ಜೆಡಿಎಸ್‌ನಲ್ಲಿ ನಿಖಿಲ್ ಬಿಟ್ಟು ಬೇರೆ ಕಾರ್ಯಕರ್ತರಿಲ್ಲವೇ: ಸಂಸದೆ ಸುಮಲತಾ
Team Udayavani, Apr 18, 2022, 3:08 PM IST
ಮದ್ದೂರು: ಜಿಲ್ಲೆಯಲ್ಲಿ ಜೆಡಿಎಸ್‌ಗೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವವರು ಯಾರೂ ನಿಮಗೆ ಕಾಣಿ ಸುತ್ತಿಲ್ಲವೇ, ಅವರನ್ನು ನೋಡಿದರೆ ನನಗೆ ತುಂಬಾ ಅನುಕಂಪ ಬರುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ದಳಪತಿಗಳ ವಿರುದ್ಧ ಕುಟುಕಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಕಣ್ಣಿಗೆ ಕಾಣಿಸುತ್ತಿಲ್ಲವೇ?: ಜೆಡಿಎಸ್ ಕಾರ್ಯ ಕರ್ತರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಪ್ರತಿ ಚುನಾವಣೆಯಲ್ಲೂ ಹಗಲಿರುಳು ಎನ್ನದೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರಲ್ಲಿ ಒಬ್ಬರಾದರೂ ಅರ್ಹ ಅಭ್ಯರ್ಥಿ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಮೊದಲು ಗೆದ್ದು ಬರಲಿ: ತಾವು ಕೊನೆಗಾಲದೊಳಗಾಗಿ ರಾಜ್ಯದಲ್ಲಿ ದಲಿತ ಸಿಎಂ ಮಾಡುವುದಾಗಿ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ದಲಿತ ಸಿಎಂ ಮಾಡುವ ಮೊದಲು ಗೆದ್ದು ಬರಲಿ, ಆ ಮೇಲೆ ಯಾರು ಸಿಎಂ ಆಗ್ತಾರೆ ಎಂಬುದನ್ನು ಕಾದು ನೋಡಣವೆಂದು ಲೇವಡಿ ಮಾಡಿದರು.
ಆತನದ್ದೇ ಅಂತಿಮ ತೀರ್ಮಾನ: ಮುಂದಿನ ದಿನಗಳಲ್ಲಿ ಜನ ಯಾವ ಪಕ್ಷ ಸೇರಬೇಕೆಂಬ ನಿರ್ಧಾರ ಮಾಡುತ್ತಾರೋ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇನೆ. ಕೇಂದ್ರ – ರಾಜ್ಯಮಟ್ಟದ ಕೆಲ ನಾಯಕರು ತಮ್ಮ ಪಕ್ಷಗಳಿಗೆ ಸೇರುವಂತೆ ಆಹ್ವಾನಿಸಿದ್ದಾರೆ. ಆದರೆ, ಅಂತಿಮ ನಿರ್ಧಾರ ತಿಳಿಸಿಲ್ಲ. ಇನ್ನು ತಮ್ಮ ಪುತ್ರ ಅಭಿಷೇಕ್ ಚಿತ್ರರಂಗ ಅಥವಾ ರಾಜಕೀಯ ಕ್ಷೇತ್ರಗಳ ಆಯ್ಕೆ ಕುರಿತು ಆತನದ್ದೇ ಅಂತಿಮ ನಿರ್ಧಾರವೆಂದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆ ನಡೆಸಿದ್ದು ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಹತ್ತು ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮನವಿ ಸಲ್ಲಿಸಿದ್ದೇನೆ. ಅವರೂ, ಸಕಾರಾ ತ್ಮವಾಗಿ ಸ್ಪಂದಿಸಿದ್ದು ಶೀಘ್ರದಲ್ಲೇ ಮೈಸೂರು, ಬೆಂಗ ಳೂರು ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಕೇಂದ್ರ ಸಚಿವ ನಿತಿನ್‌ಗಡ್ಕರಿ ಕ್ರಮವಹಿಸಿದ್ದಾರೆಂದು ತಿಳಿಸಿದರು.
ಮನವಿ: ಇತಿಹಾಸ ಪ್ರಸಿದ್ಧ ಮದ್ದೂರಮ್ಮನ ಜಾತ್ರೆ, ಕೊಂಡೋತ್ಸವ ನೆರವೇರಲಿದೆ. ಹೆದ್ದಾರಿ ಕಾಮಗಾರಿ ನೆಪದಲ್ಲಿ ಅನುಪಯುಕ್ತ ವಸ್ತುಗಳನ್ನು ದೇವಾಲಯದ ಆವರಣದಲ್ಲಿ ಇರಿಸಿದ್ದು ಕೂಡಲೇ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮದ್ದೂರಮ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು.
ದೇವಾಲಯದ ಟ್ರಸ್ಟಿಗಳಾದ ಸೌಭಾಗ್ಯ ಮಹದೇವು, ಶಿವನಂಜು, ಎಂ.ಮಹದೇವಯ್ಯ, ತಮ್ಮಣ್ಣಗೌಡ ಇತರರಿದ್ದರು.
ರಾಜ್ಯದಲ್ಲಿ ಮಾಜಿ ಸಿಎಂ ಆಯೋಜಿಸಿರುವ ಜಲಧಾರೆ ಕಾರ್ಯಕ್ರಮ ಕೇವಲ ಚುನಾವಣೆ ಗಿಮಿಕ್. ತಮ್ಮದೇ ಸರ್ಕಾರವಿದ್ದಾಗ ಜನಪರ ಯೋಜನೆ ಜಾರಿಗೊಳಿಸದೆ ಕೇವಲ ಚುನಾವಣೆ ಸಮಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸರಿಯಲ್ಲ. – ಸುಮಲತಾ, ಸಂಸದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.