ಜೆಡಿಎಸ್ ಕೋಟೆಯಲ್ಲಿ ಆಪರೇಷನ್ ಕಮಲ ಭೀತಿ?
ಕೆ.ಆರ್.ಪೇಟೆ ಶಾಸಕರ ಮೇಲೆ ಬಿಜೆಪಿ ಕಣ್ಣು • ಮತ್ತೂಬ್ಬ ಶಾಸಕರನ್ನೂ ಸೆಳೆಯಲು ತಂತ್ರಗಾರಿಕೆ
Team Udayavani, Apr 26, 2019, 3:42 PM IST
ಮಂಡ್ಯ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪರ್ವ ಮುಗಿದ ಬಳಿಕ ಆಪರೇಷನ್ ಕಮಲ ಪ್ರಕ್ರಿಯೆ ಪುನರಾರಂಭಗೊಂಡಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಕೂಡ ಆಪರೇಷನ್ ಕಮಲ ಭೀತಿ ಕಾಣಿಸಿಕೊಂಡಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರನ ವಿರುದ್ಧ ಪ್ರಸಿದ್ಧ ಚಿತ್ರನಟ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧೆಯ ಕಾರಣಕ್ಕಾಗಿಯೇ ರಾಜ್ಯದಲ್ಲೇ ಹೈವೋಲೆrೕಜ್ ಕದನವಾಗಿ ಮಾರ್ಪ ಟ್ಟಿದ್ದ ಮಂಡ್ಯ ಕ್ಷೇತ್ರದಲ್ಲಿ ಈಗ ಚುನಾವಣೆಯ ನಂತರ ಮತ್ತೆ ಆಪರೇಷನ್ ಕಮಲದ ಗುಸುಗುಸು ಶುರುವಾಗಿದೆ.
ನಿಖೀಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಜಿದ್ದಾಜಿದ್ದಿನ ಹೋರಾಟವೇ ನಡೆದಿದ್ದು, ಸಾರ್ವಜನಿಕವಾಗಿ ಇನ್ನೂ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪದಚ್ಯುತಿಯ ಹೋರಾಟವನ್ನು ಬಿಜೆಪಿ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಮಂಡ್ಯದ ಜೆಡಿಎಸ್ ಶಾಸಕರು ಯಾರಾದರೂ ಒಂದಿಬ್ಬರು ಶಾಸಕರು ಕೈ ಜೋಡಿಸುತ್ತಾರಾ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿದೆ.
ನಿಖೀಲ್ ಸ್ಪರ್ಧೆಯ ಕಾರಣಕ್ಕಾಗಿಯೇ ಚುನಾವಣಾ ಸಂದರ್ಭದಲ್ಲಿ ಒಂದು ವಾರಕ್ಕೂ ಹೆಚ್ಚಿನ ಕಾಲ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಸಂಚಲನವನ್ನು ಉಂಟು ಮಾಡಿದ್ದರು. ಕೆಲವು ಶಾಸಕರ ಅಸಮ್ಮತಿಯ ನಡುವೆಯೂ ನಿಖೀಲ್ ಸ್ಪರ್ಧೆಗೆ ಉತ್ಸಾಹ ತೋರಿದ್ದು ಚುನಾವಣೆಯ ನಂತರ ಜೆಡಿಎಸ್ ಪಕ್ಷದ ಮೇಲೆ ಪ್ರಭಾವ ಬೀರಲಿದೆಯೇ ಎಂಬುದು ಕೂಡ ಮತ್ತೂಂದು ಪ್ರಶ್ನೆಯಾಗಿದೆ.
ಸ್ಥೈರ್ಯದ ರಾಜಕಾರಣ: ಈಗಾಗಲೇ ಜೆಡಿಎಸ್ ವರಿಷ್ಠರ ನಿಲುವುಗಳ ವಿರುದ್ಧ ಸಿಡಿದು ಪಕ್ಷ ತೊರೆದಿರುವ ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಚುನಾವಣಾ ಚಂಡಮಾರುತದಲ್ಲಿ ಕೊಚ್ಚಿ ಹೋಗಿದ್ದರೂ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆಯಿಂದಾಗಿ ಮತ್ತೂಮ್ಮೆ ಸ್ಥೈರ್ಯದ ರಾಜಕಾರಣ ನಡೆಸಿದ್ದು, ಒಂದು ವೇಳೆ ಸುಮಲತಾ ಗೆಲುವು ಸಾಧಿಸಿದರೆ ಜಿಲ್ಲೆಯಲ್ಲಿ ಕೂಡ ರಾಜಕೀಯವಾಗಿ ಕೆಲವು ಮಹತ್ವದ ಬದಲಾವಣೆಗಳು ಕಂಡುಬರುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.
ವರಿಷ್ಠರೊಡನೆ ಶೀತಲಸಮರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾದ ಅಲೆ ಇದ್ದ ಕಾರಣದಿಂದಾಗಿ ಪಕ್ಷದ ಶಾಸಕರು ವರಿಷ್ಠರ ನಿಲುವಿಗೆ ಬದ್ಧತೆಯನ್ನು ಪ್ರದರ್ಶಿಸಿದ್ದರು.
ಪಕ್ಷದ ನಿಲುವನ್ನು ಧಿಕ್ಕರಿಸಿ ಹೊರನಡೆದಿರುವ ಚಲುವರಾಯಸ್ವಾಮಿ ಮತ್ತು ರಮೇಶ್‌ಬಾಬು ಅವರಿಗೆ ಆದಂತಹ ಸೋಲಿನ ಶಿಕ್ಷೆ ನಮಗೂ ಆಗಬಹುದು ಎಂಬ ಭಯ ಜೆಡಿಎಸ್ ಶಾಸಕರು ಹೊಂದಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರೋಧಿ ಅಲೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ವರಿಷ್ಠರೊಡನೆ ಶೀತಲ ಸಮರ ನಡೆಸುತ್ತಿರುವ ಕೆಲವು ಜೆಡಿಎಸ್ ಶಾಸಕರು ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷಾಂತರ ತೀರ್ಮಾನ ತೆಗೆದುಕೊಳ್ಳಬಹುದೇ ಎಂಬ ಅನುಮಾನಗಳು ಸಹಜವಾಗಿ ಮೂಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.