ಸಿದ್ದರಾಮಯ್ಯ ನಾಳೆಯೇ ಸಿಎಂ ಆಗ್ಬೇಕಂತ ಯಾರೂ ಹೇಳ್ತಿಲ್ಲ
Team Udayavani, May 10, 2019, 4:24 PM IST
ಮಂಡ್ಯ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್‌ನ ಹಲವು ಶಾಸಕರು, ಮುಖಂಡರು ಬಯಸಿರುವುದು ನಿಜ. ಆದರೆ, ನಾಳೆ ಬೆಳಗ್ಗೆಯೇ ಕುಮಾರಸ್ವಾಮಿ ಅವರನ್ನು ಬದಲಾಯಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಅವರ್ಯಾರೂ ಹೇಳಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗಬೇಕೆನ್ನು ವವರ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಬೇಕು ಎಂದು ಜಾತ್ಯತೀತವಾಗಿ, ಪಕ್ಷಾತೀತವಾಗಿ ಬಯಸಿದ್ದಾರೆ. ಅದನ್ನು ತಪ್ಪು ಅಂತ ಹೇಳಿದರೆ ಅಂತಹವರಿಗೆ ಏನು ಹೇಳಬೇಕೂಂತ ಗೊತ್ತಾಗುತ್ತಿಲ್ಲ. ನಮಗೆ ಮುಂದಿನ ದಿನಗಳಲ್ಲಿ ಒಳ್ಳೆ ನಾಯಕ ಮುಖ್ಯಮಂತ್ರಿ ಹುದ್ದೆಗೇರಬೇಕು, ಎಲ್ಲಾ ವರ್ಗದ ವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಬೇಕು ಅಂತ ಹೇಳಿದ್ದಾರೆ. ಅದರಲ್ಲೇನು ತಪ್ಪು ಎಂದು ಗುರುವಾರ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
ಸಿದ್ದರಾಮಯ್ಯ ಎಲ್ಲರಿಗೂ ಇಷ್ಟ: ನಾಲ್ಕು ವರ್ಷಕ್ಕೆ ಚುನಾವಣೆಯಾಗಲೀ ಅಥವಾ ಒಂದು ವರ್ಷಕ್ಕೇ ಚುನಾವಣೆಯಾಗಲಿ ಸಿದ್ದರಾಮಯ್ಯ ಮುಂದೆ ಸಿಎಂ ಆಗಲಿ ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಸಿದ್ದರಾಮಯ್ಯನವರನ್ನು ಎಲ್ಲಾ ಶೋಷಿತ ವರ್ಗದವರೂ ಇಷ್ಟಪಡುತ್ತಾರೆ. ಕಳೆದ ಚುನಾವಣಾ ಸಮಯದಲ್ಲಿ ಸಿದ್ದ ರಾಮಯ್ಯನವರ ಬಗ್ಗೆ ಕೆಲವು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಅಸ ಮಾಧಾನವಿತ್ತು. ಅವರಿಗೂ ಈಗ ಅದು ಅರ್ಥವಾಗಿದೆ. ಸಿದ್ದರಾಮಯ್ಯ ಯಾವುದೇ ಜಾತಿ ವಿರೋಧಿಯಲ್ಲ. ಎಲ್ಲಾ ಜಾತಿಗಳ ಬಡವರ ಪರ ಇದ್ದಾರೆ. ಅವರ ಆvಳಿತ ಈಗಲೂ ರಾಜ್ಯಕ್ಕೆ ಅವಶ್ಯಕತೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪ್ಲಾನ್ ಮಾಡಿಲ್ಲ: ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಯಾವುದೇ ಪ್ಲಾನ್ ಮಾಡಿಕೊಂಡಿಲ್ಲ. ಸರ್ಕಾರ ನಡೆಸುವವರು ಸಹಾಯ ಮಾಡಿರುವವರ ಬಗ್ಗೆ ಕೃತಜ್ಞತಾ ಭಾವನೆ ಇಟ್ಟುಕೊಳ್ಳಬೇಕು. ಗೌರವದೊಂದಿಗೆ ವಿಶ್ವಾಸವಿಟುrಕೊಂಡು ಮುನ್ನಡೆದರೆ 5 ವರ್ಷ ಕುಮಾರಸ್ವಾಮಿ ಸಿಎಂ ಹುದ್ದೆ ಯಲ್ಲಿರುವುದಕ್ಕೆ ಅವಕಾಶವಿದೆ. ಆದರೆ, ಇರುವುದು, ಅದನ್ನು ಕಳೆದುಕೊಳ್ಳುವುದು, ಚುನಾವಣೆ ಘೋಷಣೆ ಮಾಡುವುದು ಎಲ್ಲವೂ ಕುಮಾರಸ್ವಾಮಿ ಅವರ ನಡತೆ ಮೇಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ನವರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳ ದಿದ್ದರೆ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂಬ ಸೂಚನೆಯನ್ನು ಪರೋಕ್ಷವಾಗಿ ನೀಡಿದರು.
ಮನ್‌ಮುಲ್ಗೆ ಚುನಾವಣೆ ನಡೆಸಿ: ಮಂಡ್ಯದಲ್ಲಿ ಈಗಾಗಲೇ ಮನ್‌ಮುಲ್ಗೆ ಚುನಾವಣೆ ನಡೆಯಬೇಕಿತ್ತು. ರಾಜ್ಯದ ಎಲ್ಲಾ ಕಡೆ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆಯಬಾರದು ಎಂದು ರಾಜ್ಯಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿ ಪರವಾಗಿ ಕೆಲಸ ಮಾಡಬೇಕು. ಆದರೆ, ಒಂದು ಪಕ್ಷದವರ ಏಜೆಂಟರ ರೀತಿ ಕೆಲಸ ಮಾಡುತ್ತಿರುವ ಸಹಕಾರ ಕ್ಷೇತ್ರದ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಮಾನ- ಮರ್ಯಾದೆ ಇದ್ದರೆ ಮೊದಲು ಮನ್‌ಮುಲ್ಗೆ ಚುನಾವಣೆ ನಡೆಸಲಿ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಚೆಲುವರಾಯಸ್ವಾಮಿ ಹೇಳಿದರು. ಮನ್‌ಮುಲ್ ಚುನಾವಣೆಗೆ ತಡೆ ಉಂಟು ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದರೆ ಜಿಲ್ಲೆಯ ಜನರು ಉಪವಾಸವಿರುವುದಿಲ್ಲ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಇತರೆ ಕಡೆಗಳಿಗಿಂತ ಉತ್ತಮವಾಗಿದೆ. ಈ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೆಚ್‌ಡಿಕೆ ಸೂಚನೆ ಕೊಡುವುದು ಸರಿಯಲ್ಲ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದುಕೊಂಡು ಒಂದು ರಾಷ್ಟ್ರೀಯ ಪಕ್ಷದವರಿಗೆ ಸೂಚನೆ ನೀಡುವುದು ಎಷ್ಟರಮಟ್ಟಿಗೆ ಸರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿ 80 ಸ್ಥಾನ ಗೆದ್ದವರಿಗೆ ನೀವು ಹೀಗೆ ನಡೆದುಕೊಳ್ಳಬೇಕು, ಹಾಗೇ ನಡೆದುಕೊಳ್ಳಬೇಕು ಎಂದು ಸೂಚನೆ ಕೊಡುತ್ತಾರೆ. ಆದರೆ ಅವರ ನಡವಳಿಕೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಯಾವುದೇ ಮೈತ್ರಿ ಸರ್ಕಾರದಲ್ಲಿ ನಾವು ಈ ರೀತಿಯ ನಡವಳಿಕೆಯನ್ನು ನೋಡಿಲ್ಲ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಅಸಮಾ ಧಾನ ಹೊರಹಾಕಿದರು.
ಹಣ ನುಂಗಿದವರು ಜೆಡಿಎಸ್‌ನವರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಭ್ರಷ್ಟಾಚಾರ ನಡೆಸಿ ಹಣ ನುಂಗಿದವರು ಶಿವಮೊಬ್ಬದ ಜೆಡಿಎಸ್ ಅಧ್ಯಕ್ಷ ಮಂಜುನಾಥ್‌ಗೌಡರು. ಈಗ ಅವರನ್ನು ವಿಚಾರಣೆಗೆ ಒಳಪಡಿಸಿದರೂ ಅವ್ಯವಹಾರ ಹೊರಗೆ ಬರುತ್ತದೆ ಎಂದು ಆರೋಪಿಸಿದ ಚಲುವರಾಯಸ್ವಾಮಿ, ಬ್ಯಾಂಕಿನ ಅಧ್ಯಕ್ಷರಾಗಿ ರಾಜಣ್ಣ ಅತ್ಯಂತ ಗೌರವಯುತವಾಗಿ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಅವ್ಯವಹಾರವಿಲ್ಲದೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದರೂ ಅದನ್ನು ಮುಚ್ಚಿಟ್ಟು ರಾಜಣ್ಣ ಅವರ ಮೇಲೆ ತಪ್ಪು ಹಾಕಬಹುದು. ಏಕೆಂದರೆ, ಕೋ-ಆಪರೇಟಿವ್ ಅಧಿಕಾರಿಗಳು ಹೆಣ್ಣನ್ನ, ಗಂಡು ಮಾಡ್ತಾರೆ, ಅವ್ವನ್ನ ಅಪ್ಪ ಮಾಡ್ತಾರೆ ಎಂದು ಟೀಕಿಸಿದರು.
ಮಂಡ್ಯ: ಚುನಾವಣೆಯಲ್ಲಿ ನಾವು ಯಾರ ಪÃವಾಗಿಯೂ ಕೆಲಸ ಮಾಡಿಲ್ಲ. ತಟಸ್ಥರಾಗಿ ಉಳಿದಿದ್ದೆವು. ನಾವು ಸೋತಿರುವವರು. ಜನ ನಮ್ಮನ್ನು ಬೇಡ ಎಂದು ತಿರಸ್ಕರಿಸಿದ್ದಾರೆ. ಅದರಿಂದ ನಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ ಎಂದು ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ನಾನು ನಮ್ಮ ಕಾರ್ಯಕರ್ತರನ್ನು ಕರೆದು ಸುಮಲತಾ ಪರ ಕೆಲಸ ಮಾಡಬೇಕು ಅಂತಾ ಸೂಚಿಸಿದ್ದಿರಿ ಅಂತ ಜೆಡಿಎಸ್‌ನವರು ಹೇಳುತ್ತಿದ್ದಾರೆ. ನಾನು ಯಾವ ರೀತಿ ಮುಕ್ತವಾಗಿ ಸುಮಲತಾ ಪರ ಚುನಾವಣೆ ಮಾಡಿದ್ದೇನೆ ಅಂತಾ ನೀವು ಹೇಳಬೇಕು. ನಮಗಾಗದವರು ಏನಾದ್ರೂ ಒಂದು ಹೇಳ್ತಾನೇ ಇರ್ತಾರೆ. ಮೊಸರಲ್ಲಿ ಕಲ್ಲು ಹುಡುಕೋದು ಅವರ ಸ್ವಭಾವ ಎಂದು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ತಟಸ್ಥವಾಗಿದ್ದೆವು: ಶ್ರೀರಂಗಪಟ್ಟಣದಲ್ಲಿ ಬಂಡಿಸಿದ್ದೇಗೌಡ ವಂಶಿಕರಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು. ಆ ವೇಳೆ ಕುಟುಂಬದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇಷ್ಟೆಲ್ಲಾ ಆದರೂ ಕೂಡ ಯಾಕೆ ಸುಮ್ಮನಿದ್ದೀರಿ. ನಮ್ಮನ್ನು ಸ್ವತಂತ್ರವಾಗಿ ಬಿಟ್ಟರೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು. ಆದರೂ ಚುನಾವಣೆಯಲ್ಲಿ ತಟಸ್ಥವಾಗಿದ್ದೆವು ಎಂದು ತಿಳಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರದಲ್ಲೂ ಜೆಡಿಎಸ್‌ನ ಎಂಟು ಜನ ಶಾಸಕರು, ಮೂರು ಜನ ಎಂಎಲ್ಸಿ ಇದ್ದಾರೆ. ಅವರಿಗಿಂತ ಚಿಕ್ಕವರು ನಾವು. ಅದರಲ್ಲೂ ಸೋತಿರೋರು. ಜನ ನಮ್ಮನ್ನು ಬೇಡ ಅಂತಾ ಹೇಳಿದ್ದಾರೆ. ಆದರಿಂದ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ ಎಂದರು.
ಕಾಂಗ್ರೆಸ್ಸಿಗರ ಟಾರ್ಗೆಟ್: ಮಂಡ್ಯ ಕಾಂಗ್ರೆಸ್ಸಿಗರನ್ನು ಸರ್ಕಾರ ಬಂದ ದಿನದಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಕಷ್ಟು ಸೀರಿಯಸ್ ಆಗಿ ಚುನಾವಣೆ ಮಾಡುತ್ತಿದ್ದೇವೆ. ಈ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು..
ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದು ಮೂರು ತಿಂಗಳು ಆಗಬೇಕಿತ್ತು. ಈವರೆಗೆ ಚುನಾವಣೆ ನಡೆಸಿಲ್ಲ. ಸೋಲು – ಗೆಲುವನ್ನು ಜನ ತೀರ್ಮಾನ ಮಾಡಿದ ಮೇಲೆ ಒಪ್ಪಿಕೊಳ್ಳಬೇಕು ಎಂದು ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.