ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ನಿರೀಕ್ಷೆ


Team Udayavani, Feb 20, 2022, 9:37 AM IST

ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ನಿರೀಕ್ಷೆ

ಮೇಲುಕೋಟೆ: ಭಾರತದ ಪ್ರಮುಖ ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆಯನ್ನು ಮಲೈಮಹದೇಶ್ವರ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಈ ಬಜೆಟ್‌ನಲ್ಲಾದರೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಬೇಕು ಎಂದು ಚೆಲುವನಾರಾಯಣಸ್ವಾಮಿ ಭಕ್ತರ ನಿರೀಕ್ಷೆಯಾಗಿದೆ.

ಕಡತದಲ್ಲೇ ಇದೆ: ರಾಮಾನುಜಾಚಾರ್ಯರ ತಪೋಭೂಮಿ ಹಾಗೂ ದಕ್ಷಿಣ ಬದರೀಕಾಶ್ರಮವೂ ಆದ ಐತಿಹಾಸಿಕ ಮೇಲುಕೋಟೆ ಆಂಧ್ರಪ್ರದೇಶದ ತಿರುಮಲದಷ್ಟೆ ಪ್ರಖ್ಯಾತ ಪ್ರವಾಸಿ ತಾಣವಾಗಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ. ಮುಖ್ಯವಾಗಿ ಭಕ್ತರಿಗೆ ತಂಗಲು ಸರ್ಕಾರದ ವತಿಯಿಂದ ಯಾವುದೇ ರೀತಿಯ ವಸತಿಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಪಾರ್ಕಿಂಗ್‌ ಮತ್ತು ಶೌಚಾಲಯದ ಸೌಲಭ್ಯ, ವೈದ್ಯಕೀಯ ಸೇವೆ ಇಲ್ಲ. ಸೀಮಿತವಾದ ಅವಕಾಶದಲ್ಲೇ ಕ್ಷೇತ್ರಕ್ಕೆ ಹಲವು ಮೂಲಭೂತ ಸೌಲಭ್ಯ ಕಲ್ಪಿಸಲು ಶಾಸಕ ಸಿ.ಎಸ್‌.ಪುಟ್ಟರಾಜು ಶ್ರಮಿಸಿದ್ದಾರೆ. ಆದರೆ,ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಪ್ರಾಧಿಕಾರದ ರಚನೆಯ ಪ್ರಸ್ತಾವನೆ ಕಡತದಲ್ಲೇ ಉಳಿದಿದೆ.

ನಿರೀಕ್ಷೆಯಿದೆ: ಕಳೆದ ಬಟೆಜ್‌ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸಿ. ನಾರಾಯಣಗೌಡರು ಪ್ರಾಧಿಕಾರ ರಚನೆ ಮಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದರಾದರೂ ಕೊರೊನಾ ಹಿನ್ನಲೆ ಅನುದಾನ ಲಭ್ಯವಾಗದ ಕಾರಣ ಆ ಕಾರ್ಯ ಸಾಧ್ಯವಾಗಲಿಲ್ಲ. ಆದರೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಜಜೆಟ್‌ನಲ್ಲಾದರೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರದ ಕನಸು ಈಡೇರಿ ಶ್ರೀ ಕ್ಷೇತ್ರ ಅಭಿವೃದ್ಧಿಯಾಗಲಿ ಎಂಬ ನಿರೀಕ್ಷೆಯಿದೆ.

ಮಾಸ್ಟರ್‌ ಪ್ಲಾನ್‌ ಸಿದ್ಧ: ಮೇಲುಕೋಟೆ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 8 ಕೋಟಿರೂ. ಮಂಜೂರಾಗಿದೆ. ದೇವಾಲಯದ ಸುತ್ತ ಕಾಂಕ್ರಿಟ್‌ ರಸ್ತೆಗೆ 2 ಕೋಟಿರೂ. ನಿಗದಿಯಾಗಿದೆ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ 2 ಕೋಟಿ ರೂ. ವೆಚ್ಚದಲ್ಲಿ ಅನ್ನದಾನ ಭವನ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿದೆ ಶಾಸಕ ಸಿ.ಎಸ್‌ ಪುಟ್ಟರಾಜು ಅವರ ಕಾಳಜಿಯ ಪರಿಣಾಮ ಬಳಘಟ್ಟ ಏತನೀರಾವರಿ ಯೋಜನೆ ಅನುಷ್ಠಾನದ ಅಂತಿಮ ಹಂತದಲ್ಲಿದೆ. ಸಣ್ಣ ನೀರಾವರಿ ಇಲಾಖೆಯಿಂದ 108 ಕೊಳಗಳ ಸಂರಕ್ಷಣೆಗೆ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ.

ಮೇಲುಕೋಟೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ :

ಮೇಲುಕೋಟೆಯಲ್ಲಿ ಅಭಿವೃದ್ಧಿ ಕಾರ್ಯಗಳ ದೊಡ್ಡ ಪಟ್ಟಿಯೇ ಇದ್ದು, ಯೋಜನೆ ಮುಕ್ತಾಯವಾಗಿರುವ ನಿರುಪಯುಕ್ತವಾದ ಹೇಮಾವತಿ ವಸತಿ ಗೃಹಗಳನ್ನು ದೇಗುಲದ ವಶಕ್ಕೆ ಪಡೆದು ಭಕ್ತರಿಗೆ ವಸತಿ ಗೃಹ ನಿರ್ಮಾಣ, ಕಲ್ಯಾಣಿ ಮತ್ತು ಕೊಳಗಳ ಜೀರ್ಣೋದ್ಧಾರ, ಮಂಟಪಗಳ ರಕ್ಷಣೆ, ದೇವಾಲಯದ ಜಮೀನು ವಶಕ್ಕೆ ಪಡೆದು ಜನೋಪಯೋಗಿ ಕೆಲಸಮಾಡಬೇಕು. ಕ್ರೀಡಾಂಗಣ ನಿರ್ಮಾಣ, ಶತಮಾನದ ಸರ್ಕಾರಿ ಶಾಲೆ, ಸಂಸ್ಕೃತ ಪಾಠಶಾಲೆಬಲವರ್ಧನೆ, ಗ್ರಂಥಾಲಯದ ಜೀರ್ಣೋದ್ಧಾರ, ನೂತನ ರಥ ನಿರ್ಮಾಣ, ಬೆಟ್ಟಕ್ಕೆ ರೂಪ್‌ ವೇ, ದೇವಾಲಯಕ್ಕೆ ಪ್ರತ್ಯೇಕ ಪೊಲೀಸ್‌ ಉಪಠಾಣೆ, ಕಲ್ಯಾಣಿ, ಬೆಟ್ಟ ಹಾಗೂ ದೇವಾಲಯಗಳಿಗೆ ಶಾಶ್ವತದೀಪಾಲಂಕಾರ, ಚೆಲುವನಾಯಣನ ಉತ್ಸವಗಳನ್ನು ವೈಭವವಾಗಿ ನಡೆಸಿದೇವಾಲಯದ ಆದಾಯ ಹೆಚ್ಚಿಸಿ ನೌಕಕರಿಗೆ ಕನಿಷ್ಠ ವೇತನಜಾರಿಗೊಳಿಸುವುದು. ಮೇಲುಕೋಟೆ ಪಂಚೆ ಮತ್ತು ಪುಳಿಯೋಗರೆ ಉದ್ಯಮವನ್ನು ಪ್ರೋತ್ಸಾಹಿಸಿ ಉದ್ಯೋಗಾವಕಾಶ ಸೃಷ್ಟಿ ಮಾಡುವುದೂ ಸೇರಿದಂತೆ ಹಲವು ರೀತಿಯ ಕಾರ್ಯಗಳನ್ನು ಪ್ರಾಧಿಕಾರದಿಂದ ಮಾಡಬಹುದಾಗಿದೆ.

ವೈರಮುಡಿಗೆ 2 ಕೋಟಿ ರೂ.ವಿಶೇಷ ಅನುದಾನ ಅಗತ್ಯ:

ಮೇಲುಕೋಟೆ ವೈರಮುಡಿ ಪುರಾತನ ಆಚರಣೆಯಾಗಿದ್ದು, ಒಂದು ರಾತ್ರಿ ನಡೆಯುವ ಈ ಉತ್ಸವ ದಕ್ಷಿಣಭಾರತ ಮತ್ತು ಉತ್ತರಭಾರತದ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಇಂತಹ ಜಾತ್ರೆಗೆ ಸರ್ಕಾರವಿಶೇಷ ಅನುದಾನ ನೀಡಬೇಕಿದೆ. ಬ್ರಹ್ಮೋತ್ಸವದ ವೇಳೆದೇವಾಲಯ, ಸ್ಮಾರಕಗಳಿಗೆ ಭವ್ಯವಾದ ದೀಪಾಲಂಕಾರ ಮಾಡಿ ಇಲ್ಲಿನಡೆಯುವ ಉತ್ಸವಗಳಿಗೆ ವ್ಯಾಪಕ ಪ್ರಚಾರ ನೀಡಿದರೆ ವರ್ಷವಿಡೀಭಕ್ತರನ್ನು ಮೇಲುಕೋಟೆ ತನ್ನತ್ತ ಸೆಳೆದು ಸಾವಿರಾರು ಮಂದಿಗೆಉದ್ಯೋಗ ಸೃಷ್ಟಿಸಿ ಕೊಡುತ್ತದೆ. ಇದಕ್ಕಾಗಿಯೇ ಸರ್ಕಾರ 2 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಶಾಸಕ ಸಿ.ಎಸ್‌.ಪುಟ್ಟರಾಜು ಅವರ ಒತ್ತಾಯವಾಗಿದೆ.

ರಾಮಾನುಜರ ಸಹಸ್ರಮಾನೋತ್ಸವಕ್ಕೆ ಕಾಸಿಲ್ಲ :  ರಾಮಾನುಜರ ಸಹಸ್ರಮಾನೋತ್ಸವ ಆಚರಣೆಯನ್ನು ಸರ್ಕಾರಬಳಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಅವಕಾಶವಿತ್ತಾದರೂಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕವಡೆ ಕಾಸನ್ನೂನೀಡದೆ ನಿರ್ಲಕ್ಷ್ಯ ವಹಿಸಿತು. ಆಂಧ್ರದ ಚಿನ್ನಜೀಯರ್‌ ಪ್ರಧಾನಿಮೋದಿಯನ್ನು ರಾಮಾನುಜರ ತಪೋ ಭೂಮಿ ಮೇಲುಕೋಟೆಗೆ ಕರೆತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಧಾನಿಮೋದಿ ಕಾರ್ಯಕ್ರಮಗಳು ನಿಗದಿಯಾದ ನಂತರಪ್ರಯಾಸಪಡುವ ಬದಲು ಸರ್ಕಾರ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ.

ರಾಮಾನುಜರ ಕರ್ಮಭೂಮಿಯಾದಮೇಲುಕೋಟೆಯನ್ನುತಿರುಮಲೆ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ವಿಫ‌ುಲಅವಕಾಶವಿದೆ. ಸರ್ಕಾರಮೇಲುಕೋಟೆ ಅಭಿವೃದ್ಧಿಗೆ ವಿಶೇಷ ಆಸಕ್ತಿವಹಿಸಬೇಕಾದ ಅಗತ್ಯವಿದೆ. ಶ್ರೀ ಯದುಗಿರಿ ಯತಿರಾಜ ಶ್ರೀಮನ್ನಾರಾಯಣ ರಾಮಾನುಜ ಜೀಯರ್‌, ಪೀಠಾಧಿಪತಿ, ಯದುಗಿರಿ ಯತಿರಾಜಮಠ

ಸರ್ಕಾರ ಈ ಬಜೆಟ್‌ನಲ್ಲಾದರೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕು. ಬಾಕಿಯಿರುವ ಎಲ್ಲ ಅಭಿವೃದ್ಧಿ ಕಾರ್ಯಗಳೂ ತ್ವರಿತವಾಗಿನಡೆದು ಭಾರತದ ಪ್ರಮುಖ ಶ್ರೀವೈಷ್ಣವ ಕೇಂದ್ರಹಾಗೂ ರಾಮಾನುಜರ ಅಭಿಮಾನ ಕ್ಷೇತ್ರಮೇಲುಕೋಟೆ ಭಕ್ತ ಸ್ನೇಹಿ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲು ಸಹಕಾರಿ. ಶ್ರೀನಿವಾಸನರಸಿಂಹನ್‌ ಗುರೂಜಿ, ಚೆಲುವನಾರಾಯಣಸ್ವಾಮಿ ದೇವಸ್ಥಾನ, ಮೇಲುಕೋಟೆ

 

ಸೌಮ್ಯ ಸಂತಾನಂ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.