ಮೈಷುಗರ್ ಕಾರ್ಖಾನೆ ಆರಂಭ: ಸವಾಲು ನೂರಾರು
Team Udayavani, Mar 9, 2022, 1:14 PM IST
ಮಂಡ್ಯ: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಮೈಷುಗರ್ ಕಾರ್ಖಾನೆ ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಿದ್ದು,ಅದರಂತೆ 50 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಆದರೆ ಆರಂಭಕ್ಕೆ ನೂರಾರು ಸವಾಲುಎದುರಾಗಿದೆ.
ರೋಗಗ್ರಸ್ಥ ಹಣೆಪಟ್ಟಿಯಿಂದ ಕಳಚಲು ಹೋರಾಟಗಾರರ ಪಟ್ಟ ಶ್ರಮ ಕೈಗೂಡುವ ನಿರೀಕ್ಷೆ ಗರಿಗೆದರಿವೆ. ಸೋಮವಾರದಿಂದ ನಡೆಯುತ್ತಿರುವತಜ್ಞರ ಪರಿಶೀಲನೆಯಿಂದ ಆಶಾಭಾವನೆ ಹೆಚ್ಚಾಗಿದೆ.ಅಲ್ಲದೆ, ತಜ್ಞರ ವರದಿ ನಿರೀಕ್ಷೆ ಕುತೂಹಲವೂ ಕೆರಳಿದೆ.ಆದರೆ ಕಾರ್ಖಾನೆ ಪರಿಸ್ಥಿತಿ ಗಮನಿಸಿದರೆ ಯಂತ್ರಗಳನ್ನುಸುಸ್ಥಿತಿಯಲ್ಲಿಡಲು ಶ್ರಮ ಹಾಕಬೇಕಾಗಿದೆ.
ಬಾಯ್ಲರ್ ಹೌಸ್: ಯಂತ್ರ ಸುಲಭವಾಗಿ ಚಾಲನೆಗೊಳ್ಳಲು ಬಾಯ್ಲರ್ ಪ್ರಮುಖ ಪಾತ್ರವಹಿಸುತ್ತದೆ. ಹಬೆ ನೀಡುವ ಮೂಲಕ ಯಂತ್ರಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಇದನ್ನು ಮರು ಆಯಿಲಿಂಗ್ ಮಾಡಿ ಯಂತ್ರವನ್ನು ಸುಸ್ಥಿತಿಯಲ್ಲಿಡಬೇಕಾಗಿದೆ.
ಕೋ-ಜನ್ ಘಟಕ ದುರಸ್ತಿ: ಇಡೀ ಕಾರ್ಖಾನೆಗೆ ವಿದ್ಯುತ್ ಪೂರೈಕೆಮಾಡುವ ಸಹ ವಿದ್ಯುತ್ ಘಟಕದಲ್ಲಿವಿದ್ಯುತ್ ಉತ್ಪಾದನೆ ಮಾಡಬೇಕಾಗಿದೆ. ಇದು ಕೆಟ್ಟುನಿಂತು ಹಲವು ವರ್ಷಗಳೇ ಕಳೆದಿವೆ. 30 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕೋ-ಜನ್ ಘಟಕ ವಿದ್ಯುತ್ ಉತ್ಪಾದನೆ ಇಲ್ಲದಂತಾಗಿದೆ. ಇದರಿಂದ ಸೆಸ್ಕ್ ನಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಇದರ ಬಿಲ್ 25ಕೋಟಿ ರೂ.ಗಿಂತ ಹೆಚ್ಚಾಗಿದೆ. ಇದರಿಂದಆಗಾಗ್ಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಕಾರ್ಖಾನೆ ಕತ್ತಲಲ್ಲಿ ಕಳೆಯುವಂತಾಗಿದೆ. ಇದರ ದುರಸ್ತಿ ಅಗತ್ಯವಾಗಿದೆ.
ಶುದ್ಧ ನೀರು ಪೂರೈಕೆ ಅಗತ್ಯ: ಉತ್ತಮ ಗುಣಮಟ್ಟದ ಸಕ್ಕರೆ ಉತ್ಪಾದನೆಗೆ ಗುಣಮಟ್ಟದ ನೀರು ಪೂರೈಕೆ ಅಗತ್ಯ. ಇದುವರೆಗೂ ಕೋಡಿಹಳ್ಳಿ ಕೆರೆಯಿಂದಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಲುಷಿತನೀರು ಬರುತ್ತಿದ್ದರಿಂದ ಸಕ್ಕರೆ ಉತ್ಪಾದನೆ ಹಾಗೂ ಕಬ್ಬಿನರಸ ತೆಗೆಯಲು ತೊಂದರೆಯಾಗಿತ್ತು. ಆದ್ದರಿಂದ ಶುದ್ಧ ನೀರು ಪೂರೈಸಬೇಕಾಗಿದೆ.
ಡಿಸ್ಟಿಲರಿ ಘಟಕ: ಕಾರ್ಖಾನೆ ಉತ್ತಮ ಸ್ಥಿತಿಯಲ್ಲಿದ್ದಾಗ ಡಿಸ್ಟಿಲರಿ ಹೆಚ್ಚು ಉತ್ಪಾದಿಸಲಾಗುತ್ತಿತ್ತು. ಇಲ್ಲಿನ ಸ್ಪಿರಿಟ್ ಅನ್ನು ಸೇನೆಗೂ ರವಾನಿಸಲಾಗುತ್ತಿತ್ತು. ಇದರಿಂದಕಾರ್ಖಾನೆಗೆ ಸಾಕಷ್ಟು ಆದಾಯ ತಂದು ಕೊಡುತ್ತಿತ್ತು.ವರ್ಷ ಕಳೆದಂತೆ ಡಿಸ್ಟಿಲರಿ ಘಟಕವೂ ನಿಂತಿತ್ತು.ಇದರಿಂದ ಸ್ಪಿರಿಟ್ ತಯಾರಿಕೆ ನಿಂತಿತ್ತು. ಕಳೆದ2017ರಲ್ಲಿ ಸಾಕಷ್ಟು ಪ್ರಮಾಣದ ಸ್ಪಿರಿಟ್ ಅನ್ನುಮೋರಿಗೆ ಬಿಡಲಾಗಿತ್ತು. ಜತೆಗೆ ಕಬ್ಬಿನ ರಸವೂ ಸಾಕಷ್ಟುವ್ಯರ್ಥವಾಗಿತ್ತು. ಕಾರ್ಖಾನೆಗೆ ಆದಾಯ ಹೆಚ್ಚಾಗಲು ಡಿಸ್ಟಿಲರಿ ಘಟಕ ದುರಸ್ತಿ ಅಗತ್ಯವಾಗಿದೆ.
ದುರಸ್ತಿಗಾಗಿ ಕಾಯುತ್ತಿರುವ ಯಂತ್ರಗಳು :
ಕಬ್ಬು ಅರೆಯುವ ಎರಡು ಮಿಲ್‌ಗಳಿದ್ದು, ಒಂದು ಮಿಲ್ ಉತ್ತಮವಾಗಿದೆ. ಆದರೆ ಅದನ್ನು ಚಾಲನೆ ಮಾಡದೆ ಇರುವುದರಿಂದ ತುಕ್ಕು ಹಿಡಿಯುತ್ತಿದೆ.ಮತ್ತೂಂದು ಮಿಲ್ ಕೆಟ್ಟು 4 ವರ್ಷಗಳೇ ಕಳೆದಿದೆ. ಪ್ರತೀ ವರ್ಷ ಯಂತ್ರಗಳಸರ್ವೀಸ್ ಮಾಡಬೇಕಾಗಿತ್ತು. ಆದರೆ ಇದುವರೆಗೂ ಮಾಡಿಲ್ಲ. ಇದರಿಂದಉತ್ತಮವಾಗಿರುವ ಮಿಲ್ ಅನ್ನು ತಕ್ಷಣ ಆರಂಭಿಸಲು ಕ್ರಮ ವಹಿಸಬೇಕಾಗಿದೆ. ಜತೆಗೆ ಕೆಟ್ಟು ನಿಂತಿರುವ ಮತ್ತೂಂದು ಮಿಲ್ ಅನ್ನು ದುರಸ್ತಿಗೊಳಿಸಬೇಕಾಗಿದೆ.
2ನೇ ದಿನವೂ ಪರಿಶೀಲನೆ :
ಸೋಮವಾರ ಕಾರ್ಖಾನೆಗೆ ಭೇಟಿ ನೀಡಿದ್ದ ಪೂನಾದ ತಜ್ಞರ ತಂಡ ಪರಿಶೀಲನೆ ನಡೆಸಿ ಕಾರ್ಖಾನೆಯಲ್ಲಿ ಮೊಕ್ಕಾಂ ಹೂಡಿತ್ತು. ಮಂಗಳವಾರವೂ ತಜ್ಞರ ತಂಡ ಕಾರ್ಖಾನೆಯ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಅಲ್ಲದೆ, ಕಾರ್ಖಾನೆಯ ಆವರಣದ ಸುತ್ತ ಪ್ರದಕ್ಷಿಣೆ ಹಾಕಿ ಕಾರ್ಖಾನೆ ಹೊರ ಭಾಗದ ಸ್ವಚ್ಛತೆ, ಪರಿಸರ, ವಾತಾವರಣದ ಬಗ್ಗೆ ತಜ್ಞರತಂಡ ಮಾಹಿತಿ ಕಲೆ ಹಾಕಿತು. ಹಾಗೆಯೇ ಬುಧವಾರವೂ ಪರಿಶೀಲನೆ ನಡೆಯಲಿದೆ.
-ಎಚ್.ಶಿವರಾಜು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.