ಅಕ್ರಮಗಳಿಗೆ ಕಡಿವಾಣ ಹಾಕಿ ಮನ್‌ಮುಲ್ ಆಡಳಿತ ಮಂಡಳಿಯಿಂದ ಹೆಚ್ಚಿನ ಒತ್ತು ನೀಡಿ ಕೆಲಸ: ಶಾಸಕ
Team Udayavani, Apr 19, 2022, 3:32 PM IST
ಮಂಡ್ಯ: ಹಾಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮನ್‌ಮುಲ್ ಆಡಳಿತ ಮಂಡಳಿ ಒತ್ತು ನೀಡಿ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ತಾಲೂಕಿನ ಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ಹಾಲು ಶೀಥಲೀಕರಣ ಘಟಕವನ್ನು (ಬಿಎಂಸಿ) ಉದ್ಘಾಟಿಸಿ ಮಾತನಾಡಿದರು.
ಆಡಳಿತ ಮಂಡಳಿ ಕ್ರಮ: ಹಳೇ ಬಿಎಂಸಿ ಘಟಕಗಳಲ್ಲಿ ನಿತ್ಯ ಸಾವಿರಾರು ಲೀಟರ್ ಹಾಲು ಕಳ್ಳತನ ಮಾಡುತ್ತಿದ್ದರು. ಇಂತಹ ಪ್ರಕರಣ ಗಳನ್ನು ಅಧ್ಯಕ್ಷರು ಪತ್ತೆ ಹಚ್ಚಿ ತನಿಖೆಗೆ ಆದೇಶ ಮಾಡಿ ದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮ ವಹಿಸಲಿದೆ ಎಂದು ಹೇಳಿದರು.
ಸಹಕಾರ ನೀಡಿ: ಶಿಲಾನ್ಯಾಸ ಫಲಕ ಉದ್ಘಾ ಟಿಸಿದ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮ ಚಂದ್ರು ಮಾತನಾಡಿ, ಗುಣಮಟ್ಟದ ಹಾಲನ್ನು ಡೇರಿಗೆ ಹಾಕಬೇಕು. ಕಳಪೆ ಹಾಲು ಹಾಕಿದರೆ ಎಷ್ಟು ಪ್ರಮಾಣದ ಹಾಲು ಶೇಖರಣೆಯಾಗಿ ರುತ್ತೋ ಅಷ್ಟೂ ಪ್ರಮಾಣದ ಹಾಲು ಕೆಡುತ್ತದೆ. ಆದ್ದರಿಂದ ಉತ್ತಮ ಹಾಲನ್ನು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಕುಟುಂಬದ ಆರೋಗ್ಯವೂ ಮುಖ್ಯ: ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಮಾಜಿ ಶಾಸಕ ದಿ.ಎಚ್.ಡಿ.ಚೌಡಯ್ಯ ಅವರ ಸಲಹೆ ಮೇರೆಗೆ ಗ್ರಾಮದಲ್ಲಿ ಬಿಎಂಸಿ ಘಟಕ ಉದ್ಘಾ ಟನೆಯಾಗಿದೆ. ಉತ್ಪಾದಕರು ತಮಗೆ ಎಷ್ಟು ಬೇಕೋ ಅಷ್ಟು ಹಾಲನ್ನು ಕುಟುಂಬಕ್ಕಾಗಿ ಇಟ್ಟು ಕೊಂಡು ಉಳಿದ ಹಾಲನ್ನು ಡೇರಿಗೆ ಹಾಕಬೇಕು. ತಮ್ಮ ಕುಟುಂಬವೂ ಆರೋಗ್ಯವಾಗಿರಬೇಕು. ಎಲ್ಲವನ್ನೂ ಹಾಕದೆ ಸ್ವಲ್ಪ ಮಟ್ಟಿಗೆ ಉಳಿಸಿಕೊಳ್ಳು ವುದು ಅಗತ್ಯ ಎಂದು ಸಲಹೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇ ಶಕ ಎಚ್.ಎಲ್.ಶಿವಣ್ಣ, ಡೇರಿ ಅಧ್ಯಕ್ಷ ತಿಮ್ಮೇ ಗೌಡ, ಮಾಜಿ ಅಧ್ಯಕ್ಷ ನಿಂಗರಾಜು, ಟಿ.ಟಿ.ಶ್ರೀನಿ ವಾಸ್, ಉಪಾಧ್ಯಕ್ಷೆ ಶಾಂತಮ್ಮ, ಮಾಜಿ ಉಪಾಧ್ಯಕ್ಷ ಗಂಗಾಧರ್, ಗ್ರಾಪಂ ಉಪಾಧ್ಯಕ್ಷ ಎಚ್.ಡಿ.ರವಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಎಸ್.ಪ್ರಭಾಕರ್, ಜನತಾ ಶಿಕ್ಷಣ ಸಂಸ್ಥೆಯ ಎಚ್.ಸಿ.ಮೋಹನ್‌ಕುಮಾರ್, ಕೆಎಸ್‌ಎಫ್‌ಸಿ ಲೀಗಲ್ ಅಧಿ ಕಾರಿ ಎಚ್.ಎಂ.ವಿಜಯ ಕುಮಾರ್, ಗ್ರಾಮದ ಮುಖಂಡ ಜಟ್ಟಿಕುಮಾರ್, ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ.ಕುಮಾರ್, ಉಪಾಧ್ಯಕ್ಷ ಕೃಷ್ಣ, ಮನ್‌ಮುಲ್ ಉಪವ್ಯವಸ್ಥಾಪಕ ಎಚ್.ಎನ್. ಮಂಜೇಶ್‌ಗೌಡ, ವಿಸ್ತರಣಾಧಿ ಕಾರಿ ಎಂ.ಸಿ.ರಶ್ಮಿ, ಆರ್‌ಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಸಿ.ಶ್ರೀಧರ್, ಪಶು ವೈದ್ಯಾ ಧಿಕಾರಿ ಸುರೇಶ್, ಆರೋಗ್ಯಾಧಿ ಕಾರಿ ಡಾ. ದುರ್ಗಾಂಭ, ಸಂಘದ ನಿರ್ದೇಶಕರಾದ ಎಚ್. ಬಿ.ಯೋಗೇಶ್, ಶಿವಲಿಂಗಯ್ಯ, ಉಮೇಶ್, ಶಿವರಾಜು, ಪದ್ಮಾ, ಶಿವ, ಸಿಇಒ ಶಿವಕುಮಾರ್, ಸಿಬ್ಬಂದಿಗಳಾದ ಎಚ್.ಸಿ.ಬೋರಯ್ಯ, ಶಿವಕುಮಾರ್, ಬೋರಯ್ಯ, ರಘು, ತಮ್ಮೇ ಗೌಡ ಮತ್ತಿತರರು ಉಪಸ್ಥಿತರಿದ್ದರು
ಅಭಿವೃದ್ಧಿಗೆ ಸಹಕರಿಸಿ: ಮಾಜಿ ಶಾಸಕ ಚೌಡಯ್ಯ ಅವರು ಬಿಎಂಸಿ ಘಟಕ ಸ್ಥಾಪನೆಗೆ ಸಾಕಷ್ಟು ಶ್ರಮ ವಹಿಸಿದ್ದರು. ಅವರ ಆಶಯದಂತೆ ಇದೀಗ ಗ್ರಾಮದಲ್ಲಿ ಬಿಎಂಸಿ ಘಟಕ ಸ್ಥಾಪನೆಯಾಗಿದೆ. ಇದನ್ನು ಪ್ರತಿಯೊಬ್ಬ ಉತ್ಪಾದಕರೂ ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳಬೇಕು. ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.