ಕುಂತಿಬೆಟ್ಟದಲ್ಲಿ ಒನಕೆಕಲ್ಲು ಪ್ರತಿಷ್ಠಾಪನೆ
Team Udayavani, Aug 7, 2020, 10:45 AM IST
ಪಾಂಡವಪುರ: ಪುರಾಣ ಪ್ರಸಿದ್ಧ ಕುಂತಿಬೆಟ್ಟದಲ್ಲಿ ದುಷ್ಕರ್ಮಿಗಳು ಒನಕೆ ಕಲ್ಲನ್ನು ಮುರಿದು ಹಾಕಿದ್ದರು. ಚಿಕ್ಕಾಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರ ನೆರವಿನೊಂದಿಗೆ ಒನಕೆ ಕಲ್ಲನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಯಿತು.
ನಾಲ್ಕು ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ 15.5 ಅಡಿ ಎತ್ತರ, 2.5 ಅಡಿ ಅಗಲದಲ್ಲಿ ನಿರ್ಮಿಸಲಾಗಿದ್ದ ಒನಕೆ ಕಲ್ಲನ್ನು ಚಿಕ್ಕಾಡೆ, ಹಿರೇಮರಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಟ್ಟಕ್ಕೆ ತೆರಳಿ ಒನಕೆ ಕಲ್ಲಿಗೆ ಪೂಜೆ ಸಲ್ಲಿಸಿ ಕಲ್ಲನ್ನು ಪ್ರತಿಷ್ಠಾಪನೆ ಮಾಡಲಾಯಿತು. ಬೆಟ್ಟದ ಕೆಳಗಿರುವ ಶ್ರೀಮಲ್ಲಿಕಾರ್ಜುನ ದೇಗುಲದಲ್ಲಿ ಅಭಿಷೇಕ ನೆರವೇರಿಸಿದರು.
ಶ್ರೀಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೂದ್ಧಾರ ಸಮಿತಿ ಅಧ್ಯಕ್ಷ ಡಾ.ಎಂ. ಮಾಯಿಗೌಡ, ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್, ಎಚ್.ವಿ. ಶ್ರೀಕಂಠೇ ಗೌಡ, ಯ.ಈರೇಗೌಡ, ಚಂದ್ರಶೇಖರ್, ನಿಂಗೇಗೌಡ, ಸೋಮೇಗೌಡ, ಬಸವೇ ಗೌಡ, ಮರೀದೇವೇಗೌಡ, ಸಿದ್ದೇಗೌಡ, ಡಿ.ಕೆ.ದೇವೇಗೌಡ, ನಂಜೇಗೌಡ, ಸ್ವಾಮೀಗೌಡ ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.