110 ಕೋಟಿ ಸಾಲ; ಕೊಟ್ಟಿದ್ದು 50 ಕೋಟಿ


Team Udayavani, Mar 7, 2022, 3:38 PM IST

110 ಕೋಟಿ ಸಾಲ; ಕೊಟ್ಟಿದ್ದು 50 ಕೋಟಿ

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಪ್ರಸ್ತುತ ಸಾಲಿನಲ್ಲಿಯೇ ಪುನಾರಂಭಿಸುವಬಗ್ಗೆ ಭರವಸೆ ಜತೆಗೆ ಬಜೆಟ್‌ನಲ್ಲಿ 50 ಕೋಟಿ ರೂ.ಮೀಸಲಿರಿಸಲಾಗಿದೆ. ಆದರೆ ಕಾರ್ಖಾನೆಯಲ್ಲಿನಸಮಸ್ಯೆಗಳು ನೂರಾರಿದ್ದು, ಘೋಷಣೆಯ ಹಣಯಾವುದಕ್ಕೂ ಸಾಲದಾಗಿದ್ದು, ಆನೆ ಹೊಟ್ಟೆಗೆ ಅರೆಕಾಸಿನಮಜ್ಜಿಗೆ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ 2019-20ರಿಂದ ಸ್ಥಗಿತಗೊಂಡಿರುವ ಮೈಷುಗರ್‌ ಕಾರ್ಖಾನೆ ಪುನಶ್ಚೇತನಗೊಳಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ಎರಡು ವರ್ಷ ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿಗಾಗಿ 50 ಕೋಟಿ ರೂ. ಒದಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳ ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಆದರೆ, ದುಡಿಯುವ ಬಂಡವಾಳ ಕೊರತೆಯಿಂದಲೇ ಈಗಾಗಲೇ ಕಾರ್ಖಾನೆಕೋಟ್ಯಂತರ ರೂ. ಸಾಲದಲ್ಲಿದ್ದು, ಅದರ ಬಡ್ಡಿಯೇ ಕೋಟ್ಯಂತರ ರೂ.ಗೆ ಏರಿಕೆಯಾಗಿದೆ.

ವ್ಯವಸ್ಥೆ ಹೇಗೆ?: ಬಜೆಟ್‌ನಲ್ಲಿ ಕಾರ್ಖಾನೆಗೆ ಬೇಕಾದದುಡಿಯುವ ಬಂಡವಾಳ ವ್ಯವಸ್ಥೆಯನ್ನು ಹಣಕಾಸುಸಂಸ್ಥೆಗಳಿಂದ ಒದಗಿಸಲಾಗು ವುದು ಎಂದು ಸಿಎಂ ತಿಳಿಸಿದ್ದಾರೆ. ಆದರೆ, ಯಾವ ರೀತಿ ಎಂಬುದು ಸ್ಪಷ್ಟವಾಗಿಲ್ಲ. ಸಾವಿರಾರು ಕೋಟಿ ರೂ. ಕಾರ್ಖಾ ನೆ ಆಸ್ತಿ ಇದ್ದು,ಇದರ ಆಧಾರದ ಮೇಲೆ ದುಡಿ ಯುವ ಬಂಡವಾಳ ಒದಗಿಸಲಿದ್ದಾರೆಯೇ ಅಥವಾ ಹಣಕಾಸು ಸಂಸ್ಥೆಗಳಿಂದಒದಗಿಸಲಿದ್ದಾರೆ ಎಂಬುದು ಸ್ಪಷ್ಟವಾಗಬೇಕಿದೆ.

ಕಾರ್ಖಾನೆಗೆ ಸಿಗುವ ಹಣವೆಷ್ಟು?: ಕಾರ್ಖಾನೆಯ ಯಂತ್ರಗಳ ದುರಸ್ತಿಗೆ ಪ್ರಸ್ತುತ ಬಜೆಟ್‌ನಲ್ಲಿ 50 ಕೋಟಿ ರೂ. ಘೋಷಣೆಯಾಗಿದೆ. ಆದರೆ ಆ ಯಾವಾಗಬಿಡುಗಡೆಯಾಗಲಿದೆ. ಬಿಡುಗಡೆಯಾದರೂ ಸಾಲದಬಡ್ಡಿ ಕಳೆದು ಕಾರ್ಖಾನೆಗೆ ಎಷ್ಟು ಸಿಗಲಿದೆ ಎಂಬ ಚರ್ಚೆನಡೆಯುತ್ತಿವೆ. ಸರ್ಕಾರ ಹಣ ಬಿಡುಗಡೆ ಮಾಡಿದಾಗಲೂ ಒಂದಷ್ಟು ಹಣ ಬಾಕಿ ಹಾಗೂ ಸಾಲದ ಬಡ್ಡಿಗೆಕಡಿತವಾಗಲಿದೆ ಎಂಬುದು ಗಮನಾರ್ಹವಾಗಿದೆ.

ಬಿಡಿ ಯಂತ್ರಗಳಲ್ಲಿ ಭ್ರಷ್ಟಾಚಾರ: ಯಂತ್ರಗಳ ದುರಸ್ತಿಗೆ ಅಗತ್ಯವಾಗಿ ಗುಣಮಟ್ಟದ ಬಿಡಿ ಭಾಗಗಳ ಅವಶ್ಯಕತೆ ಇದೆ. ಆದರೆ ಇದುವರೆಗೂ ಬಿಡಿ ಭಾಗ ಸರಬರಾಜಿನಲ್ಲೂಭ್ರಷ್ಟಾಚಾರ ನಡೆದಿದೆ ಎನ್ನಲಾಗುತ್ತಿದೆ. 2018-19ರಲ್ಲೂಬಿಡಿ ಭಾಗಗಳ ಅಳವಡಿಸಿ ಕಾರ್ಖಾನೆ ಆರಂಭಿಸಿದಕೆಲವೇ ದಿನಗಳಲ್ಲಿ ಮತ್ತೆ ದುರಸ್ತಿಗೆ ಬಂದಿತ್ತು. ಇದರಿಂದಸುಮಾರು 15 ದಿನ ಕಾರ್ಖಾನೆ ಸ್ಥಗಿತಗೊಂಡಿತ್ತು. ಆವರ್ಷ ಸಮರ್ಪಕವಾಗಿ ಕಬ್ಬು ಅರೆಯಲು ಸಾಧ್ಯವಾಗಲೇ ಇಲ್ಲ. ಕಳಪೆ ಗುಣಮಟ್ಟದ ಬಿಡಿ ಭಾಗಗಳಅಳವಡಿಸಿದ್ದರಿಂದ ಕಾರ್ಖಾನೆ ಆಗಾಗ್ಗೆ ಕೈಕೊಡುತ್ತಿತ್ತು.

ದುರಸ್ತಿ ಆಗಬೇಕಾಗಿರುವ ಯಂತ್ರಗಳು: ಕಾರ್ಖಾನೆ ಕಬ್ಬು ನುರಿಸುವ ಯಂತ್ರದ ಸಾಮರ್ಥ್ಯವನ್ನು 3ಸಾವಿರದಿಂದ 5 ಸಾವಿರ ಟಿಸಿಡಿಗೆ ಹೆಚ್ಚಿಸಬೇಕಿದೆ.ಅದಕ್ಕಾಗಿ ಕೋಟ್ಯಂತರ ರೂ. ಹಣ ವ್ಯಯಿಸಬೇಕಾಗಿದೆ.ಜತೆಗೆ 4.4 ಕೋಟಿ ರೂ. ವೆಚ್ಚದಲ್ಲಿ ಬಾಯ್ಲಿಂಗ್‌ ಹೌಸ್‌ರಿಪೇರಿ ಮಾಡಬೇಕು. ಗುಣಮಟ್ಟದ ನೀರು ಪೂರೈಸಲುಕ್ರಮ ವಹಿಸಬೇಕಾಗಿದೆ. ಸುಮಾರು ಅದಕ್ಕಾಗಿಯೇ 26ಲಕ್ಷ ರೂ. ಖರ್ಚಾಗಲಿದೆ. ನಿಂತಿರುವ 30 ಮೆಗಾವ್ಯಾಟ್‌ ವಿದ್ಯುತ್‌ ತಯಾರಿಸುವ ಸಹ ವಿದ್ಯುತ್‌ ಘಟಕ, 2ಬಗಾಸೆ ಡ್ರಮ್‌ ಎಕ್ಸ್‌ಪ್ರೆಸ್‌ ಟ್ರ್ಯಾಕ್ಟರ್‌ಗಳಬದಲಾವಣೆಗಾಗಿ 12 ಲಕ್ಷ ರೂ.ವೆಚ್ಚವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪುನಾರಂಭಕ್ಕೆ ಬೇಕು ನೂರಾರು ಕೋಟಿ: ಪ್ರಸ್ತುತ ಕಾರ್ಖಾನೆ ಆರಂಭಿಸಲು ಸುಮಾರು 183 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಕಬ್ಬಿನ ಖರೀದಿ, ಸಾರಿಗೆ,ಕಟಾವಿಗೆ 174 ಕೋಟಿ ರೂ., ಹೆಚ್ಚುವರಿ ಇಂಧನ 2ಕೋಟಿ ರೂ., ಬಂಡವಾಳ ಸಾಮಗ್ರಿ 1.50 ಕೋಟಿ ರೂ.,ವೇತನಕ್ಕಾಗಿಯೇ 6 ಕೋಟಿ ರೂ. ಖರ್ಚಾಗಲಿದೆಎಂದು ವರದಿಯಲ್ಲಿ ಉಲ್ಲೇಖೀಸಿದ್ದು, ಒಟ್ಟಾರೆಕಾರ್ಖಾನೆ ಆರಂಭಕ್ಕೆ 257 ಕೋಟಿ ರೂ. ಬಿಡುಗಡೆಗೆಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ 50ಕೋಟಿ ರೂ. ಮಾತ್ರ ಘೋಷಣೆಯಾಗಿದೆ. ಉಳಿದದುಡಿಯುವ ಬಂಡವಾಳವನ್ನು ಸರ್ಕಾರವೇ ಒದಗಿಸುವ ಅನಿವಾರ್ಯತೆ ಇದೆ.

ಪ್ರಸ್ತುತ ವರ್ಷ ಕಾರ್ಖಾನೆ ಆರಂಭ? :

ಎರಡು ವರ್ಷ ಪ್ರಾಯೋಗಿಕವಾಗಿ ಎಂದು ಹೇಳಿರುವ ಸರ್ಕಾರ ಯಂತ್ರಗಳ ದುರಸ್ತಿಗೆ ಮಾತ್ರ 50ಕೋಟಿ ರೂ. ಘೋಷಣೆ ಮಾಡಿದೆ. ಜೂನ್‌ನಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಬೇಕಾದರೆ ಈಗಿನಿಂದಲೇ ಎಲ್ಲಾ ಸಿದ್ಧತೆ ಪ್ರಾರಂಭವಾಗಬೇಕು. ಆದರೆ, ಸರ್ಕಾರ ಕಾರ್ಖಾನೆ ಆರಂಭಿಸುವ ಭರವಸೆಕೊಟ್ಟು 4 ತಿಂಗಳು ಕಳೆಯುತ್ತಿದ್ದರೂ ಯಾವುದೇ ಚಟುವಟಿಕೆ ಆರಂಭವಾಗಿಲ್ಲ. ತಜ್ಞರ ಸಮಿತಿಯೂಭೇಟಿ ಕೊಟ್ಟಿಲ್ಲ. ಅಲ್ಲದೆ, ದುಡಿಯುವ ಬಂಡವಾಳ ಎಷ್ಟು ಬೇಕು ಎಂಬ ವರದಿ ಅಂತಿಮವಾಗಿಲ್ಲ. ಈಗಿರುವಾಗ ಈ ವರ್ಷವೂ ಆರಂಭವಾಗುವುದು ಅನುಮಾನ ಎಂಬ ಮಾತು ಕೇಳಿ ಬರುತ್ತಿವೆ.

ವರದಿ ಬಳಿಕ ಹಣ ಬಿಡುಗಡೆ :  ಮಾ.7 ಮತ್ತು 8ರಂದು ತಜ್ಞರ ಸಮಿತಿ ಮೈಷುಗರ್‌ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಲಿದೆ. ಎರಡು ದಿನಗಳ ಕಾಲ ಕಾರ್ಖಾನೆಆರಂಭಕ್ಕೆ ಎಷ್ಟು ಕೋಟಿರೂ. ಅನುದಾನ ಬೇಕುಎಂಬುದರ ಬಗ್ಗೆ ವರದಿನೀಡಲಿದೆ. ಅದರ ಆಧಾರದಮೇಲೆ ಮುಖ್ಯಮಂತ್ರಿಗಳುಹಣ ಬಿಡುಗಡೆ ಮಾಡುವಭರವಸೆ ನೀಡಿದ್ದಾರೆ. 50 ಕೋಟಿ ರೂ. ಯಂತ್ರಗಳದುರಸ್ತಿಗೆ ಮಾತ್ರ ನೀಡಲಾಗುತ್ತಿದ್ದು, ವರದಿ ನಂತರಹಣ ಬಿಡುಗಡೆ ಮಾಡುವ ಭರವಸೆ ಇದೆ ಎಂದುಮೈಷುಗರ್‌ ಕಾರ್ಖಾನೆ ಅಧ್ಯಕ್ಷರಾದ ಶಿವಲಿಂಗೇಗೌಡ ತಿಳಿಸಿದರು.

110 ಕೋಟಿ ರೂ. ಸಾಲ :

ನೌಕರರ ಬಾಕಿ ವೇತನ, ತೆರಿಗೆ ಸೇರಿ ವಿವಿಧ ಬಾಕಿ ಮೊತ್ತವೇ 110.09 ಕೋಟಿ ರೂ. ಇದೆ ಎಂದುಅಧಿಕಾರಿಗಳೇ ವರದಿ ನೀಡಿದ್ದಾರೆ. ವಿದ್ಯುತ್‌ ಬಿಲ್‌ಬಾಕಿಯೇ 25.04 ಕೋಟಿ ರೂ., 1997-98ನೇಸಾಲಿನ ಸಾರಾಯಿ ಮಾರಾಟದ ಮೇಲಿನ ಟಿಸಿಎಸ್‌ಬಾಕಿ 37 ಕೋಟಿ ರೂ., ಕರ್ನಾಟಕ ಆಹಾರ ನಿಗಮದಬಾಕಿ 19.44 ಕೋಟಿ ರೂ., ಸರಬರಾಜುದಾರರಹಾಗೂ ಗುತ್ತಿಗೆದಾರರ ಬಾಕಿ 9.57 ಕೋಟಿ ರೂ.,2013-14ನೇ ಸಾಲಿನಿಂದ 2018-19ನೇ ಸಾಲಿನ ಅವಧಿ ವರೆಗೂ ಕಬ್ಬು ಖರೀದಿ ತೆರಿಗೆ 1.77 ಕೋಟಿ ರೂ., ಆಸ್ತಿ ತೆರಿಗೆ 1.60 ಕೋಟಿ ರೂ., ಕೆಎಸ್‌ಐಐಡಿಸಿಸಾಲದ ಬಾಕಿ 3.37 ಕೋಟಿ ರೂ. ಇದೆ. ಇದು ಪ್ರಸ್ತುತ ವರ್ಷಕ್ಕೆ ದುಪ್ಪಟ್ಟಾಗಿದ್ದು, ಬಡ್ಡಿಯೂ ಏರಿಕೆಯಾಗಿದೆ ಎನ್ನಲಾಗುತ್ತಿದೆ.

-ಎಚ್‌.ಶಿವರಾಜು

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.