ಗಣಿಗಾರಿಕೆ ಲೈಸೆನ್ಸ್ ರದ್ದು : ಅಧಿಕಾರಿಗಳ ವೈಫಲ್ಯ?
ಸಂಸದೆ ಸುಮಲತಾ ಹೋರಾಟಕ್ಕೆ ಹಿನ್ನಡೆ; ಜಿಲ್ಲಾಧಿಕಾರಿಗಳ ತರಾತುರಿ ಆದೇಶಕ್ಕೆಹೈಕೋರ್ಟ್ ಗುದ್ದು
Team Udayavani, Sep 19, 2021, 4:07 PM IST
ಮಂಡ್ಯ: ಕೆಆರ್‌ಎಸ್ ಸುತ್ತಮುತ್ತ 28 ಗಣಿಗಾರಿಕೆ ಹಾಗೂ ಕ್ರಷರ್‌ಗಳ ಲೈಸೆನ್ಸ್ ರದ್ದು ಮಾಡಿದ ಜಿಲ್ಲಾ ಧಿಕಾರಿಗಳ ಆದೇಶವನ್ನು ಹೈಕೋರ್ಟ್ ರದ್ದು ಮಾಡಿರುವುದಕ್ಕೆ ಅಧಿ ಕಾರಿಗಳ ಕಾನೂನು ವೈಫಲ್ಯವೇ ಕಾರಣ ಎಂಬ ಚರ್ಚೆಗಳು ಪ್ರಾರಂಭವಾಗಿದೆ.
ಗಣಿಗಾರಿಕೆ ಲೈಸೆನ್ಸ್ ರದ್ದು ಮಾಡಲು ಸರಿಯಾಗಿ ಕಾನೂನು ಪಾಲಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದ ರಿಂದ ಹೈಕೋರ್ಟ್ ರದ್ದು ಮಾಡಿದೆ. ಗಣಿ ಮಾಲೀಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ನಡೆದುಕೊಂಡಿದೆ ಎಂದು ರೈತ ಮುಖಂಡರು ಆರೋಪಿಸುತ್ತಿದ್ದಾರೆ. ಕಾನೂನು ಪಾಲಿಸಲು ಸೂಚನೆ: ಗಣಿಗಾರಿಕೆ ಲೈಸೆನ್ಸ್ ರದ್ದು ಗಣಿ ಮಾಲಿಕರ ವಾದ ಆಲಿಸಿಲ್ಲ. ಅಲ್ಲದೆ, ಮುಂಚಿತವಾಗಿ ನೋಟಿಸ್ ನೀಡದೆ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂಬ ಗಣಿ ಮಾಲಿಕರ ವಾದಕ್ಕೆ ಹೈಕೋರ್ಟ್ ಅಸ್ತು ಎಂದಿದ್ದು, ಜಿಲ್ಲಾ ಧಿಕಾರಿಗೆ ಕಾನೂನು ಪ್ರಕ್ರಿಯೆ ಪಾಲಿಸುವಂತೆ ಸೂಚಿಸಿದೆ.
ಜು.31ರಂದು ಜಾರಿಗೆ ಬಂದಿದ್ದ ಆದೇಶ: 28 ಗಣಿಗಾರಿಕೆಯ ಸಿ ಫಾರಂ ಕಲ್ಲುಗಣಿ ಗುತ್ತಿಗೆ ಹಾಗೂ ಕ್ರಷರ್‌ಗಳ ಗುತ್ತಿಗೆ ಪರವಾನಗಿ ಅವಧಿ ಮುಂದುವರಿಸುವ ಬಗ್ಗೆ ಜು.28ರಂದು ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾ ಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಂತೆ ಕಲ್ಲುಗಣಿ ಹಾಗೂ ಕ್ರಷರ್‌ಗಳ ಗುತ್ತಿಗೆ ಅವಧಿ ವಿಸ್ತರಿಸಿ ನೀಡಿದ ಕಲ್ಲುಗಣಿ ಗುತ್ತಿಗೆಗೆ ಸಂಬಂ ಧಿಸಿದಂತೆ ಪ್ರಾಧಿಕಾರದಿಂದ ಇದುವರೆಗೂ ಪರಿಸರ ನಿರಪೇಕ್ಷಣಾ ಪತ್ರ ಸಲ್ಲಿಸಿಲ್ಲ. ಅಲ್ಲದೇ, ಹೆದ್ದಾರಿ ಸಮೀಪ ಕಲ್ಲುಗಣಿ, ಕ್ರಷರ್‌ಗಳು ಇವೆ ಎಂಬ ಹಿನ್ನೆಲೆ ರದ್ದುಪಡಿಸುವ ತೀರ್ಮಾನ ಕೈಗೊಂಡು ಜು.31ರಂದು ಜಾರಿಗೆ ಬರುವಂತೆ ಜಿಲ್ಲಾ ಧಿಕಾರಿ ಲೈಸೆನ್ಸ್ ರದ್ದು ಮಾಡಿ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ:ಗೋವಾದಲ್ಲಿ ಶೀಘ್ರವೇ ಪ್ರವಾಸೋದ್ಯಮ ಅವಲಂಭಿತ ಉದ್ಯೋಗ ಆರಂಭ: ಪ್ರಮೋದ್ ಸಾವಂತ್
ತರಾತುರಿ ಆದೇಶವೇ?: ಸಂಸದೆ ಸುಮಲತಾ ಅಂಬರೀಷ್ ಸಂಸತ್‌ನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಉಪ ರಾಷ್ಟ್ರಪತಿ, ಗೃಹ ಸಚಿವ, ಜಲಶಕ್ತಿ ಸಚಿವ, ಗಣಿಗಾರಿಕೆ ಸಚಿವ, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇ ಧಿಸುವಂತೆ ಒತ್ತಡ ಹೇರಿದ್ದರು. ಇದರಿಂದ ಒತ್ತಡಕ್ಕೆ ಸಿಲುಕಿದ ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆ ಅಧಿ ಕಾರಿಗಳು ಕಾನೂನು ಪ್ರಕ್ರಿಯೆ ಪಾಲಿಸದೆ ಲೈಸೆನ್ಸ್ ರದ್ದು ಪಡಿಸಿದ್ದರೇ ಎಂಬ ಮಾತು ಕೇಳಿ ಬರುತ್ತಿವೆ
ಮಾಹಿತಿ ಸಂಗ್ರಹಿಸಿದ್ದ ಕೇಂದ್ರದ ಜಲಶಕ್ತಿ ಇಲಾಖೆ
ಕಳೆದ ಆ.27ರಂದು ಕೇಂದ್ರದ ಜಲಶಕ್ತಿ ಇಲಾಖೆಯ ಉನ್ನತ ಅ ಧಿಕಾರಿಗಳ ತಂಡ ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಸ್ಥಳೀಯ ನೀರಾವರಿ ಇಲಾಖೆ ಅಧಿ ಕಾರಿಗಳಿಂದ ಮಾಹಿತಿ ಕಲೆಹಾಕಿದ ಅವರು, ಅಕ್ರಮ ಗಣಿಗಾರಿಕೆಯಿಂದ ತೊಂದರೆ, ಡ್ಯಾಂ ಬಿರುಕು ವಿಚಾರ, ಸುರಕ್ಷತೆಯ ಮಾಹಿತಿ ಪಡೆದು ನಂತರ ಡ್ಯಾಂಗೆ ತೆರಳಿ ವೀಕ್ಷಣೆ ಮಾಡಿದ್ದರು. ಅಧಿಕಾರಿಗಳು ನೀಡಿರುವ ವರದಿ ಬಗ್ಗೆ ಇನ್ನೂ ತಿಳಿದಿಲ್ಲ.
ಕೇಂದ್ರದ ಮೇಲೆ ಒತ್ತಡ ಹೇರಿದ್ದ ಸುಮಲತಾ
ಕೆಆರ್‌ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಸಂಸತ್ ಹಾಗೂ ಹೊರಗು ಹೋರಾಟ ಮಾಡಿದ್ದರು. ಕೇಂದ್ರ ಸಚಿವರಿಗೆ ಮನವಿ ನೀಡುತ್ತಾ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅದರಂತೆ ಜಿಲ್ಲಾಡಳಿತ ಗಣಿಗಾರಿಕೆ ನಿಷೇಧಿ ಸಿ ಆದೇಶ ಹೊರಡಿಸಿತ್ತು. ಇದರಿಂದ ಸುಮಲತಾ ಗಣಿ ಹೋರಾಟಕ್ಕೆ ಮೊದಲ ಭಾಗವಾಗಿ ಸಣ್ಣ ಜಯ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ಹೈಕೋರ್ಟ್ ಜಿಲ್ಲಾ ಧಿಕಾರಿ ಆದೇಶ ರದ್ದುಪಡಿಸಿರುವುದರಿಂದ ಸುಮಲತಾ ಹೋರಾಟಕ್ಕೆ ಹಿನ್ನೆಡೆಯಾದಂತಾಗಿದೆ. ಸಂಸದೆ ಸುಮಲತಾ ರಾಜ್ಯ ಗಣಿ ಸಚಿವರು ಹಾಗೂ ಕೇಂದ್ರದ ತಜ್ಞರನ್ನು ಕರೆಸಿ ಕೆಆರ್‌ಎಸ್ ಸುತ್ತಮುತ್ತ ಹಾಗೂ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲೂ ಪರಿಶೀಲನೆ ನಡೆಸಿದ್ದರು. ಅಲ್ಲದೆ, ತಾವೇ ಖುದ್ದಾಗಿ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿದ್ದರು. ಪ್ರಸ್ತುತ ಹೈಕೋರ್ಟ್ ಆದೇಶದಿಂದ ಸುಮಲತಾ ಭೇಟಿ ನೀಡಿದ ಸ್ಥಳಗಳಲ್ಲಿನ ಗಣಿ ಮಾಲಿಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ನಡೆಯದ ಡ್ರೋಣ್ ಸರ್ವೆ
ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ನಷ್ಟವಾಗಿರುವ ರಾಜಧನ, ದಂಡ ವಸೂಲಿ ಅಂದಾಜಿಸಲು ಡ್ರೋಣ್ ಸರ್ವೆ ನಡೆಸಲು ಗಣಿ ಇಲಾಖೆ ಮುಂದಾಗಿತ್ತು. ಡ್ರೋಣ್ ಸರ್ವೆ ನಡೆಸಲು ಟೆಂಡರ್ ಆಹ್ವಾನಿಸ ಲಾಗಿತ್ತು. ಆದರೆ ಅದು ಇನ್ನೂ ಕಾರ್ಯಗತವಾಗಲೇ ಇಲ್ಲ. ಅಲ್ಲದೆ, ಟೆಂಡರ್ ಪ್ರಕ್ರಿಯೆ ಇನ್ನೂ ಗೌಪ್ಯವಾಗಿಯೇ ಇದೆ. ಜತೆಗೆ ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಅಪಾಯವಿದೆ ಎಂಬುದನ್ನು ತಿಳಿಯಲು ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಸಿದ್ಧತೆಯೂ ನಡೆದಿತ್ತು. ಅದೂ ಅರ್ಧಕ್ಕೆ ನಿಂತಿದೆ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.