ಪುರಸಭೆ: ಗರಿಗೆದರಿದ ರಾಜಕೀಯ ಚಟುವಟಿಕೆ
Team Udayavani, May 4, 2019, 11:56 AM IST
ಮೀಸಲಾತಿ ವಿವಾದ ಬಗೆಹರಿಯುವ ಮುನ್ನವೇ ಚುನಾವಣೆ ಘೋಷಣೆ
ಶ್ರೀರಂಗಪಟ್ಟಣ; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪಟ್ಟಣ, ಪುರಸಭೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಬೆನ್ನಲ್ಲೇ ಮತ್ತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ.
ಶ್ರೀರಂಗಪಟ್ಟಣ ಪುರಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 29ಕ್ಕೆ ಚುನಾವಣೆ ನಿಗದಿಯಾಗಿದೆ. ವಿವಿಧ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿತರು ಈಗಾಗಲೇ ನಾಯಕರ ಬೆನ್ನು ಹತ್ತಿ ಪೈಪೋಟಿ ನಡೆಸಲಾರಂಭಿಸಿದ್ದಾರೆ.
ಶ್ರೀರಂಗಪಟ್ಟಣ ಪುರಸಭೆಗೆ ಕಳೆದ 5 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್-7, ಜೆಡಿಎಸ್-6, ಬಿಜೆಪಿ-3, ಪಕ್ಷೇತರ-6 ಹಾಗೂ ಬಿಎಸ್‌ಆರ್ ಕಾಂಗ್ರೆಸ್-1 ಸ್ಥಾನವನ್ನು ಪಡೆದುಕೊಂಡಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರೊಬ್ಬರು ಇವರೊಂದಿಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ 7 ಸದಸ್ಯರು ಇಬ್ಬರು ಶಾಸಕ ರವೀಂದ್ರ ಪರ ನಿಂತಿದ್ದಾರೆ. ಜೊತೆಗೆ ಬಿಜೆಪಿ ಸದಸ್ಯರೊಬ್ಬರು ಶಾಸಕರ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಮೀಸಲಾತಿ ವಿವಾದ: ಕಳೆದ ಅವಧಿ ಯಲ್ಲಿ ಎರಡೂವರೆ ವರ್ಷ ಮಾತ್ರ ಆಡಳಿತ ನಡೆಸಲಾಗಿದ್ದು, ಇನ್ನು ಉಳಿದ ಅವಧಿ ಅಧ್ಯಕ್ಷ ಹುದ್ದೆಯ ಮೀಸಲಾತಿ ವಿಚಾರ ವಿವಾದದ ಸ್ವರೂಪ ಪಡೆದು ನ್ಯಾಯಾಲಯದ ಮೆಟ್ಟಿಲೇರಿದ್ದು, ಪುರಸಭೆಗೆ ಆಡಳಿತಾಧಿಕಾರಿ ನೇಮಕ ಗೊಂಡಿದ್ದರು. ಆಡಳಿತಾಧಿಕಾರಿ ನೇಮಕ ಗೊಂಡ ನಂತರ ಪುರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಎಲ್ಲವೂ ಕುಂಠಿತಗೊಂಡಿದೆ.
ಪರಿಶಿಷ್ಟರಿಗೆ ಮೀಸಲು: ಕಳೆದ ಆಡಳಿತ ಮಂಡಳಿಯಲ್ಲಿ ಮೊದಲು ಅಧ್ಯಕ್ಷಗಾದಿಗೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಎರಡೂವರೆ ವರ್ಷ ಆಡಳಿತ ಸುಗಮವಾಗಿ ನಡೆದಿತ್ತು. ಇನ್ನುಳಿದ ಎರಡು ವರ್ಷಕ್ಕೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಯನ್ನು ಸರ್ಕಾರ ನಿಗದಿ ಪಡಿಸಿತ್ತು. ಅದರೆ ಮೀಸಲಾತಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಪುರಸಭಾ ಸದಸ್ಯರೊಬ್ಬರು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಅದು ಎರಡೂವರೆ ವರ್ಷ ಕಳೆದರೂ ಮೀಸಲಾತಿಯ ತೀರ್ಮಾನವಾಗದೆ ನನೆಗುದಿಗೆ ಬಿದ್ದಿತ್ತು.
ಮೀಸಲಾತಿ: ಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಅದರ ಮೀಸಲಾತಿಯನ್ನು ಎರಡು ತಿಂಗಳ ಹಿಂದೆಯೇ ಸರ್ಕಾರ ಪ್ರಕಟ ಗೊಳಿಸಲಾಗಿತ್ತು. ಒಂದನೇ ವಾರ್ಡ್ (ಪರಿಶಿಷ್ಟ ಪಂಗಡ), 2ನೇ ವಾರ್ಡ್ (ಹಿಂದು ಳಿದ ವರ್ಗ), 3ನೇ ವಾರ್ಡ್ (ಸಾಮಾನ್ಯ), 4ನೇ ವಾರ್ಡ್ (ಸಾಮಾನ್ಯ ಮಹಿಳೆ), 5ನೇ ವಾರ್ಡ್ (ಸಾಮಾನ್ಯ), 6ನೇ ವಾರ್ಡ್ (ಸಾಮಾನ್ಯ), 7ನೇ ವಾರ್ಡ್ (ಸಾಮಾನ್ಯ ಮಹಿಳೆ), 8ನೇವಾರ್ಡ್ (ಸಾಮಾನ್ಯ ಮಹಿಳೆ), 9ನೇ ವಾರ್ಡ್ (ಹಿಂದುಳಿದ ವರ್ಗ ಮಹಿಳೆ), 10ನೇ ವಾರ್ಡ್ (ಸಾಮಾನ್ಯ), 11ನೇ ವಾರ್ಡ್ (ಸಾಮಾನ್ಯ), 12ನೇ ವಾರ್ಡ್ (ಹಿಂದುಳಿದ ವರ್ಗ), 13ನೇ ವಾರ್ಡ್ (ಹಿಂದುಳಿದ ವರ್ಗ ಮಹಿಳೆ), 14ನೇ ವಾರ್ಡ್(ಹಿಂದುಳಿದ ವರ್ಗ ಮಹಿಳೆ), 15ನೇ ವಾರ್ಡ್ (ಹಿಂದುಳಿದ ವರ್ಗ), 16ನೇ ವಾರ್ಡ್(ಹಿಂದುಳಿದ ವರ್ಗ ಬ. ಮಹಿಳೆ), 18ನೇ ವಾರ್ಡ್(ಪರಿಶಿಷ್ಟ ಜಾತಿ ಮಹಿಳೆ), 19ನೇ ವಾರ್ಡ್ (ಸಾಮಾನ್ಯ ಮಹಿಳೆ), 20ನೇ ವಾರ್ಡ್ (ಹಿಂದುಳಿದ ವರ್ಗ),21ನೇ ವಾರ್ಡ್(ಪರಿಶಿಷ್ಟ ಜಾತಿ), 22ನೇ ವಾರ್ಡ್ (ಸಾಮಾನ್ಯ ಮಹಿಳೆ), 23ನೇ ವಾರ್ಡ್ (ಸಾಮಾನ್ಯ ಮಹಿಳೆ)ಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.
ಮತದಾರರು: ಪುರಸಭೆಯ ವ್ಯಾಪ್ತಿ ಯಲ್ಲಿ ಒಟ್ಟು 19,295 ಮತದಾರರಿ ದ್ದಾರೆ. ಇದರಲ್ಲಿ ಇನ್ನು ಹೊಸ ಮತ ದಾರರ ಸೇರ್ಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.