ಮೈಕ್ ಎದುರು ಟವಲ್ ಹಾಕೊಂಡು ಅಳಬೇಕಾ?
Team Udayavani, Mar 30, 2019, 3:12 PM IST
ಮದ್ದೂರು: ಮೈಕ್ ಎದುರು ಟವಲ್ ಹಾಕಿಕೊಂಡು ಅಳ್ಳೋ ಮೂಲಕ ನಮ್ಮ ನೋವನ್ನು ತೋರ್ಪಡಿಸಬೇಕೇ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಅಭಿಷೇಕ್ ಅಂಬರೀಶ್ ತಿರುಗೇಟು ನೀಡಿದರು.
ತಾಲೂಕಿನ ಮರಳಿಗ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ನಮ್ಮ ಮುಖದಲ್ಲಿ ನೋವು ಕಾಣಿ¤ಲ್ಲ ಅಂತ ಸಿಎಂ ಹೇಳಿದ್ದಾರೆ.
ಅಂಬರೀಶ್ ಇಲ್ಲದ ನೋವು ಏನು ಅಂತ ಅನುಭವಿಸುತ್ತಿರುವ ನಮಗೆ ಗೊತ್ತಿದೆ. ಆದರೂ, ನಾವು ಮೈಕ್ ಎದುರು ಅಳುವುದಿಲ್ಲ. ಜನರಿರುವಾಗ ನಾವೇಕೆ ಅಳಬೇಕು ಎಂದು ಹೇಳಿದರು.
ನೇರವಾಗಿ ಚುನಾವಣಾ ಹೋರಾಟ ನಡೆಸಿ ಗೆಲ್ಲಲಾಗುವುದಿಲ್ಲ ಎನ್ನುವುದು ಅವರಿಗೆ ಅರ್ಥವಾಗಿದೆ. ಅದಕ್ಕಾಗಿಯೇ ಮೂರು ಜನ ಸುಮಲತಾ ಹೆಸರಿನವರನ್ನು ಅಖಾಡಕ್ಕಿಳಿಸಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ನಾವು ದಡ್ಡರಲ್ಲ ಎನ್ನುವುದನ್ನು ಏ.18ಕ್ಕೆ ತೋರಿಸೋಣ.
ನಾವು ದುಡ್ಡು ಖರ್ಚು ಮಾಡ್ತಿದ್ದೇವೆ ಅಂತ ದೂರುತ್ತಾರೆ. ಆದರೆ, ನಾವು ಹಣ ಹಂಚುವವರಲ್ಲ. ಪ್ರೀತಿಯನ್ನು ಹಂಚುತ್ತೇವೆ. ಅವರು ಏನೇ ಗಿಮಿಕ್ ಮಾಡುತ್ತಿದ್ದಾರೆ ಎನ್ನುವುದನ್ನು ಗಮನಕ್ಕೆ ತಂದುಕೊಂಡು ಫೋಟೋ, ಹೆಸರು, ಚಿಹ್ನೆಯನ್ನು ಗಮನಕ್ಕೆ ತಂದುಕೊಂಡು ವೋಟ್ ಮಾಡಬೇಕು ಎಂದು ಹೇಳಿದರು.
ಸ್ತ್ರೀಶಕ್ತಿ ಏನು ಎನ್ನುವುದನ್ನು ನೀವು ಅವರಿಗೆ ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು. ಇಲ್ಲಿಯವರನ್ನು ಮದುವೆ ಆಗಿ ಮಂಡ್ಯದ ಅಳಿಯನಾಗಬೇಕಿಲ್ಲ.
ನಾನು ಮಂಡ್ಯದ ಮಗ ಎಂದು ನಿಖೀಲ್ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಅಭಿಷೇಕ್, ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿದೆ ಅಂತ ಸಚಿವರೊಬ್ಬರು ಹೇಳುತ್ತಾರೆ. ಇದು ಏನು ಲೆಕ್ಕಾಚಾರ ಅಂತ ಗೊತ್ತಾಗುತ್ತಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ಧಾಳಿ ನಡೆಸಿದರು.
ನನ್ನ ನೋವು ಜನತೆಗೆ ಗೊತ್ತಿದೆ: ಸುಮ
ಮದ್ದೂರು: ನನ್ನ ನೋವು ನನಗೆ ಗೊತ್ತಿದೆ. ಜನರಿಗೆ ಗೊತ್ತಿದೆ. ಅದನ್ನು ಎಲ್ಲರೆದುರು ಪ್ರದರ್ಶನ ಮಾಡಬೇಕಿಲ್ಲ ಎಂದು ಮಂಡ್ಯ ಲೋಕಸಭೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು. ತಾಲೂಕಿನ ಮರಳಿಗ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿ, ನನ್ನ ಮುಖದಲ್ಲಿ ನೋವಿನ ಛಾಯೆ ಕಾಣಿಸುತ್ತಿಲ್ಲ ಅಂತ ಹೇಳುತ್ತಿದ್ದಾರೆ.
ಅಂಬರೀಶ್ ಕಳೆದುಕೊಂಡ ನೋವು ಏನೆಂಬುದು ನನ್ನ ಮನಸ್ಸಿಗೆ, ಹೃದಯಕ್ಕೆ ಗೊತ್ತಿದೆ. ಅಂಬರೀಶ್ ಅವರನ್ನು ಪ್ರೀತಿಸುತ್ತಿದ್ದ ಜನರಿಗೆ ಗೊತ್ತಿದೆ. ಅದನ್ನು ಬಹಿರಂಗವಾಗಿ ಎಲ್ಲರೆದುರು ಪ್ರದರ್ಶನ ಮಾಡಬೇಕಿಲ್ಲ. ನನ್ನ ನೋವನ್ನು ಪ್ರದರ್ಶಿಸಿ ನಾನು ಯಾರನ್ನೂ ಮೆಚ್ಚಿಸಬೇಕಾಗಿಯೂ ಇಲ್ಲ ಎಂದು ಸಿಎಂ ಟೀಕೆಗೆ ತಿರುಗೇಟು ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.