ಮೈಷುಗರ್ ಪುನಾರಂಭ: ಮತ್ತೆ ಗೊಂದಲ
Team Udayavani, Jul 16, 2021, 9:00 PM IST
ಮಂಡ್ಯ: ಮೈಷುಗರ್ ಕಾರ್ಖಾನೆ ಪುನರಾಂಭ ವಿಚಾರಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸರ್ಕಾರವೇನಡೆಸಲಿದೆ ಎಂಬ ಭರವಸೆ ಸಿಗುತ್ತಿದ್ದಂತೆ ಮತ್ತೆಗೊಂದಲಶುರುವಾಗಿದ್ದು,ಯಾವುದೇ ಸ್ಪಷ್ಟಘೋಷಣೆ ಇಲ್ಲದಿರುವುದರಿಂದ ರೈತರು ಆತಂಕ ಪಡುವಂತಾಗಿದೆ.ಕಳೆದ ವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿನೇತೃತ್ವದ ಜಿಲ್ಲೆಯ ಜನಪ್ರತಿನಿಧಿಗಳ ತಂಡ ಭೇಟಿ ನೀಡಿಸರ್ಕಾರಿಸ್ವಾಮ್ಯದಲ್ಲಿಯೇನಡೆಸುವಂತೆಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿತ್ತು.
ಆಗ ಸಿಎಂ ಯಡಿಯೂರಪ್ಪ ಖಾಸಗಿಯವರಿಗೆಗುತ್ತಿಗೆ ನೀಡುವುದಿಲ್ಲ. ಸರ್ಕಾರವೇನಡೆಸಲಿದೆ ಎಂದು ಭರವಸೆ ನೀಡಿದ್ದಾರೆಎಂದು ತಿಳಿಸಲಾಗಿತ್ತು. ಇದರಿಂದಮಂಡ್ಯ ಜಿಲ್ಲಾ ರೈತ ಹಿತರಕ್ಷಣಾಸಮಿತಿ ಒಂದು ಮೆಟ್ಟಿಲು ಗೆಲುವುಕಂಡಿದ್ದೇವೆ ಎಂದುನಿರಾಳರಾಗಿದ್ದರು.
ಸಚಿವರ ದ್ವಂದ್ವ ಹೇಳಿಕೆ: ಆದರೆ, ಆನಂತರ ಬಂದ ಸಚಿವರ ದ್ವಂದ್ವಹೇಳಿಕೆಗಳಿಂದಮತ್ತೆಗೊಂದಲಪ್ರಾರಂಭವಾಗಿದೆ.ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರಹೇಳಿಕೆಗಳುಜಿಲ್ಲೆಯ ರೈತರ ನಿರೀಕ್ಷೆಹುಸಿಯಾಗುವಂತೆಮಾಡಿದೆ. ಈ ನಡುವೆ ಹೋರಾಟಗಾರರು ಈ ಗೊಂದಲವನ್ನು ನಿವಾರಿಸಲು ಪ್ರಯತ್ನ ನಡೆಸುತ್ತಲೇಇದ್ದಾರೆ. ಆದರೆ ಇನ್ನೂ ಫಲಪ್ರದವಾಗಿಲ್ಲ.
ಅಧಿಕೃತ ಘೋಷಣೆಯಾಗದ ಭರವಸೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರಿಸ್ವಾಮ್ಯದಲ್ಲಿಯೇ ನಡೆಸಲು ಕ್ರಮ ವಹಿಸಲಾಗುವುದುಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿನಿಯೋಗಕ್ಕೆ ತಿಳಿಸಿದ್ದರು. ಭರವಸೆ ಕೊಟ್ಟು ವಾರಕಳೆದರೂ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ.ಇದರಿಂದ ಹೋರಾಟಗಾರರು, ಕಬ್ಬುಬೆಳೆಗಾರರಲ್ಲಿ ಗೊಂದಲವಿದ್ದು,ಆತಂಕ ಹೆಚ್ಚುವಂತೆ ಮಾಡಿದೆ.
ಒಗ್ಗಟ್ಟಾದ ಸಂಘಟನೆಗಳು:ಸರ್ಕಾರ ಖಾಸಗಿಯವರಿಗೆಗುತ್ತಿಗೆ ನೀಡಲುಮುಂದಾದಾಗ ಎಲ್ಲಸಂಘಟನೆಗಳು ಒಗ್ಗಟ್ಟುಪ್ರದರ್ಶನಕ್ಕೆ ಮುಂದಾಗಿವೆ.ಈಗಾಗಲೇ ಎಲ್ಲ ಸಂಘಟನೆಗಳುಸೇರಿ 40 ವರ್ಷಗಳ ಸುದೀರ್ಘ ಅವಧಿಗೆಗುತ್ತಿಗೆ ನೀಡುವ ಪದ್ಧತಿ ಕೈಬಿಡಬೇಕು ಎಂದುಒತ್ತಾಯಿಸಿವೆ. ಇದಕ್ಕೂ ಮೊದಲು ಸರ್ಕಾರ ಜಿಲ್ಲೆಯಸಂಘಟನೆಗಳು ಹೋರಾಟಗಾರರಲ್ಲಿಯೇಗೊಂದಲವಿದೆ.ಯಾವುದೇ ಸ್ಪಷ್ಟ ನಿಲುವು ತಾಳುತ್ತಿಲ್ಲ ಎಂದುಸಂಘಟನೆಗಳ ವಿರುದ್ಧವೇ ಬೊಟ್ಟು ಮಾಡಿತ್ತು.ಕೆಲವರು ಒ ಅಂಡ್ ಎಂ ಎಂದರೆ, ಕೆಲವುಸಂಘಟನೆಗಳು ಸರ್ಕಾರವೇ ನಡೆಸಬೇಕು ಎಂದು ಹಠಹಿಡಿದಿದ್ದವು. ಈ ವಾದವನ್ನೇ ಮುಂದಿಟ್ಟು ಕೊಂಡಸರ್ಕಾರ ಖಾಸಗಿಯವರಿಗೆ ಗುತ್ತಿಗೆ ನೀಡಲು ಆದೇಶಹೊರಡಿಸಿತ್ತು. ಇದನ್ನು ತಡೆಯಲು ಎಲ್ಲಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿವೆ.
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.