ಮಿಮ್ಸ್ ನಲ್ಲಿ ನೆಲದ ಮೇಲೆಯೇ ಚಿಕಿತ್ಸೆ
Team Udayavani, Nov 26, 2022, 5:23 PM IST
ಮಂಡ್ಯ: ನಗರದ ಮಿಮ್ಸ್ ಅವ್ಯವಸ್ಥೆಗಳ ಅಗರ ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಅದು ಗುರುವಾರವೂ ಮತ್ತೂಮ್ಮೆ ಸಾಬೀತಾಗಿದ್ದು, ನಿರ್ಲಕ್ಷ್ಯ ಮುಂದುವರಿದಿದೆ.
ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗಳನ್ನು ಬೆಡ್‌ಗಳ ಕೊರತೆಯಿಂದ ನೆಲದ ಮೇಲೆ ಮಗಿಸಿದ್ದ ದೃಶ್ಯ ಕಂಡು ಬಂದಿತು. ಪ್ರತೀ ದಿನ ಹೆರಿಗೆ ವಾರ್ಡ್‌ನಲ್ಲಿ ಬೆಡ್‌ಗಳ ಕೊರತೆ ಇತ್ತು. ಅಲ್ಲಿ ಒಂದು ಬೆಡ್‌ಗಳ ಮೇಲೆ ನಾಲ್ಕೈದು ಮಂದಿಯನ್ನು ಮಲಗಿಸಲಾ ಗುತ್ತಿತ್ತು. ಉಳಿದವರನ್ನು ನೆಲದ ಮೇಲೆ ಮಲಗಿಸುವ ದೃಶ್ಯ ಸಾಮಾನ್ಯ ವಾಗಿತ್ತು. ಆದರೆ ಗುರುವಾರ ಕಣ್ಣಿನ ವಾರ್ಡ್‌ನಲ್ಲೂ ಕಂಡು ಬಂದಿತು. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವಯೋ ವೃದ್ಧರನ್ನು ಒಂದು ಬೆಡ್ ಮೇಲೆ ಐದಾರು ಮಂದಿ ಯನ್ನು ಮಲಗಿಸಲಾಗಿತ್ತು. ಅಲ್ಲದೆ, ಕೆಲವು ವೃದ್ಧರನ್ನು ನೆಲದ ಮೇಲೆ ಮಲಗಿಸಿದ್ದರು. ಬೆಡ್‌ಗಳಿಲ್ಲದೆ ಮಹಿಳಾ ರೋಗಿಗಳು ಒಬ್ಬರಿ ಗೊಬ್ಬರು ಅಂಟಿ ಕೊಂಡು ಮಲಗುವ ಪರಿಸ್ಥಿತಿ ಉಂಟಾಗಿತ್ತು. ಕಣ್ಣಿನ ಶಸ್ತ್ರ ಚಿಕಿತ್ಸೆಯಾ ಗಿದ್ದರಿಂದ ಕಣ್ಣು ಕಾಣುತ್ತಿರಲಿಲ್ಲ. ನೆಲದ ಮೇಲೆ ಮಲಗಿರುವ ದೃಶ್ಯಗಳು ಮನಕಲಕುವಂತಿತ್ತು.
ರೋಗ ಹರಡುವ ಶೌಚಾಲಯ: ರೋಗ ಗುಣಪಡಿಸಿ ಕೊಳ್ಳಲು ಆಸ್ಪತ್ರೆಗೆ ಬಂದರೆ ರೋಗ ಗುಣಪಡಿಸುವ ಬದಲು ರೋಗ ಹರಡುವ ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆ ಬದಲಾಗುತ್ತಿದೆ. ಅ ಧಿಕಾರಿ, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಿಮ್ಸ್‌ನ ಶೌಚಾಲಯಗಳು ರೋಗ ಹರಡುವ ಅವ್ಯವಸ್ಥೆಯ ಆಗರವಾಗಿದೆ. ಸರಿಯಾಗಿ ನಿರ್ವಹಣೆ ಇಲ್ಲದೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ. ಜತೆಗೆ ವಾರ್ಡ್‌ಗಳ ಶೌಚಾಲಯಗಳಲ್ಲಿ ಸ್ವತ್ಛತೆ ಇಲ್ಲದಂತಾಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ನೀರು ಸೋರುವ ಸ್ಥಿತಿಗೆ ತಲುಪಿವೆ. ಸಿಂಕ್ ಗಳು, ನೆಲದ ಟೈಲ್ಸ್‌ಗಳು ಒಡೆದಿವೆ. ಶೌಚಾ ಲಯಕ್ಕೆ ಹೋಗಲು ನೂರು ಸಲ ಯೋಚನೆ ಮಾಡು ವಂಥ ಸ್ಥಿತಿ ಎದುರಾಗಿದೆ. ಆದರೂ ಮಿಮ್ಸ್‌ನ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ಸೂಕ್ತ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲ: ಮಿಮ್ಸ್‌ನಲ್ಲಿ ಆಗಾಗ್ಗೆ ವೈದ್ಯರ ನಿರ್ಲಕ್ಷ್ಯ, ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆರೋಪ ಮಾಡುತ್ತಲೇ ಇರುತ್ತಾರೆ. ಆದರೆ, ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರ ಮಿಮ್ಸ್ ನ ಅವ್ಯವಸ್ಥೆ ಸರಿಪಡಿಸಲು ಮುಂದಾಗದಿರುವುದು ಶೋಚ ನೀಯವಾಗಿದೆ. ಕೂಡಲೇ ಜನಪ್ರತಿನಿ ಧಿಗಳು, ಸರ್ಕಾರ ಹಾಗೂ ಅಧಿ ಕಾರಿಗಳು ಎಚ್ಚೆತ್ತುಕೊಂಡು ಆಸ್ಪತ್ರೆಗೆ ಅಗತ್ಯ ಬೆಡ್, ಸುಸಜ್ಜಿತ ಶೌಚಾಲಯ ಸೇರಿ ರೋಗಿಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪೂರ್ಣಚಂದ್ರ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.