ಚಿಕಿತ್ಸೆ ಸಿಗದಿದ್ದಕ್ಕೆ ಪ್ರಧಾನಿಯೇ ಕಾರಣ: ಶಾಸಕ ಅನ್ನದಾನಿ
Team Udayavani, May 4, 2021, 11:00 PM IST
ಮಳವಳ್ಳಿ: ಲಕ್ಷಾಂತರ ಕೋಟಿ ರೂ.ಬಜೆಟ್ ಮಂಡಿಸುವ ಕೇಂದ್ರ -ರಾಜ್ಯ ಸರ್ಕಾರಗಳು, ವೈದ್ಯಕೀಯ ಸೌಲಭ್ಯ ನೀಡದೇ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಅದಕ್ಕೆ ನೇರ ಹೊಣೆ ಪ್ರಧಾನಿ ನರೇಂದ್ರ ಮೋದಿ ಎಂದು ಶಾಸಕ ಕೆ.ಅನ್ನದಾನಿ ಆರೋಪಿಸಿದರು.
ತಾಲೂಕಿನ ವಡ್ಡರಹಳ್ಳಿ ವಸತಿ ಶಾಲೆಯಲ್ಲಿನ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜಕೀಯ ಹೊರತುಪಡಿಸಿ ಹೇಳುವುದಾರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತ ಸಂಪೂರ್ಣವಾಗಿ ಹಾಳಾಗಿದ್ದು, ಇದಕ್ಕೆ ಸಾಕ್ಷಿ ಇವತ್ತಿನ ವ್ಯವಸ್ಥೆಯಲ್ಲಿ ಬೆಡ್, ಆಸ್ಪತ್ರೆ, ಆಕ್ಸಿಜನ್, ಆ್ಯಂಬುಲೆನ್ಸ್ ಸಿಗದೇ ಜನ ಫುಟ್‌ಪಾತ್‌ನಲ್ಲಿ ಸಾಯುತ್ತಿರುವುದು, ವಿಶೇಷವಾಗಿ ಯುವಕರು ವೈದ್ಯಕೀಯ ಕೊರತೆಗಳಿಂದ ಸಾಯುವುದಕ್ಕೆ ಮೋದಿ ಅವರೇ ಕಾರಣ ಎಂದರು.
ಕ್ರಮ ಅನುಸರಿಸಿ:
ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಆರೈಕೆಗೆ ಸುಮಾರು 300 ಬೆಡ್ ವ್ಯವಸ್ಥೆ ಕಲ್ಪಿಸುತ್ತಿದ್ದು, ಅಗತ್ಯವಿದ್ದಲ್ಲಿ ಮತ್ತಷ್ಟು ಬೆಡ್ ಸಿದ್ಧಪಡಿಸಲಾಗುವುದು. ಅವರ ಆರೋಗ್ಯ ಸುಧಾರಣೆಗೆ ತಾಲೂಕು ಆಡಳಿತ ಪೌಷ್ಟಿಕಾಂಶವುಳ್ಳ ಆಹಾರ, ಉತ್ತಮ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದ್ದು, ಜನ ಸೋಂಕಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಹೊರಗೆ ಬರಬಾರದು. ಅಂತರ ಕಾಯ್ದುಕೊಂಡು ಆರೋಗ್ಯ ಇಲಾಖೆ ಸೂಚಿಸುವ ಕ್ರಮ ಅನುಸರಿಸಬೇಕೆಂದರು.
ಪಟ್ಟಣ ಸೇರಿ ಹಲವೆಡೆ ಪೊಲೀಸರು ನೂನ್ಯತೆಗಳ ಬಗ್ಗೆ ಬಗ್ಗೆ ಪ್ರತಿಕ್ರಿಯಿಸಿ, ಪೊಲೀಸ್ ಇಲಾಖೆಯಲ್ಲಿ ಲೋಪದೋಷಗಳ ಬಗ್ಗೆ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.
ವ್ಯವಸ್ಥೆಗೆ ಜೈ ಎಂದ ಸೋಂಕಿತರು:
ಶಾಸಕ ಕೆ.ಅನ್ನದಾನಿ ಅವರು ತಾಲೂಕು ಮಟ್ಟದ ಅ ಧಿಕಾರಿಗಳೊಂದಿಗೆ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿದ್ದ ವೇಳೆ ಸೋಂಕಿತರನ್ನು ಶಾಸಕರು ನಿಮಗೆ ಊಟ, ವೈದ್ಯಕೀಯ, ಸ್ವತ್ಛತೆ ಸೇರಿ ಏನಾದರೂ ಕೊರತೆ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಸೋಂಕಿತರು ಎಲ್ಲವೂ ಉತ್ತಮವಾಗಿವೆ ಎಂದರು.
ತಹಶೀಲ್ದಾರ್ ಎಂ.ವಿಜಯಣ್ಣ, ತಾಲೂಕು ನೋಡಲ್ ಅಧಿ ಕಾರಿ ಅಶ್ವಥ್, ತಾಪಂ ಇಒ ಬಿ.ಎಸ್.ಸತೀಶ್, ತಾಲೂಕು ವೈದ್ಯಾಧಿ ಕಾರಿ ಡಾ.ವೀರಭದ್ರಪ್ಪ, ಸಿಡಿಪಿಒ ಕುಮಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.