು ಪರೀಕ್ಷಿಸಿ ಸಾಮಾಜಿಕ ಅಂತರದೊಂದಿಗೆ, ಮಾಸ್ಕ್,ಸ್ಯಾನಿಟೈಸರ್‌ಗಳನ್ನು ನೀಡಬೇಕು. ಊರುಗಳಲ್ಲಿಶಿಬಿರಗಳನ್ನು ಏರ್ಪಡಿಸಿ, ಮೊದಲು ವಿಕಲಚೇತನರಿಗೆ,ಇನ್ನಿತರ ರೋಗ ಇರುವವರಿಗೆ, ದುರ್ಬಲರಿಗೆ,ಕೋವಿಡ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿದವರಿಗೆ ಮೊದಲು ಚುಚ್ಚುಮದ್ದನ್ನು ನೀಡಿ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.