ಸಾವಯವ ಭತ್ತ ಬೆಳೆದು ಯಶಸ್ವಿ

Team Udayavani, Dec 13, 2020, 7:17 PM IST

ಸಾವಯವ ಭತ್ತ ಬೆಳೆದು ಯಶಸ್ವಿ

ಮಂಡ್ಯ: ರಾಸಾಯನಿಕ ಗೊಬ್ಬರ ಬಳಸಿ ಭತ್ತ ಬೆಳೆದು ಇಳುವರಿ ಕುಂಠಿತದಿಂದ ಬೇಸತ್ತು, ನಂತರ ಸಾವಯವ ಗೊಬ್ಬರ ಬಳಸಿ, ಭತ್ತ ಬೆಳೆದು ಉತ್ತಮ ಇಳುವರಿ ಕಂಡು ಯಶಸ್ವಿಯಾಗಿದ್ದಾರೆ ಪ್ರಗತಿಪರ ರೈತ ಎಂ.ಜೆ.ರಮೇಶ್‌ಪಟೇಲ್‌.

ಮಳವಳ್ಳಿ ತಾಲೂಕಿನ ನಾಗೇಗೌಡನದೊಡ್ಡಿ ಗ್ರಾಮದ ರೈತ ಎಂ.ಜೆ.ರಮೇಶ್‌ಪಟೇಲ್‌, ತನಗಿರುವ 20 ಗುಂಟೆ ಜಮೀನಿನಲ್ಲಿ ಉತ್ತಮಸಾವಯವ ಭತ್ತ ಬೆಳೆ ಬೆಳೆದಿದ್ದಾರೆ. ಈಗ ಅದುಉತ್ತಮ ಫಸಲು ನೀಡಿದೆ. ರಾಸಾಯನಿಕ ಗೊಬ್ಬರದಿಂದ ಬೆಳೆ ನಷ್ಟ: ಕಳೆದ 10 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ.

ಮೊದಲು ಭತ್ತ ನಾಟಿ ಮಾಡುತ್ತಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ಸರಿಯಾದ ಸಮಯಕ್ಕೆ ಕಾಲುವೆಯಲ್ಲಿ ನೀರು ಬರುತ್ತಿರಲಿಲ್ಲ. ಇದರಿಂದ ವಿಳಂಬವಾಗಿ ನಾಟಿ ಮಾಡುವ ಅನಿವಾರ್ಯತೆ ಎದುರಾಗುತ್ತಿತ್ತು. ಇದರಿಂದಇಂಗಾಲದಲ್ಲಿ ಭತ್ತ ನಾಟಿ ಮಾಡುತ್ತಿದ್ದರಿಂದ ಬೆಳೆ ಕುಂಠಿತವಾಗುತ್ತಿತ್ತು. ಇದಕ್ಕಾಗಿ ಎಷ್ಟೇ ರಾಸಾಯನಿಕ ಗೊಬ್ಬರ ನೀಡಿದರೂ ಇಳುವರಿ ಕುಂಠಿತವಾಗುತ್ತಿತ್ತು. ಇದರ ಜತೆಗೆ ಭತ್ತದ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಎಷ್ಟೇ ಕ್ರಿಮಿನಾಶಕ ಬಳಸಿದರೂ ರೋಗ ಹತೋಟಿಗೆ ಬರುತ್ತಿರಲಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು.

ಸಾವಯವ ಭತ್ತಕ್ಕೆ ಆದ್ಯತೆ: ಅದಕ್ಕಾಗಿ ಈ ಬಾರಿ ಸಾವಯವ ಭತ್ತ ಬೆಳೆಯುವ ನಿರ್ಧಾರ ಮಾಡಿ ಅದರಂತೆ ಮೈಸೂರಿನಿಂದ ದೇಶಿ ತಳಿಯ ಬಿತ್ತನೆ ಭತ್ತ ತಂದು ಸಾವಯವ ಕೃಷಿ ಮಾಡಲು ಮುಂದಾದರು. ಇದಕ್ಕೂ ಮುನ್ನ ಗದ್ದೆಗೆ ಒಂದು ಟ್ರ್ಯಾಕ್ಟರ್‌ ಎಮ್ಮೆ ಗೊಬ್ಬರಹಾಕಿಭೂಮಿ ಫಲವತ್ತತೆ ಬರುವಂತೆ ಮಾಡಿದ್ದರು. ನಂತರ ಪೂರ್ವ ಮುಂಗಾರಿನಲ್ಲಿಚಂಬೆ, ಸೆಣಬುಹಾಗೂಹುರುಳಿ ಚೆಲ್ಲಿದ್ದರು. ಆ ಬೆಳೆಗಳು ಉತ್ತಮ ಫಸಲು ನೀಡಿತು.

ಮನೆಯಿಂದಲೇ ಎಲ್ಲ ತಯಾರಿ: ಆಗಸ್ಟ್‌ನಲ್ಲಿ ಗದ್ದೆ ಹದ ಮಾಡಿ ಒಟ್ಲು ಮಾಡಿ ದೇಶಿ ತಳಿ ಸೇಲಂ ಸಣ್ಣ ಭತ್ತ ಬಿತ್ತನೆ ಮಾಡಿದರು. ಬಿತ್ತನೆ ಜತೆಯಲ್ಲಿ ಬೇವಿನ ಹಿಂಡಿಯನ್ನು ಕೊಡಲಾಗಿತ್ತು. ಅದಾದ 28 ದಿನಗಳ ನಂತರ ಭತ್ತ ನಾಟಿ ಮಾಡಿಸಲಾಯಿತು. ಆದರೆ, ನಾಟಿ ಮಾಡಿದ 15 ದಿನಕ್ಕೆ ಬಿಳಿ ಸೋಗು ರೋಗ ಅಂಟಿತು. ತಕ್ಷಣ ಮನೆಯಲ್ಲಿ ತಯಾರಿಸಿದ್ದ ಜೀವಾಮೃತ ಸಿಂಪಡಿಸಿದಾಗ ರೋಗ ನಿಯಂತ್ರಣಕ್ಕೆ ಬಂದಿತು.

ಭತ್ತದ ಒಡೆ ಬರುವ ಹೊತ್ತಿಗೆ ಸಾವಯವ ಬೆಲ್ಲ ಹಾಗೂ ಪರಂಗಿ ಹಣ್ಣಿನ ಮಿಶ್ರಣವನ್ನು7 ದಿನಗಳಕಾಲ ಕೊಳೆಸಿ ಸಿಂಪಡಿಸಿದ್ದಾರೆ. ನಂತರ ಭತ್ತದ ಸೋಗುಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು. ಅದಾದ ಬಳಿಕ ಮನೆಯಲ್ಲಿ ತಯಾರಿಸಿದ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸಿನ ಕಾಯಿಯ ಮಿಶ್ರಣವನ್ನು ಸಿಂಪಡಿಸಿದಾಗ ಉತ್ತಮ ಫಸಲು ಬಂದಿದೆ ಎಂದು ಖುಷಿಯಿಂದ ಹೇಳುತ್ತಾರೆ ರೈತ ರಮೇಶ್‌ ಪಟೇಲ್‌.

ಅರಣ್ಯ ಕೃಷಿಗೂ ಆದ್ಯತೆ :  ಸಾವಯವಭತ್ತದ ಜತೆಗೆ ಇರುವ 20 ಗುಂಟೆ ಜಮೀನಿನಲ್ಲೇ ಅರಣ್ಯ ಕೃಷಿಗೂಆದ್ಯತೆ ನೀಡಿದ್ದಾರೆ. ತೇಗ, ಹುಣಸೆ, ಹೆಬ್ಬೇವು, ರಕ್ತ ಚಂದನ ಹಾಗೂಸಿಲ್ವರ್‌ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇರುವ 20 ಗುಂಟೆ ಜಮೀನಿನಲ್ಲಿ ಏನು ಮಾಡಲು ಸಾಧ್ಯ ಎನ್ನುವ ಮಂದಿಗೆ ರೈತ ರಮೇಶ್‌ ಪಟೇಲ್‌ ಮಾದರಿಯಾಗಿದ್ದಾರೆ.

ಸಾಕಷ್ಟು ರಾಸಾಯನಿಕ ಗೊಬ್ಬರ ಹಾಕಿ ಭೂಮಿ ಫಲವತ್ತತೆ ಜತೆಗೆ ಭತ್ತದ ಬೆಳೆಯೂ ಕುಂಠಿತವಾಗಿ, ಇಳುವರಿ ಬರುತ್ತಿರಲಿಲ್ಲ. ಇದರಿಂದ ನಷ್ಟ ಅನುಭವಿಸುತ್ತಿದ್ದೆನು. ಆದರೆ, ಸಾವಯವ ಭತ್ತ ಬೆಳೆಯಿಂದ ಉತ್ತಮ ಫಸಲು ಬಂದಿರುವುದು ಖುಷಿ ತಂದಿದೆ. ಇದರ ಜತೆಗೆ ಅರಣ್ಯಕೃಷಿಗೂ ಆದ್ಯತೆ ನೀಡಿದ್ದೇನೆ. ಎಂ.ಜೆ.ರಮೇಶ್‌ ಪಟೇಲ್‌, ರೈತ, ನಾಗೇಗೌಡನದೊಡ್ಡಿ

ಟಾಪ್ ನ್ಯೂಸ್

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.