ಒ ಆ್ಯಂಡ್ ಎಂ ಖಾಸಗೀಕರಣವಲ್ಲ
Team Udayavani, Jun 14, 2020, 4:52 AM IST
ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಒ ಆ್ಯಂಡ್ ಎಂಗೆ ನೀಡುವುದು ಖಾಸಗೀಕರಣದ ಮೊದಲ ಹೆಜ್ಜೆ ಎನ್ನುವುದು ತಪ್ಪು ಕಲ್ಪನೆ ಎಂದು ರೈತಸಂಘದ ಎಚ್. ತಮ್ಮೇಗೌಡ ಹೇಳಿದರು. ಮೈಷುಗರ್ ವ್ಯಾಪ್ತಿ ರೈತರಿಗೆ ರಾಜ ಕೀಯ ಮಾಡಲು ಬರುವುದಿಲ್ಲ. ಕೆಲವು ಸಂಘಟನೆಗಳ ಮುಖಂಡರು ಮೈಷು ಗರ್ ವಿಚಾರದಲ್ಲಿ ರಾಜಕೀಯ ಬೆರೆಸು ತ್ತಿದ್ದಾರೆ. ನಮಗೆ ಮೈಷುಗರ್ ಆರಂಭವಾಗಿ ಕಬ್ಬು ಅರೆಯುವುದಷ್ಟೇ ಮುಖ್ಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪ ಉತ್ಪನ್ನ ತಯಾರಿಸಿ: ಮೈಷುಗರ್ ವ್ಯಾಪ್ತಿಯಲ್ಲಿ 6.50 ಲಕ್ಷದಿಂದ 7 ಲಕ್ಷ ಟನ್ ಕಬ್ಬು ಬೆಳೆದುನಿಂತಿದೆ. ಕಳೆದ ಸಾಲಿ ನಲ್ಲಿ ಕಾರ್ಖಾನೆ ಆರಂಭವಾಗದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಆದ ಕಾರಣ ಖಾಸಗಿ, ಒ ಆ್ಯಂಡ್‌ಎಂ ಯಾವ ರೂಪದಲ್ಲಾದರೂ ಕಾರ್ಖಾನೆಗೆ ಚಾಲನೆ ನೀಡಬೇಕು. ಒ ಆ್ಯಂಡ್ ಎಂ ಎಂದರೆ ಖಾಸಗೀಕರಣ ಎಂಬಂತೆ ಬಿಂಬಿಸುತ್ತಿರುವು ದು ವಿಷಾದನೀಯ. ಕಾರ್ಖಾನೆ ಕೇವಲ ಸಕ್ಕರೆ ಉತ್ಪಾದಿಸುವುದಕ್ಕಷ್ಟೇ ಸೀಮಿತವಾಗದೇ ಉಪ ಉತ್ಪನ್ನಗಳು ಅಲ್ಲಿ ತಯಾರಾಗಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದು ತಪ್ಪುತ್ತದೆ ಎಂದರು.
ತನಿಖೆ ನಡೆಯಲಿ: ಮೈಷುಗರ್ ಭ್ರಷ್ಟಾಚಾರದ ತನಿಖೆ ನಡೆಯಲಿ. ಅದಕ್ಕೂ ಒ ಆ್ಯಂಡ್ ಎಂಗೂ ಯಾವ ಸಂಬಂಧವಿಲ್ಲ. ಒಂದೆಡೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಕಾರ್ಖಾನೆ ಪ್ರಗತಿ, ರೈತರಿಗೆ ಅನುಕೂಲವಾಗುವಂತೆ ಒ ಆ್ಯಂಡ್ ಎಂನಡಿ ಕಬ್ಬು ಅರೆಯುವುದಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಎಸ್.ಕೃಷ್ಣ, ಜಯಕರ್ನಾಟಕ ಸಂಘಟನೆಯ ಯೋಗಣ್ಣ, ಆನೆಕೆರೆ ಜಯರಾಮು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.