ಮಾದರಿ ಕ್ಷೇತ್ರ ನಿರ್ಮಿಸುವುದೇ ನನ್ನ ಗುರಿ
5 ಕೋಟಿ ರೂ. ವೆಚ್ಚದ ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್ ಚಾಲನೆ
Team Udayavani, Aug 13, 2019, 4:33 PM IST
•ಜೀಗುಂಡಿ ಪಟ್ಟಣ. ಬಿ. ಹೊಸೂರು, ಬಿ. ಹೊಸೂರು ಕಾಲೋನಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಮಂಡ್ಯ: ನನ್ನ ಅವಧಿಯಲ್ಲಿ ಯಾವುದೇ ಕಳಪೆ ಕಾಮಗಾರಿ ನಡೆಯದಂತೆ ಎಚ್ಚರ ವಹಿಸಲಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಶಾಸಕ ಎಂ. ಶ್ರೀನಿವಾಸ್ ಹೇಳಿದರು.
ವಿಧಾನಸಭಾ ಕ್ಷೆತ್ರದ ಕೆರಗೋಡು ಹೋಬಳಿಯ ಬಿ .ಹೊಸೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಾದ ಜೀಗುಂಡಿ ಪಟ್ಟಣ. ಬಿ. ಹೊಸೂರು, ಬಿ. ಹೊಸೂರು ಕಾಲೋನಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ಜಿಪಂ ಎಂಜಿನಿಯರಿಂಗ್ ಉಪ ವಿಭಾಗ 3,054ರ ಅನುದಾನ 17 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಜೀಗುಂಡಿಪಟ್ಟಣ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, 12ಲಕ್ಷ ರೂ. ವೆಚ್ಚದಲ್ಲಿ ಬಿ ಹೊಸೂರು ಕಾಲೊನಿಯಿಂದ ಚೆಲುವಯ್ಯನ ಗದ್ದೆ ಮುಖಾಂತರ ಎಂ. ಮಾದೇಗೌಡರ ಜಮೀನಿನಿಂದ ಬೊಕ್ಕೆಗೌಡನದೊಡ್ಡಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ, ಬಿ.ಹೊಸೂರು ಗ್ರಾಮದಲ್ಲಿ 30ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಬಿ.ಹೊಸೂರು ಗ್ರಾಮದಲ್ಲಿ ಕೆರಗೋಡು ಶಾಖೆಯ ಕಾವೇರಿ ನೀರಾವರಿ ನಿಗಮ ಅಭಿವೃದ್ಧಿ ವತಿಯಿಂದ 1ನೇ ವಿತರಣಾ ನಾಲೆಯ ರಸ್ತೆ ಅಭಿವೃದ್ಧಿ ಕಾಮಗಾರಿ 90ಲಕ್ಷ ರೂ. 3ನೇ ವಿತರಣಾ ನಾಲೆಯ ರಸ್ತೆ ಅಭಿವೃದ್ಧಿ ಕಾಮಗಾರಿ 99.50ಲಕ್ಷ ರೂ., ವಿತರಣಾ ನಾಲಾ ಅಂಬೆಗಾಲು ಕೃಷ್ಣಪ್ಪ ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿ 99.50ಲಕ್ಷ ರೂ., ಹೊಸ ಮದ್ದೂರು ಶಾಖೆಯ ನಾಲೆಯಡಿ ಬರುವ 12ನೇ ವಿತರಣಾ ನಾಲೆಯಲ್ಲಿ ಬರುವ ಬಿ ಹೊಸೂರು ಮೈನರ್ 2ನೇ ಆಯ್ದ ಸರಪಳಿಯಲ್ಲಿ ಅಭಿವೃದ್ಧಿ ಕಾಮಗಾರಿ 17ಲಕ್ಷ ರೂ., ಹೊಸ ಮದ್ದೂರು ಶಾಖೆಯ ನಾಲೆ ಯಡಿ ಬರುವ 12 ನೇ ವಿತರಣಾ ನಾಲೆಯಲ್ಲಿ ಬರುವ ಬಿ ಹೊಸೂರು ಮೆನರ್‌ನ ಅಭಿವೃದ್ಧಿ ಕಾಮಗಾರಿ 12.72ಲಕ್ಷ ರೂ. ಸೇರಿ ಒಟ್ಟು 5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಇದೇ ವೇಳೆ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಗುಣಮಟ್ಟದಿಂದ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವವರು ತೆರವು ಮಾಡಿ ಸಹಕರಿಸುವಂತೆ ಮನವಿ ಮಾಡಿದರು. ಒತ್ತುವರಿ ತೆರವಿನಿಂದಾಗಿ ರಸ್ತೆ ಮತ್ತಷ್ಟು ಅಗಲಗೊಳಿಸಿ ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಗ್ರಾಮದ ಲ್ಲಿರುವ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆ ಹರಿಯುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.
ಎಲ್ಲದ್ದಕ್ಕೂ ಸರ್ಕಾರವನ್ನೇ ಅವಲಂಭಿಸುವುದನ್ನು ಬಿಟ್ಟು ಸಾರ್ವಜನಿಕರು ನನ್ನೊಡನೆ ಕೈ ಜೋಡಿಸಿದರೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಪಂ ಉಪಾಧ್ಯಕ್ಷೆ ಕವಿತಾ ಜ್ಞಾನಮೂರ್ತಿ, ಸದಸ್ಯ ಬಿ.ಎಲ್.ಬೋರೆಗೌಡ, ಮುಖಂಡ ರಾದ ಎಂ.ಮಾದೇಗೌಡ, ಹೊಳಲು ಯೋಗೇ ಶ್, ನಾಗರಾಜು, ಮಾದೇಗೌಡ, ಮಹೇಶ್, ಚಿಕ್ಕೇಗೌಡ, ಶ್ರೀಧರ್, ಮಂಚೇಗೌಡ, ಪ್ರತಾಪ್, ಕೃಷ್ಣೇಗೌಡ, ಎಂಜಿನಿಯರ್‌ಗಳಾದ ಜ್ಞಾನಮೂರ್ತಿ, ವಾಸುದೇವಮೂರ್ತಿ, ಸಾಗರ್, ಗುತ್ತಿಗೆದಾರರಾದ ರಾಮಚಂದ್ರು, ಶಶಾಂಕ್, ಜಯರಾಮ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಜಿ. ತಿಮ್ಮೇಗೌಡ ಇತರರಿದ್ದರು.
ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲು ತಾಯಿಯೇ ಪ್ರೇರಣೆ: ಡಿ.ಸಿ.ತಮ್ಮಣ್ಣ:
ಸಮೀಪದ ಹಾಗಲಹಳ್ಳಿ ಗ್ರಾಮದಲ್ಲಿ 30-54 ಲಮ್ ಸಮ್ ಯೋಜನೆಯಡಿ 1.25 ಕೋಟಿ ಹಾಗೂ ಮಾದರಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಸಿ.ತಮ್ಮಣ್ಣ ಚಾಲನೆ ನೀಡಿದರು.
ನಂತರ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಹಾಗಲಹಳ್ಳಿಯಲ್ಲಿ ಎಂಜಿಎಂ ರಸ್ತೆ-ಇಗ್ಗಲೂರು ರಸ್ತೆಯಿಂದ ಎಸ್.ಐ.ಹಾಗಲಹಳ್ಳಿ ಮೂಲಕ ಹೆಬ್ಟಾಳ ಸೇರುವ ರಸ್ತೆ ಹಾಗೂ ಮಾದರಹಳ್ಳಿಯಲ್ಲಿ ಎಂಜಿಎಂ ರಸ್ತೆಯಿಂದ ಮಾದರಹಳ್ಳಿ ಮೂಲಕ ಹೆಬ್ಟಾಳ ಚನ್ನಯ್ಯ ನಾಲಾ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮ ಗಾರಿಯನ್ನು ಕೈಗೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿಯ ಜೊತೆಗೆ ಕ್ಷೇತ್ರಕ್ಕೆ ಅಗತ್ಯತೆ ಇರುವ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದೇನೆ ಎಂದರು.
ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಗುಣಮಟ್ಟದ ಕಾಮಗಾರಿ ನಡೆಸಲು ಅರಿವು ಮೂಡಿಸಬೇಕು. ಉದ್ದೇಶಿತ ಕಾಮಗಾರಿಯ ಅಂದಾಜು ವೆಚ್ಚ ಸೇರಿದಂತೆ ತಾಂತ್ರಿಕ ವಿಷಯಗಳನ್ನು ಸ್ಥಳೀಯ ಜನರಿಗೆ ಈ ಮೊದಲೇ ತಿಳಿಸಬೇಕು. ಇದು ಕಾಮಗಾರಿಯ ಗುಣ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಎತ್ತಿನಗಾಡಿ, ಕಿರುವಾಹನಗಳನ್ನು ಓಡಿಸಲಾರದ ಸ್ಥಿತಿಯಲ್ಲಿ ರಸ್ತೆಗಳಿದ್ದವು. ನನ್ನ ಅಧಿಕಾರದ ಅವಧಿಯಿಂದಲೂ ಸರ್ಕಾರದ ಗಮನ ಸೆಳೆದು ಗ್ರಾಮೀಣ ಪ್ರದೇಶದ ಗದ್ದೆ ಬಯಲಿನ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿರುವುದಾಗಿ ವಿವರಿಸಿದರು.
ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು
ಇದೇ ವೇಳೆ ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಪ್ರಕಾಶ್, ರಾಜಗಿರಿ, ಜೋಗಪ್ಪ, ಪುಟ್ಟಲಿಂಗೇಗೌಡ, ಶಿವಶಂಕರ್, ಮಾದರಹಳ್ಳಿ ಯೋಗೇಶ್, ಉಮೇಶ್, ಕೃಷ್ಣ, ದೇವಿರಮ್ಮ, ಕೆ.ಟಿ.ಸುರೇಶ್ ಸೇರಿದಂತೆ ಇತರರಿದ್ದರು.
ನಾನು ಶಿಕ್ಷಣ ಕ್ಷೇತ್ತಕ್ಕೆ ಹೆಚ್ಚು ಒತ್ತು ನೀಡಬೇಕಾದರೆ ನಮ್ಮ ತಾಯಿಯೇ ಪ್ರೇರಣೆ ಎಂದು ಮಾಜಿ ಸಚಿವ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ವತಿಯಿಂದ ಸಮೀಪದ ಗುರುದೇವರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಯ ಶಂಕುಸ್ಥಾಪನಾ ಸಮಾರಂಭಕ್ಕೆ ಗುದ್ದಲಿಪೂಜೆ ನೆರ ವೇರಿಸಿ ಮಾತನಾಡಿದರು.
ನಮ್ಮ ತಾಯಿ ಇದ್ದಾಗ ನಮ್ಮ ತಂದೆಯವರಿಗೆ ನನಗೆ ಸ್ಮಾರಕ ಮಾಡುವ ಬದಲು ನನ್ನ ಹೆಸರಿನಲ್ಲಿ ಒಂದು ಶಾಲಾ ಕೊಠಡಿಯನ್ನು ನಿರ್ಮಿಸಿ ಎಂದು ಕೇಳಿಕೊಂಡಿದ್ದರು. ಇದರಿಂದ ಎಚ್ಚೆತ್ತುಕೊಂಡ ನಾನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲು ಮುಂದಾದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಒಬ್ಬ ಹೆಣ್ಣು ಮಗಳು ವಿದ್ಯಾವಂತೆಯಾದರೆ ಕುಟುಂಬವೇ ವಿದ್ಯಾವಂತರಾಗುತ್ತಾರೆ ಎಂಬುದು ನಮ್ಮ ತಾಯಿಯ ಉದ್ದೇಶವಾಗಿತ್ತು. ಹಾಗಾಗಿ ನನ್ನ ಅಧಿಕಾರದ ಅವಧಿಗಳಲ್ಲಿ 12 ಪ್ರೌಢಶಾಲೆ, 6 ಪದವಿ ಪೂರ್ವ ಕಾಲೇಜು, 2 ಪದವಿ ಕಾಲೇಜು, 2 ಐಟಿಐ ಕಾಲೇಜು, 1 ಸ್ನಾತ್ತಕೋತ್ತರ ಕೇಂದ್ರ, 6 ಮೊರಾರ್ಜಿ ಶಾಲೆ ತೆರೆಯಲು ಮುಂದಾದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಓದಿದ ವ್ಯಕ್ತಿಗಳೇ ಇಂದು ದೊಡ್ಡದೊಡ್ಡ ವ್ಯಕ್ತಿಗಳಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಕಿಳರಿಮೆಯಿಂದ ಕಾಣದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವ ಮೂಲಕ ತಮ್ಮ ಗ್ರಾಮದ ಶಾಲೆಗಳನ್ನು ಉಳಿಸಿಕೊಳ್ಳಲು ಮುಂದಾಗಿ ಎಂದು ತಿಳಿಸಿದರು.
ಭಾರತ್ ಪೆಟ್ರೋಲಿಯಂನ ಸೀನಿಯರ್ ಜನರಲ್ ಮ್ಯಾನೇಜರ್ ಶಂಕರ್‌ಕರ್ಜಿಗಿ ಮಾತನಾಡಿ, ಈ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳ ಅಭಿವೃದ್ಧಿಗೆ ಶಾಸಕ ಡಿ.ಸಿ.ತಮ್ಮಣ್ಣನವರ ಮುತುವರ್ಜಿಯೇ ಕಾರಣ. ಇಂತಹ ಶಾಸಕರನ್ನು ಕ್ಷೇತ್ರದಲ್ಲಿ ಆಯ್ಕೆಗೊಳಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು. ಭಾರತ್ ಪೆಟ್ರೋಲಿಯಂನ ಅಧಿಕಾರಿ ನಿರಾಸಿಂಗ್, ಬಿಇಒ ರೇಣುಕಮ್ಮ, ಎಂಜಿನಿಯರ್ ನಾಗಣ್ಣ, ಸೇಟು ಸಿದ್ದೇಗೌಡ, ಅರವಿಂದ್, ಮುಖ್ಯಶಿಕ್ಷಕಿ ಪುಟ್ಟಲಕ್ಷ್ಮಮ್ಮ, ಮಲ್ಲರಾಜು ಅರಸು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.