ತೆನೆ- ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Team Udayavani, May 11, 2023, 2:24 PM IST

ತೆನೆ- ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಲವೆಡೆ ಅಹಿತಕರ ಘಟನೆ ಹೊರತುಪಡಿಸಿ, ಬಹುತೇಕ ಶಾಂತಿಯುವ ಮತದಾನ ವಾಗಿದ್ದು, ಶೇ.%86.24ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,13,187 ಮತದಾರರಿದ್ದು, (ಪುರುಷರು- 1,04,656, ಮಹಿಳೆಯರು- 1,08,492, ಇತರೆ- 39) ಪುರುಷರು- 90,963, ಮಹಿಳೆಯರು- 92,906, ಇತರರು- 3 ಸೇರಿ ಒಟ್ಟು 1,83,852 ಮಂದಿ ಮತದಾನ ಮಾಡಿದ್ದಾರೆ.

ತಾಲೂಕಿನ ಅರಕೆರೆ, ಗಂಜಾಂ ಮತಗಟ್ಟೆ ಬಳಿ ಮತಯಾಚಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಹಾಗೂ ಅರೆಸೇನಾ ತುಕಡಿ ಮಧ್ಯ ಪ್ರವೇಶಿಸಿ, ಶಾಂತಿಗೊಳಿಸಿದರು.

ಕ್ಷೇತ್ರದಲ್ಲಿ 249 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಅವುಗಳ ಪೈಕಿ 125 ಮತೆಗಟ್ಟೆಗಳನ್ನು ಸೂಕ್ಷ್ಮ , ಅತಿ ಸೂಕ್ಷ್ಮ ಎಂದು ಪರಿಗಣಿಸಿ, ಸಿಸಿ ಟೀವಿ ಕಣ್ಗಾವಲು ಜೊತೆಗೆ ಅರೆಸೇನೆ ಹಾಗೂ ಪೊಲೀಸರನ್ನು ನಿಯೋಜಿಸಿ, ಮತದಾನ ಪ್ರಕ್ರಿಯೆ ನಡೆಸಲಾಯಿತು.

ಉತ್ಸಾಹದಿಂದ ಮತದಾನ: ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ, ಯುವತಿಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಮಹಿಳೆಯರು ಬಿಸಿಲನ್ನು ಲೆಕ್ಕಿಸದೆ, ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅಲ್ಲದೆ, ಕೆಲ ಗ್ರಾಮಗಳಲ್ಲಿ ಮತದಾರರನ್ನು ಕರೆತರಲು ಪಕ್ಷಗಳ ಮುಖಂಡರು, ಪ್ರತ್ಯೇಕವಾಗಿ ವಾಹನದ ವ್ಯವಸ್ಥೆ ಮಾಡಿದ್ದಲ್ಲದೆ, ಅಂತಿಮ ಕ್ಷಣದವರೆವಿಗೂ ಮತಯಾಚಿಸುತ್ತಿದ್ದ ದೃಶ್ಯ ಕಂಡು ಬಂತು.

ವೃದ್ಧರು ಹಾಗೂ ದಿವ್ಯಾಂಗರನ್ನು ವೀಲ್‌ಚೇರ್‌ ಮೂಲಕ ಮತಗಟ್ಟೆಗೆ ಕರೆತಂದು ಮತಚಲಾಯಿಸಿಲು ಸಹಾಯ ಮಾಡಿದರು. 8 ಗಂಟೆಯಾದರೂ ನಡೆದ ಮತದಾನ: ಕ್ಷೇತ್ರದ ಗಂಜಾಂ ಸೇರಿದಂತೆ ಒಟ್ಟು 6 ಮತಗಟ್ಟೆಗಳಲ್ಲಿ ರಾತ್ರಿ 7 ಗಂಟೆ ಹಾಗೂ ಕೊತ್ತತ್ತಿ ಹೋಬಳಿಯ 53 ಮತಗಟ್ಟೆಯಲ್ಲಿ ರಾತ್ರಿ 8ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಚುನಾವಣಾ ಆಯೋಗ ಸಮಯ ನಿಗದಿಪಡಿಸಿ ದ್ದಾದರೂ, ಹೆಚ್ಚು ಮತದಾರರು ಜಮಾಯಿಸಿದ್ದರಿಂದ ರಾತ್ರಿ 8 ಗಂಟೆ ವರೆವಿಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಗಂಜಾಂನ 181ರ ಮತಗಟ್ಟೆಯಲ್ಲಿ ಮತಯಂತ್ರಗಳ ಅದಲು ಬದಲು ಮಾಡಲಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣಾ ಸಿಬ್ಬಂದಿ ವಿರುದ್ಧ ಆರೋಪ ಮಾಡಿ, ಮಾತಿನ ಚಕಮಕಿ ನಡೆಯಿತು. ನಂತರ ಚುನಾವಣಾ ಧಿಕಾರಿಗಳು, ಪೊಲೀಸರು ಮಧ್ಯ ಪ್ರವೇಶಿಸಿ ಸಮಾ ಧಾನ ಪಡಿಸಿದರೆನ್ನಲಾಗಿದೆ.

ಟಾಪ್ ನ್ಯೂಸ್

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Sitharama tholpadi

Yakshagana: ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ಗೌರವ

Elephant Corridor: ಅಭಿವೃದ್ಧಿ ಯೋಜನೆಗಳಿಂದ ಆನೆ ಕಾರಿಡಾರ್‌ಗೆ ಹಾನಿ

Elephant Corridor: ಅಭಿವೃದ್ಧಿ ಯೋಜನೆಗಳಿಂದ ಆನೆ ಕಾರಿಡಾರ್‌ಗೆ ಹಾನಿ

Gayana

Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

13

Srirangapatna: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಯುವಕ ಸಾವು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

ಎಚ್‌ಡಿಕೆಗೆ ನಿಂದನೆ: ದರ್ಶನ್‌ ಮಹಿಳಾ ಅಭಿಮಾನಿ ವಿರುದ್ಧ ದೂರು

23

Actor Darshan: ಕಾನ್‌ಸ್ಟೇಬಲ್‌ ಮೇಲೆಯೂ ನಟ ದರ್ಶನ್‌ ಗ್ಯಾಂಗ್‌ ಹಲ್ಲೆ 

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Punchalakatte ಕಾಜಲ-ಬೆಂಚಿನಡ್ಕ ಕಾಲ್ನಡಿಗೆಯಲ್ಲೇ ಮೃತದೇಹ ಸಾಗಾಟ

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Smriti Singh: ಸುಮ್ಮನೆ ಸಾಯಲ್ಲ… ಯೋಧನ ಪತ್ನಿಯ ವೀಡಿಯೋ ವೈರಲ್‌!

Champions Trophy: ಚಾಂಪಿಯನ್ಸ್‌ ಟ್ರೋಫಿಗಾಗಿ ಪಾಕ್‌ಗೆ ಭಾರತ ಹೋಗಲ್ಲ; ವರದಿ

Champions Trophy: ಚಾಂಪಿಯನ್ಸ್‌ ಟ್ರೋಫಿಗಾಗಿ ಪಾಕ್‌ಗೆ ಭಾರತ ಹೋಗಲ್ಲ; ವರದಿ

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.