ಮಗನ ಗೆಲುವಿಗಾಗಿ ಅಮ್ಮನ ಟೆಂಪಲ್‌ ರನ್‌ 


Team Udayavani, Mar 6, 2019, 7:25 AM IST

magana.jpg

ಮಂಡ್ಯ/ಮದ್ದೂರು: ಲೋಕಸಭಾ ಕ್ಷೇತ್ರದ ಜೆಡಿಎಸ್‌ನ ಸಂಭಾವ್ಯ ಅಭ್ಯರ್ಥಿ ಹಾಗೂ ಪುತ್ರ ನಿಖಿಲ್‌ ಗೆಲುವಿಗಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಲವು ದೇಗುಲಗಳಿಗೆ ಭೇಟಿ ನೀಡಿ ಮಗನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದ್ದಾರೆ.

ಕಳೆದ ಮಂಗಳವಾರವಷ್ಟೇ ಮದ್ದೂರಿನ ಶ್ರೀಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಅನಿತಾ, ಪುತ್ರ ನಿಖಿಲ್‌ಗೆ ಮಂಡ್ಯ ಕ್ಷೇತ್ರದ ಟಿಕೆಟ್‌ ದೊರೆತು ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಐದು ಮಂಗಳವಾರ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದಲ್ಲದೆ, ಒಂದೂಕಾಲು ರೂಪಾಯಿ ಕಾಣಿಕೆ ಹಾಕುವುದಾಗಿ ಎಂದು ಹರಕೆ ಹೊತ್ತಿದ್ದರು.

ಹರಕೆ ಹೊತ್ತ ಬಳಿಕ ಮುಂದಿನ ಐದು ಮಂಗಳವಾರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರೆ ಒಳಿತಾಗಲಿದೆ ಎಂಬ ನಂಬಿಕೆಯೊಂದಿಗೆ 2ನೇ ಮಂಗಳವಾರ ಅನಿತಾ ಕುಮಾರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಿಖಿಲ್‌ಗೆ ಎಲ್ಲಾ ರೀತಿಯಲ್ಲೂ ಒಳಿತಾಗಲಿ ಎಂದು ಪ್ರಾರ್ಥಿಸಿದರು. 

ಈ ವಿಷಯವಾಗಿ ಅನಿತಾ ಅವರನ್ನು ಪ್ರಶ್ನಿಸಿದಾಗ, ನಾನು ದೈವಭಕ್ತೆ. ದೇಗುಲಗಳಿಗೆ ಹೋಗುವುದರಲ್ಲಿ ಯಾವುದೇ ವಿಶೇಷವಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಹೇಳಿದರು. ನಿನ್ನೆ ಕೂಡ ನಾನು ಶಿವ, ಶಕ್ತಿ ದೇವತೆ ಹಾಗೂ ಆಂಜನೇಯ ಸ್ವಾಮಿ ದೇಗುಲಗಳಿಗೆ ಭೇಟಿ ನೀಡಿದ್ದೆ. ಮಗನಿಗಾಗಿ ಪೂಜೆ ಮಾಡುತ್ತಿಲ್ಲ. ಕಳೆದ ವಾರವೂ ನಾನು ಶ್ರೀಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬಂದಿದ್ದೆ. ದೇಗುಲದ ಭೇಟಿಗೂ, ರಾಜಕಾರಣಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ರಾಜ್ಯದ ಸಿಎಂ. ಜನರಿಗಾಗಿ ಕೆಲಸ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಅವರು ಉತ್ತಮವಾಗಿ ಕೆಲಸ ಮಾಡಲಿ. ನಾಡಿನಲ್ಲಿ ಸಮೃದ್ಧಿ ತರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದ ಪ್ರಧಾನ ಅರ್ಚಕ ಪ್ರದೀಪಾಚಾರ್ಯ, ಸಹಾಯಕ ಸುರೇಶಾಚಾರ್ಯ ಇದ್ದರು. 
 
ಸುಮಲತಾ ಸ್ಪರ್ಧೆ ಕುಟುಂಬ ರಾಜಕಾರಣವಲ್ವಾ? 
ಮಂಡ್ಯ:
ನಿಖಿಲ್‌ ಸ್ಪರ್ಧೆಯನ್ನು ಕುಟುಂಬ ರಾಜಕಾರಣ ಎನ್ನುವುದಾದರೆ ಸುಮಲತಾ ಸ್ಪರ್ಧೆ ಕೂಡ ಕುಟುಂಬ ರಾಜಕಾರಣವಲ್ಲವೇ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪ್ರಶ್ನಿಸಿದ್ದಾರೆ. ಕುಟುಂಬದಿಂದ ಒಬ್ಬರು ಬರಲಿ, ಇಬ್ಬರು ಬರಲಿ ಅದು ಕುಟುಂಬ ರಾಜಕಾರಣವೇ. ನೆಹರು ಕುಟುಂಬದವರು ರಾಜಕಾರಣ ಮಾಡಲಿಲ್ವಾ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ವಾ. ಯಾವುದೇ ಪಕ್ಷ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ ಎಂದು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಬಹುತೇಕ ರಾಜಕೀಯ ಪಕ್ಷಗಳ ನಾಯಕರ ಮಕ್ಕಳು ರಾಜಕಾರಣದಲ್ಲಿದ್ದಾರೆ. ದೇವೇಗೌಡರ ಕುಟುಂಬದಿಂದ ಇಬ್ಬರು ಜಾಸ್ತಿ ಬಂದಿರಬಹುದು. ಪರ್ಸೆಂಟೇಜ್‌ ಅಷ್ಟೇ ಹೆಚ್ಚಾಗಿದೆ. ಜನರ ಒಳಿತಿಗಾಗಿ, ರೈತರ ಅಭಿವೃದ್ಧಿಗಾಗಿ ದೇವೇಗೌಡರು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಂದ ಮೇಲೆ ಕುಟುಂಬದ ನಾಲ್ಕಾರು ಜನರ ರಾಜಕಾರಣಕ್ಕೆ ಬಂದರೆ ತಪ್ಪೇನು ಎಂದು ದೇವೇಗೌಡರ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡಿದ್ದಾರೆ.

ನಿಖಿಲ್‌ಗೆ ರಾಜಕೀಯ ಅನುಭವವಿದೆ. ಪ್ರಜ್ಞಾವಂತಿಕೆ ಇದೆ. ಜನರ ಒಳಿತಿಗೆ ಏನು ಮಾಡಬೇಕೆಂಬ ಪರಿಕಲ್ಪನೆ ಹೊಂದಿದ್ದಾರೆ. ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವುದರಿಂದ ಅವರನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ಅವರ್ಯಾರೂ ರಾಜಕೀಯಕ್ಕೆ ಬರಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಅದನ್ನು ನಿರ್ಧರಿಸುವವರು ಮತದಾರರು ಎಂದರು.

ನಿಖಿಲ್‌ ಸ್ಪರ್ಧೆ: ಅಂಬಿ ಅಭಿಮಾನಿ ವಾಗ್ಧಾಳಿ 
ಮಂಡ್ಯ:
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಸ್ಪರ್ಧೆ ಖಚಿತವಾದ ಬೆನ್ನಲ್ಲೇ ಅಂಬರೀಶ್‌ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸಹಿತ ವಾಗ್ಧಾಳಿ ನಡೆಸಿದ್ದಾರೆ. ಅಂಬಿ ಅಭಿಮಾನಿ ಪ್ರಶ್ನಾವಳಿ ಅಸ್ತ್ರಗಳೊಂದಿಗೆ ವಾಗ್ಧಾಳಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಿಖಿಲ್‌ ಬಿಟ್ಟು ಜಿಲ್ಲೆಯಲ್ಲಿ ಮತ್ಯಾರೂ ಟಿಕೆಟ್‌ ಆಕಾಂಕ್ಷಿಗಳು ಇರಲಿಲ್ಲವೇ?

ಗೌಡ್ರುಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರು ಇರಲಿಲ್ಲವೇ? ನಿಷ್ಠಾವಂತರಿಗೆ ಟಿಕೆಟ್‌ ಕೊಡದೆ ನಿಖಿಲ್‌ಗೆ ಕೊಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದು ಕೊಲೆಯಾದ ಜೆಡಿಎಸ್‌ ಮುಖಂಡ ತೊಪ್ಪನಹಳ್ಳಿ ಪ್ರಕಾಶ್‌ ಪತ್ನಿಗೆ ಕೊಡಬಹುದಿತ್ತು. ಈ ಜಿಲ್ಲೆಯ ದುರಂತ ನಾಯಕ, ಮಾಜಿ ಸಚಿವ, ದಿವಂಗತ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂಗೆ ಟಿಕೆಟ್‌ ನೀಡಬಹುದಿತ್ತು ಎಂದಿದ್ದಾರೆ.

ದೇವೇಗೌಡರು ಯಾವ ಘಳಿಗೆಯಲ್ಲಿ ಕೈ ಇಟ್ರೋ ಸ್ವಾಮಿ ಅಂದು ಎಸ್‌.ಡಿ.ಜಯರಾಂ, ಇಂದು ಅಶೋಕ್‌ ಜಯರಾಂ ಎಂದೆಲ್ಲಾ ಕರೆಸಿಕೊಂಡು ಮುಂಚೂಣಿ ನಾಯಕನಾಗಿದ್ದ ಅಶೋಕ್‌ ಜಯರಾಂ ಪಕ್ಷದೊಳಗೆ ಸಾಮಾನ್ಯ ಕಾರ್ಯಕರ್ತರಾದರು. ಪಕ್ಷದ ಕಾರ್ಯಕರ್ತರೇ ಅಲ್ಲದ ನಿಖಿಲ್‌ ಲೋಕಸಭೆ ಟಿಕೆಟ್‌ ಪಡೆದುಕೊಂಡರು ಇದು ನಿಮ್ಮ ಪಕ್ಷದ ಸಿದ್ಧಾಂತವೇ ಎಂದು ಪ್ರಶ್ನೆ ಹಾಕಿದ್ದಾರೆ.

ಪಕ್ಷಕ್ಕಾಗಿ ಎಷ್ಟು ವರ್ಷ ನಿಖಿಲ್‌ ದುಡಿದಿದ್ದಾರೆ. ನಿಮ್ಮ ತಂದೆ (ಎಚ್‌.ಡಿ.ದೇವೇಗೌಡ)ಗೆ ಬಚ್ಚೇಗೌಡ್ರು ಆಧುನಿಕ ಭಸ್ಮಾಸುರ ಎಂದು ಬಿರುದು ಕೊಟ್ಟರು. ಅದನ್ನ ನಿಜ ಮಾಡಿ ತೋರಿಸಿಬಿಟ್ಟಿರಿ ಎಂದು ವ್ಯಂಗ್ಯವಾಡಿದ್ದು, ಜಿಲ್ಲೆಯಲ್ಲಿ ಜೆಡಿಎಸ್‌ ಅನ್ನು ಗೌಡ್ರ ಪಕ್ಷ ಎಂದು ಬಿಂಬಿಸಿಕೊಂಡು ಬಂದಿರಿ. ಲೋಕಸಭೆಗೆ ಸ್ಪರ್ಧಿಸೋಕೆ ಹಾಸನ ಗೌಡ್ರೇ ಬೇಕಿತ್ತಾ, ಮಂಡ್ಯದಲ್ಲಿ ಗೌಡ್ರು ಯಾರೂ ಇರಲಿಲ್ಲವಾ ಸ್ವಾಮಿ ಅಂತ ಕುಹಕವಾಡಿದ್ದಾರೆ.

ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಅಂತ ಕೇಳ್ತೀರಿ? ಹಾಗಾದ್ರೆ ರಾಮನಗರಕ್ಕೆ ನಿಮ್ಮ ಹೆಂಡತಿ ಕೊಡುಗೆ ಏನು? ಮಂಡ್ಯಕ್ಕೆ ನಿಮ್ಮ ಮಗನ ಕೊಡುಗೆ ಏನು ಎಂದೆಲ್ಲಾ ಅಂಬಿ ಅಭಿಮಾನಿ ಸಿಎಂ ಕುಮಾರಸ್ವಾಮಿಗೆ ಪ್ರಶ್ನೆ ಹಾಕಿದ್ದಾರೆ.
 
ರಮ್ಯಾ ಸತ್ತ ಉಗ್ರರ ವಿವರ ಬೇಕಿದ್ರೆ ಪಾಕಿಸ್ತಾನ ಕೇಳಲಿ 
ಮಂಡ್ಯ:
ಪಾಕಿಸ್ತಾನ ನರಕವಲ್ಲ, ಅದು ಸ್ವರ್ಗ ಎಂದು ಕೊಂಡಾಡಿದ್ದ ಮಾಜಿ ಸಂಸದೆ ರಮ್ಯಾ, ವಾಯುಪಡೆ ದಾಳಿಯಲ್ಲಿ ಸತ್ತ ಉಗ್ರರ ವಿವರ ಬೇಕಿದ್ರೆ ಪಾಕಿಸ್ತಾನವನ್ನೇ ಕೇಳಲಿ ಎಂದು ನರೇಂದ್ರ ಮೋದಿ ವಿಚಾರ ಮಂಚ್‌ನ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್‌ ಹೇಳಿದ್ದಾರೆ.

ನಮ್ಮ ಸೈನಿಕರ ಬದ್ಧತೆ, ದೇಶಭಕ್ತಿಯನ್ನು ಕಾಂಗ್ರೆಸ್‌ನವರು ಅನುಮಾನದಿಂದ ನೋಡುತ್ತಿದ್ದಾರೆ. ನಿಮಗೆ ಸಾಕ್ಷಿ ಬೇಕಾದರೆ ಕಾಂಗ್ರೆಸ್‌ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆ ಕುಮಾರಿ ರಮ್ಯಾ ನೇತೃತ್ವದಲ್ಲಿ ಉನ್ನತಮಟ್ಟದ ತನಿಖಾ ತಂಡ ರಚಿಸಲಿ. ರಮ್ಯಾ ಇನ್ವೆಸ್ಟಿಗೇಷನ್‌ ಬ್ಯೂರೋ (ಆರ್‌ಬಿಐ)ವನ್ನು ಪಾಕಿಸ್ತಾನಕ್ಕೆ ಕಳುಹಿಸಿದರೆ ನಿಜವಾಗಿಯೂ ನೀವು ಕೇಳಿದ ಸಾಕ್ಷ್ಯ ಸಿಕ್ಕರೂ ಸಿಗಬಹುದು ಎಂದಿದ್ದಾರೆ.

ಪಾಕಿಸ್ತಾನವನ್ನು ಸ್ವರ್ಗ ಎಂದು ರಮ್ಯಾ ಹಾಡಿ ಹೊಗಳಿದ್ದಾಗ ಆ ದೇಶದ ಮಾಧ್ಯಮಗಳೂ ರಮ್ಯಾ ಅವರನ್ನು ಕೊಂಡಾಡಿದ್ದವು. ಹಾಗಾಗಿ ರಮ್ಯಾ ಅವರು, ಭಾರತದ ವಾಯುಪಡೆ ದಾಳಿಯಲ್ಲಿ ಸತ್ತ ಉಗ್ರರು ಎಷ್ಟು, ಅವರ ಹೆಸರೇನು, ಅವರು ಸ್ವರ್ಗದಲ್ಲಿದ್ದಾರೋ, ನರಕದಲ್ಲಿದ್ದಾರೋ ಎಂಬ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕೇಳಿದರೆ ನೀಡಬಹುದು ಎಂದರು. 

ಟಾಪ್ ನ್ಯೂಸ್

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.