ನನ್ನ ಮಗ ನಿಖೀಲ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ
ನಯವಂಚಕ ನಾರಾಯಣಗೌಡನಿಗೆ ತಕ್ಕ ಪಾಠ ಕಲಿಸಿ: ಮಾಜಿ ಸಿಎಂ ಕುಮಾರಸ್ವಾಮಿ ಮನವಿ
Team Udayavani, Aug 4, 2019, 3:11 PM IST
ಕೆ.ಆರ್.ಪೇಟೆ: ನಾನು ಮೋಜು ಮಾಡಲು ಮುಖ್ಯಮಂತ್ರಿಯಾಗಿರಲಿಲ್ಲ, ಒಬ್ಬ ಮುಖ್ಯ ಮಂತ್ರಿಯಾಗಿ ನೊಂದ ಜನರ ಕಣ್ಣೀರನ್ನು ಒರೆಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ, ನಾನೆಂದೂ ಹಣ ಆಸ್ತಿಯನ್ನು ಬಯಸಿದವನಲ್ಲ, ನೊಂದ ಜನರು ಮಾಡುವ ಆಶೀವಾದದ ಬಲವೇ ನನ್ನ ಧೀಶಕ್ತಿಯಾಗಿದೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ಯಶಸ್ವಿನಿ ಸಮೂದಾಯ ಭವನದಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಶಾಸಕ ನಾರಾಯಣಗೌಡ ಅವರ ವಿಶ್ವಾಸದ್ರೋಹ ಹಾಗೂ ತಮ್ಮ ಸಹೋದರಿ ಅನುಸೂಯ ಮಂಜುನಾಥ್ ಅವರ ಬಗ್ಗೆ ಮಾಡಿರುವ ಸುಳ್ಳು ಆರೋಪಗಳಿಂದ ನೊಂದು ಕಾರ್ಯಕರ್ತರ ಎದುರು ಕಣ್ಣೀರು ಹಾಕಿದರು.
ಶಾಸಕ ನಾರಾಯಣಗೌಡ ಒಬ್ಬ ವಿಶ್ವಾಸಘಾತುಕ ಇಡೀ ಕುಟುಂಬವನ್ನು ಎದುರು ಹಾಕಿಕೊಂಡು ಈ ಭಾರಿ ಅವನಿಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದೆ, ಇಂತಹ ನಯವಂಚನೆ ಹಾಗೂ ಮೋಸ ನನಗೆ ಆಗಬೇಕು. ನನ್ನ ವಿರುದ್ಧ ನಿರಂತರವಾಗಿ ಸಮರವನ್ನು ಸಾರುತ್ತಿರುವ ಮಾಧ್ಯಮಗಳ ಮುಂದೆ ನಾನು ಮಾತನಾಡುವುದನ್ನೇ ನಿಲ್ಲಿಸಿದ್ದೇನೆ. ಈಗಾಗಲೇ ನನ್ನ ಕುಟುಂಬವನ್ನು ನಿರಂತರವಾಗಿ ಹರಾಜು ಹಾಕಿರುವ ಮಾಧ್ಯಮಗಳಲ್ಲಿ ಮನವಿ ಮಡುತ್ತೇನೆ, ದಯಮಾಡಿ ನನ್ನ ಮಗ ಸೇರಿದಂತೆ ನನ್ನ ಕುಟುಂಬದವರ ವಿರುದ್ಧ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಬಿತ್ತರಿಸಬೇಡಿ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಯಾವುದೇ ಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಮಗನಾಗಲೀ ಕುಟುಂಬದ ಸದಸ್ಯರಾಗಲೀ ಸ್ಪರ್ಧೆ ಮಾಡಲ್ಲ. ಸ್ಥಳೀಯವಾಗಿಯೇ ಪ್ರಬಲವಾದ ಅಭ್ಯರ್ಥಿಯನ್ನು ಹುಡುಕಿ ಹುರಿಯಾಳನ್ನಾಗಿ ಮಾಡುತ್ತೇನೆ. ದಯಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗನಿಗೆ ಸೋಲಿನ ವಿಷ ನೀಡಿದಂತೆ ಇಲ್ಲಿನ ಅಭ್ಯರ್ಥಿಯನ್ನು ಸೋಲಿಸಬೇಡಿ, ಹಣಕ್ಕಾಗಿ ಮಾರಾಟವಾಗಿ ನನ್ನ ಸಹೋದರಿ ಮತ್ತು ಕುಟುಂಬದವರ ಮೇಲೆ ಆರೋಪ ಮಾಡಿರುವ ನಯವಂಚಕ ನಾರಾಯಣಗೌಡನಿಗೆ ತಕ್ಕ ಪಾಠವನ್ನು ಕಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ವಿಷಕಂಠನಾಗಿದ್ದೇನೆ: ನಾನು ನನ್ನ ಕುಟುಂಬವನ್ನು ಉದ್ಧಾರ ಮಾಡಿಕೊಳ್ಳಲು ರಾಜಕಾರಣ ಮಾಡುತ್ತಿಲ್ಲ, ನನಗೆ ರಾಜಕಾರಣವೂ ಬೇಕಾಗಿಲ್ಲ, ಬಡವರು, ನೊಂದವರು ಅಸಹಾಯಕರಿಗೆ ಸಹಾಯ ಮಾಡಲು, ನ್ಯಾಯವನ್ನು ದೊರಕಿಸಿಕೊಡಲು ರಾಜಕಾರಣ ಮಾಡುತ್ತಿದ್ದೇನೆ. ನನಗೆ ಎದುರಾಗುವ ಎಲ್ಲಾ ನೋವುಗಳನ್ನು ನುಂಗಿಕೊಂಡು ವಿಷಕಂಠನಾಗಿದ್ದೇನೆ.
ಕುಮಾರಸ್ವಾಮಿ ಭವಿಷ್ಯ: ನಾನು ಇಸ್ರೇಲ್ ಅಧ್ಯಯನ ಪ್ರವಾಸ ಕೈಗೊಂಡಾಗಲೇ ಸಾವಿಗೆ ಶರಣಾಗಬೇಕಿತ್ತು, ಆದರೆ ದೇವರ ಕೃಪೆಯಿಂದ, ಹೃದ್ರೋಗತಜ್ಞ ನನ್ನ ಭಾವ ಮಂಜುನಾಥ ಅವರ ಚಿಕಿತ್ಸೆಯಿಂದಾಗಿ ನಾನು ಈವರೆಗೂ ಬದುಕಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ ಕುಮಾರಸಾಮಿ ಈ ಸರ್ಕಾರ ಎಷ್ಟು ದಿನ ನಡೆಯುತ್ತದೆಯೋ ನಾನು ನೋಡ್ತೀನಿ, 17ಜನ ಅನರ್ಹ ಶಾಸಕರು ಯಡಿಯೂರಪ್ಪ ಅವರನ್ನು ಕಿತ್ತುಕೊಂಡು ತಿಂತಾರೆ, ಮಂತ್ರಿಮಂಡಲ ಮಾಡುವುದರಲ್ಲೇ ಅಸಮಾಧಾನ ನ್ಪೋಟವಾಗ್ತದೆ, ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕಥೆ ಮುಗಿಯುತ್ತದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಮಾಧ್ಯಮದವರಿಗೆ ಮನವಿ: ನನ್ನ ಮಗ ನಿಖೀಲ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಲು ನಾನು ರಾಜಕಾರಣ ಮಾಡ್ತಿದ್ದೇನೆ, ಇಷ್ಟು ಸಾಕು, ಮಾಧ್ಯಮಗಳ ನಿರಂತರವಾದ ಅಪಪ್ರಚಾರದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಸೋತಿದ್ದಾನೆ. ದಯಮಾಡಿ ಮಾಧ್ಯಮಗಳು ನನ್ನ ಕುಟುಂಬದ ವಿರುದ್ಧ ಮಾಡುತ್ತಿರುವ ಅಪಪ್ರಚಾರ, ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು. ಮಾಜಿಸಚಿವ .ಪುಟ್ಟರಾಜು, ಸಾರಾ ಮಹೇಶ್, ಶಾಸಕ ಸುರೇಶ್‌ಗೌಡ, ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್ ಕೃಷ್ಣೇಗೌಡ, ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.