ನನ್ನ ಕ್ಷೇತ್ರದ ಅಭಿವೃದ್ಧಿಗೆ ನಿನ್ನನ್ನು ಕಾಯಬೇಕಾ?
Team Udayavani, Mar 1, 2021, 1:37 PM IST
ಮಂಡ್ಯ: ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿಸುವುದಕ್ಕೆ ನಾನು ನಿನ್ನನ್ನು ಕಾಯಬೇಕಾ, ನೀನು ಅಷ್ಟು ದೊಡ್ಡವನಾ. ನಿನ್ನನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಬೇರೆ ಗುತ್ತಿಗೆದಾರರಿಂದ ಕೆಲಸ ಮಾಡಿಸುತ್ತೇನೆ ಎಂದು ಶಾಸಕ ಎಂ.ಶ್ರೀನಿವಾಸ್ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.
ಕಾವೇರಿ ಜಲಾನಯನ ಯೋಜನೆಯಡಿ ಉಮ್ಮಡಹಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಕಾಳೇಗೌಡರ ಜಮೀನಿನವರೆಗೆ ಅಚ್ಚುಕಟ್ಟುವರೆಗೆ ಹೋಗುವ ಮೆಟ್ಲಿಂಗ್ ಮಾಡುವ 8 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನಿಗದಿಯಾಗಿತ್ತು. ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಉಮ್ಮಡಹಳ್ಳಿ ಗ್ರಾಮಕ್ಕೆ ಶಾಸಕ ಎಂ.ಶ್ರೀನಿವಾಸ್ ತೆರಳಿದ್ದರು. ಆ ವೇಳೆಗೆ ಇಂಜಿನಿಯರ್ ರಶ್ಮಿ ಹಾಗೂ ಗುತ್ತಿಗೆದಾರ ಕನಕಪುರ ಚೇತನ್ ಬಂದಿರಲಿಲ್ಲ. ಇದನ್ನು ನೋಡಿದ ಶಾಸಕರು ಕೋಪಗೊಂಡರು. ಸ್ವಲ್ಪ
ಹೊತ್ತಿನಲ್ಲೇ ಇಂಜಿನಿಯರ್ ರಶ್ಮಿ ಸ್ಥಳಕ್ಕೆ ಧಾವಿಸಿದರು. ಆ ಸಮಯದಲ್ಲಿ ಶಾಸಕರು ಇಂಜಿನಿಯರ್ ರಶ್ಮಿ ಅವರನ್ನು ಕಂಡು ಏನ್ರೀ, ಅಧಿಕಾರಿಗಳಾಗಿ ನೀವು ಇಷ್ಟು ತಡವಾಗಿ ಬರಬಹುದೇ. ನಾವು ನಿಮ್ಮನ್ನು ಕಾಯಬೇಕಾ. ಎಲ್ಲಿ ಗುತ್ತಿಗೆದಾರರು ಎಂದು ಕೇಳಿದರು.
ಕೂಡಲೇ ಇಂಜಿನಿಯರ್ ರಶ್ಮಿ ಗುತ್ತಿಗೆದಾರ ಚೇತನ್‌ಗೆ ಕರೆ ಮಾಡಿದರು. ಕಾರು ಪಂಕ್ಚರ್ ಆಗಿದೆ. ಬರುತ್ತಿದ್ದೇನೆ ಎಂದು ಹೇಳಿದರು. ಇದರಿಂದ ಬೇಸರಗೊಂಡ ಶಾಸಕ ಎಂ.ಶ್ರೀನಿವಾಸ್ ವಾಪಸ್ ತೆರಳುವುದಕ್ಕೆ ಕಾರು ಹತ್ತಿ ಕುಳಿತರು. ಆ ವೇಳೆಗೆ ಗುತ್ತಿಗೆದಾರ ಕನಕಪುರ ಚೇತನ್ ಅಲ್ಲಿಗೆ ಬಂದುಶಾಸಕರನ್ನು ಭೇಟಿ ಮಾಡಿದರು.
ಗುತ್ತಿಗೆದಾರ ಬ್ಲಾಕ್ ಲೀಸ್ಟ್‌ಗೆ: ಯಾರಯ್ಯ ನೀನು. ಎಷ್ಟು ಹೊತ್ತಿಗಯ್ಯ ಬರೋದು. ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ನಾನು ಬಂದು ನಿನ್ನನ್ನು ಕಾಯಬೇಕಾ. ನಾನು ಗುದ್ದಲಿ ಪೂಜೆ ಮಾಡೋಲ್ಲ ಹೋಗು. ನಿನ್ನನ್ನ ಬ್ಲಾಕ್ ಲೀಸ್ಟ್‌ಗೆ ಸೇರಿಸಿ ಬೇರೆ ಗುತ್ತಿಗೆದಾರನಿಂದ ಕೆಲಸ ಮಾಡಿಸುತ್ತೇನೆ. ನಿನ್ನಿಂದ ನಾನು ಕೆಲಸ ಮಾಡಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿ ಅಲ್ಲಿಂದ ವಾಪಸಾದರು.
ಬೇರೆ ಗುತ್ತಿಗೆದಾರನಿಂದ ಕೆಲಸ: ಶಾಸಕರು ಕೋಪಿಸಿಕೊಂಡು ಅಲ್ಲಿಂದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಚಾಮಲಾಪುರ ಕಡೆ ತೆರಳಿದ್ದರು. ಅಲ್ಲಿಗೆ ಬಂದ ಉಮ್ಮಡಹಳ್ಳಿ ಗ್ರಾಮಸ್ಥರು, ಸಾರ್ವಜನಿಕರು ಓಡಾಡುವುದಕ್ಕೆ ತುಂಬಾ ತೊಂದರೆಯಾಗಿದೆ. ದಯವಿಟ್ಟು ಬಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವಂತೆ ಮನವಿ ಮಾಡಿದರು. ಅದಕ್ಕೂ ಒಪ್ಪದ ಶಾಸಕ ಎಂ.ಶ್ರೀನಿವಾಸ್, ಆ ಗುತ್ತಿಗೆದಾರನಿಂದ ಕೆಲಸ ಮಾಡಿಸುವುದಿಲ್ಲ. ಬೇರೊಬ್ಬಗುತ್ತಿಗೆದಾರನ ಮೂಲಕ ಕೆಲಸ ಮಾಡಿಸಿಕೊಡುವ ಭರವಸೆ ನೀಡಿ ಕಳುಹಿಸಿದರು.
ಹೊಸಹಳ್ಳಿಯಲ್ಲಿ ಕಾಮಗಾರಿಗೆ ಚಾಲನೆ: ಮಂಡ್ಯ ನಗರದ 20ನೇ ವಾರ್ಡ್‌ನ ಹೊಸಹಳ್ಳಿ ಶ್ರೀಮಾರಮ್ಮದೇವಸ್ಥಾನದ ರಸ್ತೆ ಅಭಿವೃದ್ಧಿಗೆ 6 ಲಕ್ಷ ರೂ. ಮತ್ತುಸ್ಮಶಾನ ಅಭಿವೃದ್ಧಿಗೆ 9 ಲಕ್ಷ ರೂ. ಸೇರಿದಂತೆ ಒಟ್ಟು 15ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್ ಭಾನುವಾರ ಚಾಲನೆ ನೀಡಿದರು.
ನಗರಸಭೆಯ 15ನೇ ಹಣಕಾಸು ಯೋಜನೆಯಡಿ ರಸ್ತೆ ಅಭಿವೃದ್ಧಿ, ಕೂರುವ ಬೆಂಚುಗಳು ಹಾಗೂ ಪುಟ್‌ಬಾತ್ ನಿರ್ಮಾಣ ಸೇರಿದಂತೆ ಇನ್ನಿತರೆ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ ನೀಡಿದರು.ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮುಖಂಡರಾದ ಹೊಸಳ್ಳಿ ಸುರೇಶ್, ಲಿಂಗಣ್ಣ, ಶಿವಲಿಂಗಣ್ಣ, ಬಿಜೆಪಿ ಮುಖಂಡ ನಾಗೇಶ್ ಹಾಗೂ ಹೊಸಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.