ವಲಸೆ ಹಕ್ಕಿಗಳು ಮರಳಿ ಗೂಡಿಗೆ!

ವೃದ್ಧಾಶ್ರಮದಂತಿದ್ದ ಹಳ್ಳಿಗಳೀಗ ತುಂಬಿದ ಮನೆಗಳು; ಕೋವಿಡ್-19 ಭಯ: ಮಕ್ಕಳು,ಮೊಮ್ಮಕ್ಕಳೊಂದಿಗೆ ಠಿಕಾಣಿ

Team Udayavani, Apr 21, 2020, 4:34 PM IST

ವಲಸೆ ಹಕ್ಕಿಗಳು ಮರಳಿ ಗೂಡಿಗೆ!

ಸಾಂದರ್ಭಿಕ ಚಿತ್ರ

ಮಂಡ್ಯ: ಆಧುನಿಕತೆ ಬೆಳವಣಿಗೆ ಪರಿಣಾಮ ವೃದ್ಧಾಶ್ರಮಗಳಾಗಿ ಪರಿವರ್ತನೆಗೊಂಡಿದ್ದ ಹಳ್ಳಿಮನೆಗಳು ತುಂಬಿದ ಮನೆಗಳಾಗಿ ಪರಿವರ್ತನೆಗೊಂಡಿವೆ. ಉದ್ಯೋಗವನ್ನರಸಿ ಹುಟ್ಟೂರು
ಬಿಟ್ಟು ಹೋಗಿದ್ದ ವಲಸೆ ಹಕ್ಕಿಗಳು ಕೋವಿಡ್-19ಗೆ ಹೆದರಿ ಮತ್ತೆ ಮರಳಿ ಗೂಡು ಸೇರಿಕೊಂಡಿವೆ. ಇದರಿಂದ ಹಳ್ಳಿಗಳಲ್ಲಿ ಜನಸಂಖ್ಯೆ ಪ್ರಮಾಣದಲ್ಲೂ ಹೆಚ್ಚಳವಾಗಿದೆ.

ಕೋವಿಡ್-19 ಸೋಂಕು ಕಾಲಿಡುತ್ತಿದ್ದಂತೆ ಮಹಾನಗರಗಳಲ್ಲಿ ಠಿಕಾಣಿ ಹೂಡಿದ್ದ ಹಳ್ಳಿಗರು ಹೇಳದೆ ಕೇಳದೇ ಮಕ್ಕಳು, ಮೊಮ್ಮಕ್ಕಳೊಂದಿಗೆ ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡಿದ್ದಾರೆ. ವಯಸ್ಸಾದ ತಂದೆ-ತಾಯಿಗಳನ್ನು ಬಿಟ್ಟು ಬೇರಾರೂ ಕಾಣದ ಮನೆಯಲ್ಲೀಗ ಮಕ್ಕಳು, ಮೊಮ್ಮಕ್ಕಳು, ಸೊಸೆಯರು ಎಲ್ಲರೂ ಬಂದು ಸೇರಿಕೊಂಡಿದ್ದಾರೆ.  ಒಂದೊಂದು ಮನೆಯಲ್ಲಿ ಕನಿಷ್ಠ 10ರಿಂದ 15 ಮಂದಿ ವಾಸವಾಗಿದ್ದಾರೆ. ಹಳ್ಳಿಗಳೇ ಸುರಕ್ಷಿತ: ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡು ಹುಟ್ಟೂರನ್ನೇ ಮರೆತುಹೋಗಿದ್ದ ಜನರು ಈಗ ಕೊರೊನಾಗೆ ಹೆದರಿ
ಜೀವಭಯದಿಂದ ತವರಿಗೆ ಬಂದು ಸೇರಿಕೊಂಡಿದ್ದಾರೆ. ಪ್ರಾಣಕ್ಕೆ ಸಂಚಕಾರ ಎದುರಾದಾಗ ಮಹಾನಗರಗಳಿಗಿಂತ ಹಳ್ಳಿಗಳೇ ಹೆಚ್ಚು ಸುರಕ್ಷಿತ ಎಂಬ ಪ್ರಜ್ಞೆ ಈಗ ಜನರಲ್ಲಿ ಜಾಗೃತಗೊಂಡಿದೆ. ಅದಕ್ಕಾಗಿ ಎಲ್ಲರೂ ಪ್ರಾಣ ರಕ್ಷಣೆಗಾಗಿ ತವರೂರಿನಲ್ಲಿ ಠಿಕಾಣಿ ಹೂಡಿದ್ದಾರೆ.ಮಹಾನಗರಗಳಿಂದ ವಲಸೆ ಬಂದಿರುವಜನರಿಂದ ಹಳ್ಳಿಗಳಲ್ಲಿ ಜನಸಂಖ್ಯೆ ಏರಿಕೆಯಾಗಿದೆ. ತಮ್ಮೂರಲ್ಲಿ ಹಿಂದೆಂದೂ ಇಷ್ಟೊಂದು ಜನರನ್ನೇ ಕಾಣದ ಆ ಊರಿನ ಜನರು ಕಳೆದೊಂದು ತಿಂಗಳಲ್ಲಿ ಊರಿಗೆ ವಲಸೆ ಬಂದವರನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ತುಂಬಿರುವ ಹಳ್ಳಿಗಳು: ಕೆಲವೊಂದು ಮನೆಗಳಲ್ಲಂತೂ ಗರಿಷ್ಠ 30ರಿಂದ 40 ಸಂಖ್ಯೆಯ ಜನರಿದ್ದಾರೆ. ಮನೆ ತುಂಬಾ ತುಂಬಿರುವ ಜನರನ್ನು ಕಂಡಾಗ ಕಣ್ಮರೆಯಾಗಿದ್ದ ಅವಿಭಕ್ತ
ಕುಟುಂಬಗಳು ಈಗ ಕಂಡು ಬರುತ್ತಿವೆ. ಮಕ್ಕಳು-ಮೊಮ್ಮಕ್ಕಳೊಂದಿಗೆ ದೂರವಾಗಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಹಿರಿಯ ಜೀವಗಳು ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಮಹಾನಗರಗಳಿಂದ ಜನರು ಹಳ್ಳಿಗಳತ್ತ ವರ್ಷಕ್ಕೊ, ಎರಡು ವರ್ಷಕ್ಕೋ ನಡೆಯುವ ಊರಬ್ಬದ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಬಂದು ಹೋಗುತ್ತಿದ್ದ ಮಕ್ಕಳು-ಮೊಮ್ಮಕ್ಕಳು, ಸೊಸೆಯಂದಿರು ಮನೆಯಲ್ಲಿರುವ ಹಿರಿಯ ಜೀವಗಳನ್ನು ಮರೆತು ಮಹಾನಗರದ ವಾತಾವರಣದಲ್ಲಿ ಬೆರೆತು ಹೋಗಿದ್ದರು. ಹಳ್ಳಿಗರು, ಹಳ್ಳಿಯ ಜೀವನವನ್ನು ನಿಕೃಷ್ಠವಾಗಿ ಕಾಣುತ್ತಾ ಊರಿನತ್ತ ಮುಖ ಮಾಡದೆ ತಮ್ಮ ಮಕ್ಕಳಿಗೂ ತವರಿನ ಗಾಳಿ ಸೋಕದಂತೆ ತಡೆದಿದ್ದರು. ಕಳೆದೊಂದು ತಿಂಗಳ ಹಿಂದೆ ಕಾಲಿಟ್ಟ ಕೊರೊನಾದಿಂದ ಹೇಳದೆ ಕೇಳದೆ ಮಹಾನಗರಗಳಿಂದ ಉಟ್ಟ ಬಟ್ಟೆಯಲ್ಲಿ ಕುಟುಂಬ ಸಮೇತರಾಗಿ ಹಳ್ಳಿಗಳಿಗೆ ಬಂದಿಳಿದಿದ್ದಾರೆ. ಬದುಕುಳಿಯುವುದಕ್ಕೆ ಹಳ್ಳಿಗಳಿಗಿಂತ ಸುರಕ್ಷಿತ ಪ್ರದೇಶ ಮತ್ತೂಂದಿಲ್ಲ ಎನ್ನುವುದರ ಅರಿವಾಗಿದೆ. 30 ದಿನಗಳಿಂದ ಹಳ್ಳಿ ವಾತಾವರಣ, ಅಲ್ಲಿಯ ಜೀವನ ಶೈಲಿಗೆ ಎಲ್ಲರೂ ಒಗ್ಗಿಕೊಂಡಿದ್ದಾರೆ. ಇದು ಶಾಶ್ವತವಾಗಿ ಉಳಿಯುವುದೋ ಅಥವಾ ಕೊರೊನಾ ಕಣ್ಮರೆಯಾದ ಕೂಡಲೇ ಮತ್ತೆ ಹಳ್ಳಿಗಳು
ವೃದ್ಧಾಶ್ರಮಗಳಾಗಲಿವೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.