MLA P. Ravikumar Gowda Ganiga: ನೂರು ವರ್ಷ ವಿದ್ಯುತ್‌ ಸಮಸ್ಯೆ ಬಾರದು


Team Udayavani, Aug 17, 2023, 12:39 PM IST

tdy-13

ನೂತನವಾಗಿ ಆಯ್ಕೆಯಾಗಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಅವರ ಕನಸಿನ ಮಂಡ್ಯ ಕ್ಷೇತ್ರ ಹೇಗಿರಬೇಕು?, ಕ್ಷೇತ್ರದ ಅಭಿವೃದ್ಧಿಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಉದಯವಾಣಿ ನಡೆಸಿದ ಸಂದರ್ಶನದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಕನಸಿನ ಮಂಡ್ಯ ನಗರ ಹೇಗಿರಬೇಕು?

ಸುಂದರ ಮಂಡ್ಯ ನಗರ ಮಾಡಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಉದ್ಯಾನಗಳು, ಗುಂಡಿ ಬಿದ್ದ ರಸ್ತೆಗಳ ಅಭಿವೃದ್ಧಿಪಡಿಸಲಾಗುವುದು. ಯುಜಿಡಿಗೆ 25 ಕೋಟಿ ರೂ. ಅನುದಾನ ಬಂದಿದ್ದು, ಡಿಪಿಆರ್‌ ಸಿದ್ಧವಾಗಲಿದೆ. ಹಲವು ಸಮಸ್ಯೆ ಸೇರಿದಂತೆ ಇನ್ನೂ ಮೂರು ತಿಂಗಳಲ್ಲಿ ನಗರದಲ್ಲಿ ಎರಡು ವೃತ್ತಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ನಗರದ ಪ್ರಮುಖ ವೃತ್ತಗಳಾದ ಹೊಸಹಳ್ಳಿ ವೃತ್ತ ಹಾಗೂ ಹೊಳಲು ವೃತ್ತಗಳ ಚಿತ್ರಣವೇ ಬದಲಾಗಲಿದೆ. ಈಗಾಗಲೇ ಪೊಲೀಸ್‌ ಕಂಬಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದ್ದು, ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ವೃತ್ತಗಳಾಗಿ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು. ಬನ್ನೂರು ರಸ್ತೆಯ ಗೌರಿಶಂಕರ ಕಲ್ಯಾಣ ಮಂಟಪದಿಂದ ಕನ್ನಿಕಾಪರಮೇಶ್ವರಿ ದೇವಾಲಯದ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದ್ದು, ಗುಣಮಟ್ಟದ ರಸ್ತೆ, ಫುಟ್‌ಪಾತ್‌, ಸೈಕಲ್‌ ಪಾತ್‌ ನಿರ್ಮಾಣ ಮಾಡಲಾಗುವುದು. ಸರ್‌ಎಂವಿ ಕ್ರೀಡಾಂಗಣ ಅಭಿವೃದ್ಧಿಯ ಜೊತೆಗೆ ಹಂತ ಹಂತವಾಗಿ ಸುಂದರ ಮಂಡ್ಯ ನಗರವನ್ನಾಗಿ ಮಾರ್ಪ ಡಿಸಲಾಗುವುದು.

ವಿದ್ಯುತ್‌ ಸಮಸ್ಯೆ ನಿವಾರಣೆಗೆ ಏನು ಕ್ರಮ ಕೈಗೊಂಡಿದ್ದೀರಾ?

ಮಂಡ್ಯ ಜಿಲ್ಲೆ ನೂರು ವರ್ಷ ವಿದ್ಯುತ್‌ ಸಮಸ್ಯೆಯ ನಿವಾ ರಣೆಗೆ ಕ್ರಮ ವಹಿಸಲಾಗಿದೆ. ಅದರಲ್ಲೂ ನನ್ನ ಮಂಡ್ಯ ವಿಧಾನಸಭಾ ಕ್ಷೇತ್ರದ ಹುಲಿವಾನ ಹಾಗೂ ಬೇಬಿ ಗ್ರಾಮಗಳ ಬಳಿ ತಲಾ 120 ಕೆವಿ ವಿದ್ಯುತ್‌ ಪವರ್‌ ಸ್ಟೇಷನ್‌ ಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಮಂಡ್ಯ ಕ್ಷೇತ್ರಕ್ಕೆ ನೂರು ವರ್ಷ ವಿದ್ಯುತ್‌ ಸಮಸ್ಯೆ ಇರಲ್ಲ.

ಶಾಸಕರಾದ ನಂತರ ನಿಮ್ಮ ಸರ್ಕಾರದಿಂದ ಎಷ್ಟು ಅನುದಾನ ತಂದಿದ್ದೀರಾ?

ರಾಜ್ಯದ 224 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ನನ್ನ ಕ್ಷೇತ್ರದ ಮೈಷುಗರ್‌ ಕಾರ್ಖಾನೆಗೆ 50 ಕೋಟಿ ರೂ. ಅನುದಾನ ನೀಡಿದ್ದಾರೆ. ಈಗಾಗಲೇ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ಎಸ್‌ಟಿಪಿ ಕೆಲಸಗಳು ನಡೆಯುತ್ತಿದೆ. ಸುಮಾರು 700 ರಿಂದ 800 ಕೋಟಿ ರೂ. ಅನುದಾನದ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಚಾಲನೆಗೊಂಡಿದ್ದು, ಇನ್ನೂ ಕೆಲವು ಕಾಮಗಾರಿಗಳಿಗೆ ಇನ್ನು 75 ದಿನಗಳಲ್ಲಿ ಚಾಲನೆ ನೀಡಲಾಗುವುದು.

ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ಏನು?

ಬಸರಾಳು ಹೋಬಳಿಯ ಬೇಬಿ ಗ್ರಾಮದ ಬಳಿ ಕೈಗಾರಿಕಾ ವಲಯ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ನಾನು ಶಾಸಕನಾದ 15 ದಿನಗಳಲ್ಲೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರ ದಲ್ಲಿಯೇ ಆರಂಭಿಸಲಾಗುವುದು. ಅಲ್ಲದೆ, ಮಂಡ್ಯ ಹೊರ ವಲಯದಲ್ಲಿ ಬೈಪಾಸ್‌ನಂತೆಯೇ ರಿಂಗ್‌ ರಸ್ತೆ ಸ್ಥಾಪನೆ ಮಾಡಲಾಗುವುದು. ಇದರಿಂದ ಕೈಗಾರಿಕೆಗಳ ಸ್ಥಾಪನೆ ಯಾ  ಗಲಿದ್ದು, ಉದ್ಯೋಗ ಸಿಗಲಿದೆ. ದೊಡ್ಡಹಳ್ಳಿಯಂತಿ ರುವ ಮಂಡ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು.

ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಏನು?

ಬಸರಾಳು ಬಳಿ 250 ಕೋಟಿ ರೂ. ವೆಚ್ಚದ ಹೇಮಾವತಿ ನಾಲೆ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಪ್ರಸ್ತಾವನೆ ಕಳುಹಿಸಲಾಗಿದ್ದು, 30 ವರ್ಷಗಳಿಂದ ಹಾಗೆ ಇದೆ. ಈ ವರ್ಷವೇ ಅನುದಾನ ಬಿಡು ಗಡೆಯಾದರೆ ಕಾಮಗಾರಿ ಆರಂಭವಾಗಲಿದೆ. ಇದರಿಂದ ಮಂಡ್ಯ, ಪಾಂಡವಪುರ ಹಾಗೂ ನಾಗಮಂಗಲ ತಾಲೂಕುಗಳಿಗೂ ಅನುಕೂಲ ವಾಗಲಿದೆ. ಮಂಡ್ಯ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆ ರಿಟರ್ನಿಂಗ್‌ ವಾಲ್‌Ì ಅಳವಡಿಸುವ ಮೂಲಕ ಶಾಶ್ವತ ಪರಿಹಾರ ನೀಡಲಾಗುವುದು. ಅದಕ್ಕಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.

ಹಕ್ಕುಪತ್ರಗಳ ವಿತರಣೆ ಯಾವಾಗ?

ನಗರದಲ್ಲಿ ಕಳೆದ 75 ವರ್ಷಗಳಿಂದ ಕೆಲವು ಕಡೆ ಹಕ್ಕುಪತ್ರಗಳನ್ನು ವಿತರಣೆ ಮಾಡಿಲ್ಲ. ಆದರೆ ಈ ಬಾರಿ ಎಲ್ಲರಿಗೂ ಹಕ್ಕುಪತ್ರಗಳ ವಿತರಣೆಗೆ ಕ್ರಮ ವಹಿಸಲಾ ಗುವುದು. ಶೇ.90ರಷ್ಟು ಕೆಲಸ ಮುಗಿದಿದೆ. ಮುಖ್ಯ ಮಂತ್ರಿಗಳ ಬಳಿ ಸಮಯ ಕೇಳಿದ್ದೇನೆ. ಹೊಸ ಸಕ್ಕರೆ ಕಾರ್ಖಾನೆ, 400 ಕೆವಿ ವಿದ್ಯುತ್‌ ಸ್ಟೇಷನ್‌ ಶಂಕುಸ್ಥಾಪನೆ ಹಾಗೂ ಹಕ್ಕುಪತ್ರಗಳ ವಿತರಣೆ ಮಾಡಲಾಗುವುದು.

ಮಂಡ್ಯ ಮಹಾನಗರ ಪಾಲಿಕೆ ಯಾವಾಗ ಆಗಲಿದೆ?:

ಮಹಾನಗರ ಪಾಲಿಕೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಇದುವರೆಗೂ ಪ್ರಸ್ತಾವನೆ ಹೋಗಿಲ್ಲ. ಮಂಡ್ಯ ಮಹಾನಗರ ಪಾಲಿಕೆ ಮಾಡಲು 3 ಲಕ್ಷದಷ್ಟು ಜನಸಂಖ್ಯೆ ಇರಬೇಕು. ಆದರೆ ಪ್ರಸ್ತುತ 2 ಲಕ್ಷ ಇದೆ. ಸುತ್ತಮುತ್ತ ಗ್ರಾಮಗಳನ್ನು ಸೇರಿಸಿಕೊಂಡು ಮಾಡಬೇಕಾ ಗಿದೆ. ಇದರ ಸಾಧಕ-ಬಾಧಕಗಳ ಚರ್ಚೆ ಮಾಡಬೇಕು. ಈ ಬಾರಿ ಪ್ರಸ್ತಾವನೆ ಸಲ್ಲಿಸುವಾಗ ಸರ್ವೆ ನಡೆಸಿ ಯಾವ ಗ್ರಾಮಗಳನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಭೌಗೋಳಿಕ ವರದಿ ತಯಾರಿಸಿ ನಂತರ ಕಳುಹಿಸಲಾಗುವುದು. ಅಲ್ಲದೆ, ಯತ್ತಗದಹಳ್ಳಿ ಹಾಗೂ ಕೋಣನಹಳ್ಳಿ ಕೆರೆಗಳಲ್ಲಿ ಬೋಟಿಂಗ್‌ ವಿಹಾರ ವ್ಯವಸ್ಥೆ ಹಾಗೂ ಗಾಂ ಧಿನಗರದಲ್ಲಿರುವ 7 ಎಕರೆ ಜಮೀನಿನಿದ್ದು, ಅಲ್ಲಿ ಏನು ಮಾಡಬೇಕು ಎಂಬುದರ ಚರ್ಚೆ ನಡೆಸಿ ಕ್ರಮ ವಹಿಸಲಾಗುವುದು.

ಹೊಸ ಯೋಜನೆಗಳು :

ಬಸರಾಳು ಬಳಿ ಕೈಗಾರಿಕೆಗಳ ಸ್ಥಾಪನೆ

ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ

ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರಗಳ ವಿತರಣೆ

ಮಹಾನಗರ ಪಾಲಿಕೆ ಮಾಡಲು ಸಾಧಕ-ಬಾಧಕಗಳ ಚರ್ಚೆ

ಗುಣಮಟ್ಟದ ರಸ್ತೆ, ಫುಟ್‌ಬಾತ್‌, ಸೈಕಲ್‌ ಪಾತ್‌ ನಿರ್ಮಾಣ

– ಎಚ್‌.ಶಿವರಾಜು

ಟಾಪ್ ನ್ಯೂಸ್

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.