![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 13, 2022, 2:48 PM IST
ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತಾಯಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮದ್ದೂರಿನ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸದ್ಯ ಇವರು ಪಟ್ಟಣದ ಕೆಮ್ಮಣ್ಣನಾಲೆ ಸರ್ಕಲ್ ಸಮೀಪ ವಾಸವಾಗಿದ್ದಾರೆ.
ವೈದ್ಯರಾಗಿ ಕೆಲಸ ಮಾಡುತ್ತಿರುವ ವಿಷ್ಣುಪ್ರಸಾದ್ ಪುತ್ರ ನಾಗರ ಹಾವಿನ ಕಡಿತದಿಂದ ಬಚಾವಾದ ಬಾಲಕನಾಗಿದ್ದಾನೆ.
ಮನೆಯಿಂದ ಹೊರ ಹೋಗಲು ತಾಯಿ ಜೊತೆ ಹೊರ ಬಂದ ಬಾಲಕ ಮನೆಯ ಬಾಗಿಲ ಬಳಿ ಹರಿದು ಹೋಗುತ್ತಿದ್ದ ಬೃಹತ್ ಗಾತ್ರದ ನಾಗರಹಾವನ್ನ ಗಮನಿಸದೆ ಹಾವಿನ ಮುಂದೆ ಕಾಲಿಟ್ಟಿದ್ದಾನೆ. ಹೆಡೆ ಎತ್ತಿ ನಿಂತ ನಾಗರ ಹಾವನ್ನು ಕಂಡ ತಾಯಿ ಪ್ರಿಯಾ ಇನ್ನೆನೋ ಕಚ್ಚಲು ಮುಂದಾದಾಗ ಅಷ್ಟರಲ್ಲಿ ಮಗನನ್ನು ಕಾಪಾಡಿದ್ದಾರೆ.
ಇದನ್ನೂ ಓದಿ:ಮನೆ ಪರಿಹಾರ ನೀಡದ ಸರ್ಕಾರ: ಅರ್ಧ ಹಾಕಿಟ್ಟ ಪಂಚಾಂಗದಲ್ಲೇ ಧ್ವಜ ನೆಟ್ಟು ಆಕ್ರೋಶ
ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು, ತಾಯಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
You seem to have an Ad Blocker on.
To continue reading, please turn it off or whitelist Udayavani.