ಸಭೆಗೆ ಗೆ ಶಾಸಕರಿಗೂ ಗೈರಾಗಿದ್ದಕ್ಕೆ ಮಳಿಗೆಗೆ ಬೀಗ
Team Udayavani, Apr 30, 2022, 2:57 PM IST
ಪಾಂಡವಪುರ: ವಾಣಿಜ್ಯ ಮಳಿಗೆಗಳನ್ನು ನೆಲ ಸಮಗೊಳಿಸಿ, ಮರು ನಿರ್ಮಾಣ ಮಾಡುವ ಸಂಬಂಧ ಕರೆದಿದ್ದ ಸಭೆಗೆ ವ್ಯಾಪಾ ರಸ್ಥರು ಗೈರಾಗಿದ್ದು, ಈ ವೇಳೆ ಉಪವಿಭಾಗಾಧಿ ಕಾರಿಗಳ ನೇತೃತ್ವದಲ್ಲಿ ಮಳಿಗೆಗಳಿಗೆ ಬೀಗ ಹಾಕಲು ಮುಂದಾದಾಗ ವ್ಯಾಪಾರಸ್ಥರು, ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಪುರಸಭೆಗೆ ಸೇರಿದ 82 ವಾಣಿಜ್ಯ ಮಳಿಗೆಗಳ ಪೈಕಿ ಕಚೇರಿ ಮುಂಭಾಗದಲ್ಲಿರುವ 19 ಮಳಿಗೆಗಳನ್ನು ನೆಲಸಮ ಮಾಡಿ, ಆ ಜಾಗದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿ ಮಳಿಗೆಗಳನ್ನು ಮರು ಹಂಚಿಕೆ ಮಾಡುವ ಸಂಬಂಧ ಶುಕ್ರವಾರ ಶಾಸಕ ಸಿ.ಎಸ್ .ಪುಟ್ಟರಾಜು ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ಸಭೆ ಪುರಸಭೆ ಆವರಣದಲ್ಲಿ ಕರೆಯಲಾಗಿತ್ತು.
ಮಾತಿನ ಚಕಮಕಿ: ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದರೂ ವ್ಯಾಪಾರಸ್ಥರು ಗೈರಾದ ಹಿನ್ನೆಲೆಯಲ್ಲಿ ಉಪವಿಭಾಗಾಧಿ ಕಾರಿ ಬಿ.ಸಿ. ಶಿವಾನಂದಮೂರ್ತಿ, ಪೊಲೀಸ್ ಭದ್ರತೆಯಲ್ಲಿ ಎಲ್ಲಾ ಅಂಗಡಿಗಳಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ವ್ಯಾಪಾರಸ್ಥರು ಮತ್ತು ಅಧಿ ಕಾರಿಗಳ ನಡುವೆ ಮಾತನ ಚಕಮಕಿ ನಡೆದು ತಳ್ಳಾಟ ನೂಕಾಟ ನಡೆಯಿತು.
ಕೇವಲ 200 ರೂ. ಬಾಡಿಗೆ: ಕಳೆದ ನಾಲ್ಕು ದಶಕಗಳ ಹಿಂದೆ ವಾಣಿಜ್ಯ ಮಳಿಗೆ ಪಡೆದವರು, ಈ ಹಿಂದೆ ನಿಗದಿ ಆಗಿರುವ ಬಾಡಿಗೆಯನ್ನೇ ಪಾವತಿಸುತ್ತಿದ್ದು, ಇದು 200 ರೂ. ಅಸುಪಾಸಿ ನಲ್ಲಿದೆ. ಆದರೆ, ಕೆಲ ಮೂಲ ಬಿಡ್ಡುದಾರರು ತಾವು ಪಡೆದ ಮಳಿಗೆಯನ್ನು ಮತ್ತೂಬ್ಬರಿಗೆ ಅಕ್ರಮವಾಗಿ ಲಕ್ಷಾಂತರ ರೂ. ಪಡೆದು ಭೋಗ್ಯಕ್ಕೆ ನೀಡಿದ್ದಾರೆ. ಇನ್ನು ಕೆಲವರು 8 ರಿಂದ 10 ಸಾವಿರ ರೂ.ಗೆ ಬಾಡಿಗೆ ಪಡೆಯುತ್ತಿದ್ದು, ಪುರಸಭೆಗೆ ಮಾತ್ರ ನೂರರ ಲೆಕ್ಕದಲ್ಲಿ ಪಾವ ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಶಾಸಕ ಸಿ.ಎಸ್.ಪುಟ್ಟರಾಜು ವ್ಯಾಪಾರಸ್ಥರಿಗೆ ತಿಳಿವಳಿಕೆ ಹೇಳಿ, ಕಟ್ಟಡ ಮರು ನಿರ್ಮಾಣ ಮಾಡಿ ಹೊಸ ಬಾಡಿಗೆ ಕರಾರು ಆಧಾರದ ಮೇಲೆ ಮೂಲ ಬಿಡ್‌ದಾರರು, ವ್ಯಾಪಾರಸ್ಥರಿಗೆ ಮರು ಹಂಚಿಕೆ ಮಾಡುವ ಸಂಬಂಧ ಸಭೆ ಕರೆದಿದ್ದರು.
ಮೂರು ದಿನ ಅವಕಾಶ ನೀಡಿ: ವಾಣಿಜ್ಯ ಮಳಿಗೆಗಳ ಬಾಗಿಲು ಬಂದ್ ಮಾಡಿಸುವ ಅಧಿಕಾರಿಗಳ ದಿಢೀರ್ ನಿರ್ಧಾರದಿಂದ ಕಂಗೆಟ್ಟ ವ್ಯಾಪಾರಸ್ಥರು, ಬಳಿಕ ಸಭೆಗೆ ಹಾಜರಾಗಿ ತಮ್ಮ ಅಳಲನ್ನು ತೋಡಿಕೊಂಡು, ಮೂರು ದಿನ ಅವಕಾಶ ನೀಡುವಂತೆ ಅಧಿ ಕಾರಿಗಳು ಮತ್ತು ಶಾಸಕ ಬಳಿ ಮನವಿ ಮಾಡಿಕೊಂಡರು.
ಯಾರಿಗೂ ಮೋಸ ಮಾಡುವ ಉದ್ದೇಶವಿಲ್ಲ: ಈ ವೇಳೆ ಶಾಸಕ ಸಿ.ಎ.ಸ್.ಪುಟ್ಟರಾಜು ಮಾತನಾಡಿ, ಪುರಸಭೆ ಆಡಳಿತ ಮಂಡಳಿ ಪಕ್ಷಾತೀತವಾಗಿ ಕೈಗೊಂಡಿರುವ ನಿರ್ಧಾರದಂತೆ ವಾಣಿಜ್ಯ ಮಳಿಗೆ ತೆರವು ಮಾಡಿಸಿ, ಮರು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ವ್ಯಾಪಾರಸ್ಥರು ಸಹಕರ ನೀಡಬೇಕು. ಇದರಲ್ಲಿ ಯಾರಿಗೂ ಮೋಸ ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು.
ಪೊಲೀಸ್ ಭದ್ರತೆಯಲ್ಲಿ ನೆಲಸಮ: ಮೂಲ ವ್ಯಾಪಾರಸ್ಥರು ಯಾರಿದ್ದಾರೋ ಅವರಿಗೆ ಮಳಿಗೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಪುರಸಭೆ ಆದಾಯವೂ ಹೆಚ್ಚಲಿದೆ. ನಮ್ಮ ತೀರ್ಮಾನಕ್ಕೆ ಬೆಲೆಕೊಡದಿದ್ದರೆ ಜೆಸಿಬಿ ಯಂತ್ರದ ಮೂಲಕ ಪೊಲೀಸ್ ಬಿಗಿಭದ್ರತೆ ಯಲ್ಲಿ ನೆಲಸಮ ಮಾಡಲಾಗುವುದು ಎಂದು ಎಚ್ಚರಿಸಿದರು.
ಸರ್ವೆ ಮಾಡಿಸಿ ತೆರವು: ವಾಣಿಜ್ಯ ಮಳಿಗೆಗಳು ಸಂತೆಮೈದಾನಕ್ಕೆ ಹೊಂದಿ ಕೊಂಡಂತೆ ಇದ್ದು, ಒತ್ತುವರಿಯಾಗಿದೆ. ಒತ್ತುವರಿದಾರರು ಯಾವುದೇ ಪಕ್ಷವಾದರೂ ಸರಿಯೇ ಮೂಲಾಜಿಲ್ಲದೇ ತೆರವು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಸಂತೆ ಮೈದಾನ ನಾಲ್ಕು ಎಕರೆ ಜಾಗ ಒತ್ತುವರಿಯನ್ನು ಸರ್ವೆ ಮಾಡಿಸಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಒಳಚರಂಡಿ ಮಲಿನ ನೀರು ಸಂಸ್ಕರಣಾ ಘಟಕಕ್ಕೆ ಪಕ್ಕದಲ್ಲಿರುವ ಜಮೀನಿಗೆ ತೊಂದರೆ, ಆಟೋ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ಪುರಸಭೆ ವಿಧಿ ಸಿರುವ ಸುಂಕ ರದ್ದತಿ, ನೀರುಗಂಟಿಗಳ ಮಾಸಿಕ ಸಂಬಳ ಪಾವತಿ ಸೇರಿ ಹತ್ತು ಹಲವು ವಿಚಾರಗಳು ಚರ್ಚೆಗೆ ಬಂದವು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಸ್.ಎಲ್.ನಯನಾ, ಪುರಸಭೆ ಮುಖ್ಯಾಧಿಕಾರಿ ವೀಣಾ, ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಸದಸ್ಯರಾದ ಮಹಾತ್ಮಗಾಂಧಿ ನಗರ ಚಂದ್ರು, ಪಾರ್ಥ ಸಾರಥಿ, ಜಯಲಕ್ಷ್ಮಮ್ಮ, ಆರ್.ಸೋಮ ಶೇಖರ್, ಎಲ್.ಅಶೋಕ್, ಎಚ್.ಡಿ.ಶ್ರೀಧರ, ಡೇರಿ ರಾಮು, ಶ್ರೀನಿವಾಸ ನಾಯಕ, ಜೆಡಿಎಸ್ ಎಸ್‌ಸಿ ಘಟಕದ ಕಾರ್ಯಾಧ್ಯಕ್ಷ ಚಂದ್ರು ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.