ಕೊಡಗಹಳ್ಳಿಯಲ್ಲಿ ಆತಂಕ ಬೇಡ
Team Udayavani, May 9, 2020, 5:07 AM IST
ಮೇಲುಕೋಟೆ: ಕೋವಿಡ್ 19 ಸೋಂಕಿ ನಿಂದ ನಿರ್ಬಂಧಿತ ವಲಯವಾಗಿರುವ ಬಿ.ಕೊಡಗಹಳ್ಳಿ ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ಹೇಳಿದರು.
ಹೋಬಳಿಯ ಬಿ.ಕೊಡಗಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತರಕಾರಿ ಕಿಟ್ ವಿತರಿಸಿ ಮಾತನಾಡಿ, ಪಾಂಡವಪುರ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕಿ ಸೌಮ್ಯ ಮತ್ತು ಸಿಬ್ಬಂದಿ 10 ತರಕಾರಿಗಳ 13 ಕೆ.ಜಿಯುಳ್ಳ ಕಿಟ್‌ನ್ನು ಕೊಡಗಳ್ಳಿಯ 70 ಕುಟುಂಬಳಿಗೂ ಸ್ವಂತ ಖರ್ಚಿನಿಂದ ನೀಡಿದ್ದಾರೆ. ಪ್ರತಿಮನೆ ಬಾಗಿಲಿಗೂ ತರಕಾರಿ ಕಿಟ್ ವಿತರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಸಹಕಾರ ನೀಡುತ್ತಿರುವ ಇಸ್ಕಾನ್ ಆಹಾರ ಧಾನ್ಯಗಳ ಕಿಟ್ ನೀಡಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಕೋವಿಡ್ 19 ತೊಂದರೆಯಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ. ವೈರಸ್ ನಿಯಂತ್ರಣಕ್ಕೆ ಗ್ರಾಮಸ್ಥರು ಸ್ವಲ್ಪ ದಿನಗಳ ಮಟ್ಟಿಗೆ ತಾಳ್ಮೆ ವಹಿಸಿದರೆ ಎಂದಿನಂತೆ ಜೀವನ ಸಾಗಿಸಬಹುದು.ಗ್ರಾಮದ ಶಾಲಾ ಆವರಣದಲ್ಲಿ ತೆರೆದ ಕೋವಿಡ್ ಟೆಸ್ಟ್ ಬೂತ್‌ಗೆ ಪ್ರತಿಯೊಬ್ಬರೂ ಆಗಮಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಮನ್‌ಮುಲ್ ನಿರ್ದೇಶಕ ರಾಮಚಂದ್ರು, ಉಪವಿಭಾಗಾಧಿಕಾರಿ ಶೈಲಜಾ, ತಾಪಂ ಇಒ ಮಹೇಶ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.